ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಹೊಸ ವರ್ಷವನ್ನು ಹಾಡುತ್ತಾ, ಕುಣಿಯುತ್ತಾ ಸ್ಪರ್ಧಿಗಳು ಸ್ವಾಗತ ಮಾಡಿದರು. ‘ಇಲ್ಲಿದ್ರೆ ಆನಂದ್, ಮನೆಗೋದ್ರೆ ಗೋವಿಂದ’ ಎಂಬ ರ್ಯಾಪ್ ಹಾಡನ್ನು ಗಿಲ್ಲಿ ಹಾಡಿ ರಂಜಿಸಿದರು ಗಿಲ್ಲಿ ನಟ. ಅಶ್ವಿನಿ, ಧ್ರುವಂತ್ ಸೇರಿದಂತೆ ಮನೆ ಮಂದಿ ಬಗ್ಗೆ ಧನಾತ್ಮಕ ಅಂಶಗಳನ್ನು ಗಿಲ್ಲಿ ತಮ್ಮ ಹಾಡಿನಲ್ಲಿ ಸೇರಿಸಿದ್ದರು. ಮನೆಯ ಮಹಿಳಾ ಸದಸ್ಯರುಗಳು ಡ್ಯಾನ್ಸ್ ಮಾಡಿದರೆ, ಪುರುಷ ಸದಸ್ಯರು ರ್ಯಾಂಪ್ ವಾಕ್ ಮಾಡಿದರು.

ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್
Bigg Boss New Year

Updated on: Jan 01, 2026 | 11:05 PM

ಗಿಲ್ಲಿ ನಟ (Gilli Nata) ಒಳ್ಳೆಯ ಆಶು ಕವಿ. ನಿಂತಲ್ಲೇ ಪದಗಳನ್ನು ಜೋಡಿಸಿ ಹಾಸ್ಯ ಕವಿತೆ ಕಟ್ಟಿಬಿಡುತ್ತಾರೆ. ಈ ಹಿಂದೆಯೂ ಸಹ ಬಿಗ್​​ಬಾಸ್ ಮನೆಯಲ್ಲಿ ತಮ್ಮ ಸ್ಪಾಂಟೇನಿಯಸ್ ಹಾಸ್ಯ, ಆಶು ಕವಿತೆಯಿಂದ ಗಮನ ಸೆಳೆದಿದ್ದಾರೆ. ವೀಕೆಂಡ್​​ನಲ್ಲಿ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಮನೆ ಸದಸ್ಯರ ಬಗ್ಗೆ ‘ಡಮಾಲ್ ಡಿಮಿಲ್ ಢಕ್ಕ’ ಎಂದು ಅಲ್ಲಿಯೇ ಹಾಡು ಕಟ್ಟಿ ಹಾಡಿದ್ದರು. ಗಿಲ್ಲಿಯ ಈ ಪ್ರತಿಭೆ ಸುದೀಪ್ ಅವರಿಗೂ ಇಷ್ಟವಾಗಿತ್ತು. ಇದೀಗ ಬಿಗ್​​ಬಾಸ್ ಮನೆಯಲ್ಲಿ ಹೊಸ ವರ್ಷಾಚರಣೆ ಆಚರಣೆ ಮಾಡಲಾಗಿದ್ದು, ಹೊಸ ವರ್ಷಕ್ಕೆ ಗಿಲ್ಲಿ ಅವರು ಬಿಗ್​​ಬಾಸ್ ಮನೆ ಬಗ್ಗೆಯೇ ರ್ಯಾಪ್ ಹಾಡೊಂದನ್ನು ಹಾಡಿದ್ದಾರೆ.

‘ಇಲ್ಲಿದ್ರೆ ಆನಂದ್, ಮನೆಗೋದ್ರೆ ಗೋವಿಂದ’ ಎಂಬ ರ್ಯಾಪ್ ಹಾಡನ್ನು ಗಿಲ್ಲಿ ಹಾಡಿ ರಂಜಿಸಿದರು. ಅಶ್ವಿನಿ, ಧ್ರುವಂತ್ ಸೇರಿದಂತೆ ಮನೆ ಮಂದಿ ಬಗ್ಗೆ ಧನಾತ್ಮಕ ಅಂಶಗಳನ್ನು ಗಿಲ್ಲಿ ತಮ್ಮ ಹಾಡಿನಲ್ಲಿ ಸೇರಿಸಿದ್ದರು. ಧ್ರುವಂತ್ ಅವರಿಗೆ ಭಕ್ತಿಯೇ ಶಕ್ತಿ ಎಂದು, ಅಶ್ವಿನಿ ಅವರ ಅಡುಗೆ ಸೂಪರ್ ಎಂದು, ರಘು ಅವರಿಗೆ ಮಗುವಿನ ಮನಸ್ಸೆಂದು, ರಾಶಿಕಾ ಬಹಳ ಹಾಟ್ ಎಂದು ಹೀಗೆ ಒಬ್ಬೊಬ್ಬರ ಬಗ್ಗೆ ಒಂದೊಂದು ಅಂಶಗಳನ್ನು ಹಾಡಿನಲ್ಲಿ ಸೇರಿಸಿದ್ದರು ಗಿಲ್ಲಿ.

ಇದನ್ನೂ ಓದಿ:ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?

ಅಸಲಿಗೆ ಎಲ್ಲರ ಬಗ್ಗೆ ತಮಾಷೆ ಹಾಡು ಬರೆಯಲು ಗಿಲ್ಲಿ ಮುಂದಾಗಿದ್ದರು. ಆದರೆ ಧ್ರುವಂತ್, ಹಾಗೆ ಹೀಗಳೆದು ಬರೆಯುವಂತಿದ್ದರೆ ನನ್ನ ಹೆಸರು ತೆಗೆದುಬಿಡು ಎಂದರು. ಇದೇ ವಿಷಯಕ್ಕೆ ಗಿಲ್ಲಿ ಮತ್ತು ಧ್ರುವಂತ್ ನಡುವೆ ಜಗಳವೂ ನಡೆದು ಹೋಯ್ತು, ಗಿಲ್ಲಿ ತಮ್ಮನ್ನು ತಾವು ಮೊಟ್ಟೆ ಕಳ್ಳನೆಂದು ಸಹ ಬರೆದುಕೊಂಡಿದ್ದರು. ಆದರೆ ಧ್ರುವಂತ್​​ಗೆ ತಮಾಷೆಯನ್ನು ಸಹಿಸಿಕೊಳ್ಳಲಾಗಲಿಲ್ಲ, ಕೊನೆಗೆ ರಘು ಮತ್ತು ಧನುಶ್ ಒತ್ತಾಯದ ಮೇರೆಗೆ ಹಾಡಿನ ಸ್ವರೂಪವನ್ನೇ ಬದಲಾಯಿಸಿದರು ಗಿಲ್ಲಿ.

ಬಿಗ್​​ಬಾಸ್ ಮನೆಯಲ್ಲಿ ಹೊಸ ವರ್ಷಾಚರಣೆ ಸಖತ್ ಆಗಿತ್ತು. ಗಿಲ್ಲಿಯ ರ್ಯಾಪ್ ಹಾಡಿನ ಬಳಿಕ ಮನೆಯ ಮಹಿಳಾ ಸದಸ್ಯರೆಲ್ಲ ಸೇರಿಕೊಂಡು ಬಿಗ್​ಬಾಸ್ ಥೀಮ್ ಹಾಡಿಗೆ ಡ್ಯಾನ್ಸ್ ಮಾಡಿ ರಂಜಿಸಿದರು. ಬಳಿಕ ಮನೆಯ ಪುರುಷ ಸದಸ್ಯರೆಲ್ಲ ಮಹಿಳೆಯರು ಧರಿಸುವ ಹೈ ಹೀಲ್ಸ್ ಧರಿಸಿ ರ್ಯಾಂಪ್ ವಾಕ್ ಮಾಡಿದರು. ಇದು ಮಜವಾಗಿತ್ತು. ಬಿಗ್​​ಬಾಸ್, ಹೊಸ ವರ್ಷದ ಪ್ರಯುಕ್ತ ಮನೆಯ ಸದಸ್ಯರಿಗೆಲ್ಲ ರುಚಿಯಾದ ಊಟ ಕಳಿಸಿದ್ದರು. ಊಟವೆಲ್ಲ ಆದ ಮೇಲೆ ಪಟಾಕಿಗಳನ್ನು ಹೊಡೆದು ಮನೆ ಸದಸ್ಯರು ಸಂಭ್ರಮಿಸಿದರು. ಬಳಿಕ ಕೆಲವು ಹಾಡುಗಳನ್ನು ಹಾಕಿ ಪಾರ್ಟಿ ರೀತಿಯ ವಾತಾವರಣವನ್ನು ಅನ್ನು ಬಿಗ್​​ಬಾಸ್ ಮನೆಯಲ್ಲೇ ಸೃಷ್ಟಿಸಲಾಯ್ತು. ಸ್ಪರ್ಧಿಗಳೆಲ್ಲ ಹಾಡುತ್ತಾ, ಕುಣಿಯುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ