ಎಮರ್ಜೆನ್ಸಿ ಎಕ್ಸಿಟ್​​ನಲ್ಲಿ ದೊಡ್ಡ ಟ್ವಿಸ್ಟ್? ಮೂವರು ಹೊರಕ್ಕೆ, ಮೂವರು ಒಳಕ್ಕೆ?

ಬಿಗ್ ಬಾಸ್ ಕನ್ನಡದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ವಿಚಾರ ಭಾರಿ ಸಂಚಲನ ಮೂಡಿಸಿದೆ. ಕೇವಲ ಮೂರನೇ ವಾರದಲ್ಲೇ ಮೂವರು ಸ್ಪರ್ಧಿಗಳು ಹೊರನಡೆದಿದ್ದಾರೆ ಎನ್ನಲಾಗಿದ್ದು, ಆಟದ ರೋಚಕತೆ ಹೆಚ್ಚಿಸಲು ಹೊಸ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಲಿದ್ದಾರೆ. ಈ ದಿಢೀರ್ ಬದಲಾವಣೆಗಳಿಂದ ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಕಾತರ ದುಪ್ಪಟ್ಟಾಗಿದೆ.

ಎಮರ್ಜೆನ್ಸಿ ಎಕ್ಸಿಟ್​​ನಲ್ಲಿ ದೊಡ್ಡ ಟ್ವಿಸ್ಟ್? ಮೂವರು ಹೊರಕ್ಕೆ, ಮೂವರು ಒಳಕ್ಕೆ?
ಬಿಗ್ ಬಾಸ್

Updated on: Sep 24, 2026 | 6:58 AM

ಮುಖ್ಯಾಂಶಗಳು

  • ದೊಡ್ಮನೆಯಲ್ಲಿ ದಿಢೀರ್ ಎಲಿಮಿನೇಷನ್
  • ಮೂವರಿಗೆ ಎಮರ್ಜೆನ್ಸಿ ಎಕ್ಸಿಟ್?
  • ಮಿಂಚಿನ ಆಟಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮಾಸ್ಟರ್ ಪ್ಲಾನ್

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಒಂದು ಹೊಸ ಪ್ರಯೋಗ ಮಾಡಲಾಗಿತ್ತು. ಕೇವಲ ಮೂರೇ ವಾರಕ್ಕೆ ಫಿನಾಲೆ ಮಾಡಲಾಗಿತ್ತು. ಕೆಲವರನ್ನು ಕಳುಹಿಸಿ, ಕೆಲವರನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಿಸಲಾಗಿತ್ತು. ಇದನ್ನು ಬಿಗ್ ಬಾಸ್ ಮತ್ತೆ ರಿಪೀಟ್ ಮಾಡುತ್ತಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಬಲವಾಗಿ ಕಾಡಿದೆ. ಮೂವರನ್ನು ಹೊರಕ್ಕೆ ಹಾಕಿ, ಮೂವರನ್ನು ಒಳಕ್ಕೆ ತರೋ ಕೆಲಸ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮೂಲಗಳ ಪ್ರಕಾರ ಇಂದು (ಸೆಪ್ಟೆಂಬರ್ 24) ಮಧ್ಯರಾತ್ರಿ 12.30ಕ್ಕೆ ಎಲಿಮಿನೇಷನ್ ನಡೆದಿದೆಯಂತೆ. ಈ ವೇಳೆ ಹೊರ ಹೋದವರು ಯಾರು ಎಂಬ ವಿಷಯ ಇನ್ನೂ ರಿವೀಲ್ ಆಗಿಲ್ಲ. ಎಮರ್ಜೆನ್ಸಿ ಎಕ್ಸಿಟ್​​ನಲ್ಲಿ ಮೂವರು ಹೊರ ಹೋದರು ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಒಂದೊಮ್ಮೆ ಮೂವರು ಹೋದರೆ ಸ್ಪರ್ಧಿಗಳ ಸಂಖ್ಯೆ 11 ಆಗಲಿದೆ. ಕೇವಲ ಮೂರನೇ ವಾರಕ್ಕೆ ಸ್ಪರ್ಧಿಗಳ ಸಂಖ್ಯೆ ಇಷ್ಟು  ಕಡಿಮೆಯಾದರೆ ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ಇದಕ್ಕೂ ಪರಿಹಾರ ಇದೆ.

‘ಬಿಗ್ ಬಾಸ್​​’ನಲ್ಲಿ ಎಮರ್ಜೆನ್ಸಿ ಎಕ್ಸಿಟ್ ಜೊತೆ, ಎಮರ್ಜೆನ್ಸಿ ಎಂಟ್ರಿ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಹೌದು, ದೊಡ್ಮನೆಗೆ ಕೆಲ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಲಿದ್ದಾರಂತೆ. ಹಾಗಾದಲ್ಲಿ ಆಟದ ರೋಚಕತೆ ಹೆಚ್ಚಲಿದೆ.

ಇದನ್ನೂ ಓದಿ:  ಬಿಗ್ ಬಾಸ್: ಮತ್ತೆ ವೈಯಕ್ತಿಕ ವಿಚಾರ ಇಟ್ಟುಕೊಂಡು ಅತಿಯಾಗಿ ಮಾತಾಡಿದ ಮಂಜ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಹೋದವರು ಇಬ್ಬರೂ ಸೆಲೆಬ್ರಿಗಳೇ. ದೊಡ್ಮನೆ ಸೇರಿರುವ ನಾಲ್ಕು ವೈಲ್ಡ್ ಕಾರ್ಡ್ ಎಂಟ್ರಿ ಪೈಕಿ ಎಲ್ಲರೂ ತಮ್ಮ ಆಟವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆದರೆ ಆಟದ ರೋಚಕತೆ ಮತ್ತಷ್ಟು ಹೆಚ್ಚಲಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆ ಸ್ಪರ್ಧಿಗಳು ಹೇಗೆ ಎಂಬುದರ ಐಡೀಯಾ ಇರುತ್ತದೆ. ಇದರ ಆಧಾರದ ಮೇಲೆ ಆಟ ಮುಂದುವರಿಸಿಕೊಂಡು ಹೋಗಲು ಅನುಕೂಲ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us