
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪರಸ್ಪರ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಕೆಲವು ಸ್ಪರ್ಧಿಗಳ ನಡುವೆ ಈ ಸ್ಪರ್ಧೆ ಒಂದು ಹೆಜ್ಜೆ ಮುಂದೆ ಹೋಗಿ ಜಿದ್ದಾಗಿ ಪರಿಣಮಿಸುತ್ತದೆ. ಈ ಬಾರಿ ಈ ಜಿದ್ದು ಗಗನ್ ಮತ್ತು ಗಾನವಿ ನಡುವೆ ಶುರುವಾದಂತಿದೆ. ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಎದುರು ಈ ಇಬ್ಬರು ಸ್ಪರ್ಧಿಗಳು ಪರಸ್ಪರರ ಮೇಲೆ ಚಾಲೆಂಜ್ ಮಾಡಿಕೊಂಡಿದ್ದಾರೆ. ಇಬ್ಬರೂ ಸಹ ಇನ್ನೊಬ್ಬರನ್ನು ಮನೆಯಿಂದ ಹೊರಗೆ ಕಳಿಸಿಯೇ ಸಿದ್ಧ ಎಂದು ತೊಡೆತಟ್ಟಿದ್ದಾರೆ.
ನಿಮಗೆ ಹರ್ಟ್ ಮಾಡಿದ ವ್ಯಕ್ತಿಯ ಚಿತ್ರ ಇಟ್ಟು ಕಾರಣ ನೀಡಿ ಚಿತ್ರವನ್ನು ಒಡೆಯಬೇಕು ಎಂದು ಸುದೀಪ್ ಹೇಳಿದ್ದರು. ಗಾನವಿ ಅವರು ಮೊದಲಿಗೆ ಗಗನ್ ಚಿತ್ರ ಇಟ್ಟು, ಟಾಸ್ಕ್ ಒಂದನ್ನು ಆಡುವಾಗ, ‘ಗಗನ್ ನನಗೆ ಇನ್ಮೇಲೆ ಕೊಡ್ತಾ ಇರ್ತೀನಿ ಇಸ್ಕೋತಾ ಇರು’ ಎಂದು ಹೇಳಿದ್ದ. ಅಂದು ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ. ಆದರೆ ಅದು ಉಲ್ಟಾ; ಇಷ್ಟು ದಿನ ನೀನು ಕೊಟ್ಟಿದ್ದೀಯ, ಇನ್ನು ಮುಂದೆ ನಾನು ಕೊಡ್ತೀನಿ, ನೀನು ಇಸ್ಕೋತಾ ಇರು’ ಎಂದರು.
ಅದಾದ ಮೇಲೆ ಬಂದ ಗಗನ್ ಸಹ ಗಾನವಿಯ ಫೋಟೊ ಅನ್ನೇ ಅಂಟಿಸಿ, ‘ಗಾನವಿ ಇಷ್ಟೆಲ್ಲ ಮಾತನಾಡಿದ್ದಾರೆ ಎಂದರೆ ನಾನೂ ಸಹ ಎಲ್ಲದಕ್ಕೂ ರೆಡಿಯಾಗಿದ್ದೇನೆ. ಇನ್ಮೇಲೆ ಯುದ್ಧ ಶುರು; ನಾನೋ, ಗಾನವಿಯೋ ನೋಡೇ ಬಿಡೋಣ’ ಎಂದು ಸವಾಲು ಹಾಕಿದರು.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹೊಸ ವಿವಾದ; ವಿಕೆಂಡ್ನಲ್ಲಿ ಚರ್ಚೆ ಆಗಬೇಕು ಎಂದ ನೆಟ್ಟಿಗರು
ಗಗನ್ ಮತ್ತು ಗಾನವಿ ನಡುವೆ ಆಗಾಗ್ಗೆ ಮನೆಯಲ್ಲಿ ಜಗಳ ನಡೆಯುತ್ತಲೇ ಇರುತ್ತದೆ. ‘ಯಾರಿಗೆ ಯಶಸ್ಸು ಸಿಗುತ್ತದೆ, ಯಾರು ಗೆಲ್ಲುತ್ತಿರುತ್ತಾರೆ ಅಂತಹವರ ಜೊತೆ ಮಾತ್ರವೇ ಇರುತ್ತಾರೆ; ಅವರ ಯಶಸ್ಸು, ಗೆಲುವು ಕಡಿಮೆ ಆಗುತ್ತಿದ್ದಂತೆ ಅವರಿಂದ ದೂರ ಹೋಗಿ ಬೇರೆಯವರ ಜೊತೆ ಸೇರಿಕೊಳ್ಳುತ್ತಾರೆ. ಪ್ರತಿಯೊಬ್ಬರನ್ನೂ ದಾಳವನ್ನಾಗಿ ಬಳಸಿಕೊಂಡು ಆಟ ಆಡುತ್ತಿದ್ದಾರೆ’ ಎಂದು ಗಗನ್ ಆರೋಪ ಮಾಡಿದ್ದಾರೆ. ಗಾನವಿ ಸಹ ಗಗನ್‌ಗೆ ವ್ಯಕ್ತಿತ್ವ ಇಲ್ಲ ಇತ್ಯಾದಿ ಆರೋಪಗಳನ್ನು ಮಾಡಿದ್ದಾರೆ. ಇಬ್ಬರೂ ಸಹ ಎಲ್ಲರೆದುರು ಪರಸ್ಪರರ ಮೇಲೆ ಸವಾಲು ಹಾಕಿಕೊಂಡಿದ್ದಾರೆ. ಇನ್ನು ಮುಂದೆ ಇವರ ಆಟ ಹೇಗಿರುತ್ತದೆ ಕಾದು ನೋಡಬೇಕಿದೆ.
ಈ ವಾರ ಯಾವುದೇ ಎವಿಕ್ಷನ್ ಇರಲಿಲ್ಲ. ಈ ವಾರ ವೋಟಿಂಗ್ ಲೈನ್ ಓಪನ್ ಆಗಿರಲಿಲ್ಲ. ಹಾಗಾಗಿ ಯಾರೂ ಸಹ ಹೊರಗೆ ಹೋಗಲಿಲ್ಲ. ಆದರೆ ಮುಂದಿನ ವಾರ ಡಬಲ್ ಎಲಿಮಿನೇಷನ್ ಇರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ