AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಬಾಲ ನಟಿ ದಿಶಿತಾ ಸೆಹ್ಗಲ್ ನಟನೆ

‘ಬೇಬಿ’, ‘ಡಿಯರ್ ಜಿಂದಗಿ’, ‘ಹಿಂದಿ ಮೀಡಿಯಂ’, ‘ವಾರ್ 1’, ‘ಸವ್ಯಸಾಚಿ’, ‘ಹಿಟ್: ದಿ ಫಸ್ಟ್ ಕೇಸ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಬಾಲ ನಟಿ ದಿಶಿತಾ ಸೆಹ್ಗಲ್ ಅವರು ಈಗ ‘ರಾಮಾಯಣ’ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ. ಯುವ ಶೂರ್ಪನಕಿಯ ಪಾತ್ರವನ್ನು ದಿಶಿತಾ ಅವರು ನಿಭಾಯಿಸಿದ್ದಾರೆ.

ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಬಾಲ ನಟಿ ದಿಶಿತಾ ಸೆಹ್ಗಲ್ ನಟನೆ
Dishita Sehgal, Ramayana Poster
ಮದನ್​ ಕುಮಾರ್​
|

Updated on: Nov 03, 2026 | 4:40 PM

Share

ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೆಚ್ಚದ ಹಾಗೂ ದುಬಾರಿ ಸಿನಿಮಾಗಳಲ್ಲಿ ಒಂದಾಗಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿರುವ ಈ ಚಿತ್ರದಲ್ಲಿ ಯುವ ಶೂರ್ಪನಕಿಯ ಪಾತ್ರದಲ್ಲಿ ಯಾರು ಅಭಿನಯಿಸಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ, ನಿರ್ದೇಶಕ ನಿತೀಶ್ ತಿವಾರಿ ಅವರ ‘ರಾಮಾಯಣ’ ಚಿತ್ರದಲ್ಲಿ ಯುವ ಶೂರ್ಪನಕಿಯ ಪಾತ್ರದಲ್ಲಿ ಜನಪ್ರಿಯ ಬಾಲನಟಿ ದಿಶಿತಾ ಸೆಹ್ಗಲ್ ಕಾಣಿಸಿಕೊಳ್ಳಲಿದ್ದಾರೆ.

ನಿರ್ಮಾಪಕರು ಈ ಪಾತ್ರಕ್ಕಾಗಿ ಜನಪ್ರಿಯ ಟಿವಿ ನಟಿ ಹಾಗೂ ಬಾಲಕಲಾವಿದೆ ದಿಶಿತಾ ಸೆಹ್ಗಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಹಿಂದೆ ಜಾಹೀರಾತೊಂದರಲ್ಲಿ ದಿಶಿತಾ ಅವರ ಡೈಲಾಗ್ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಹೇರ್ ಡೈ ಜಾಹೀರಾತಿನಲ್ಲಿ ಅವರು ಹೇಳಿದ ‘ಕೇವಲ 30 ರೂಪಾಯಿ, ಮಮ್ಮಿ’ ಎಂಬ ಮಾತು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

‘ರಾಮಾಯಣ’ ಸಿನಿಮಾದ ಪಾತ್ರಕ್ಕಾಗಿ ಕಠಿಣ ಆಡಿಷನ್ ಹಾಗೂ ಲುಕ್ ಟೆಸ್ಟ್‌ನ ಹಲವು ಸುತ್ತುಗಳು ನಡೆದು, ಆಯ್ಕೆಗೆ ಸುಮಾರು ಒಂದು ವರ್ಷದ ಸಮಯ ಹಿಡಿದಿದೆ. ಈ ಚಿತ್ರದ ಪಾತ್ರವರ್ಗದ ಜವಾಬ್ದಾರಿಯನ್ನು ಮುಕೇಶ್ ಛಾಬ್ರಾ ವಹಿಸಿದ್ದು, ಕಾಸ್ಟಿಂಗ್ ಕೋಆರ್ಡಿನೇಟರ್ ಜ್ಯೋತಿ ಬಜಾಜ್ ಸಂಯೋಜನೆ ಮಾಡಿದ್ದಾರೆ.

ಬಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ಬಾಲಕಲಾವಿದೆಯಾಗಿ ಕೆಲಸ ಮಾಡಿರುವ ದಿಶಿತಾ, ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ. ಪ್ರಸ್ತುತ ಬಾಂಬೆ ಸ್ಕಾಟಿಷ್ ಶಾಲೆಯಲ್ಲಿ 11ನೇ ತರಗತಿ ಓದುತ್ತಿರುವ ಇವರು, ಈಗಾಗಲೇ ಟಿವಿ ಸೀರೀಸ್‌ಗಳು, ಶಾರ್ಟ್ ಫಿಲ್ಮ್‌ಗಳು, ‘ಸೇಕ್ರೆಡ್ ಗೇಮ್ಸ್’ ವೆಬ್ ಸೀರೀಸ್ ಹಾಗೂ 100ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡಿದ್ದಕ್ಕೆ ಯಥರ್ವ್ ಬೇಸರ

ಮೂರೂವರೆ ವರ್ಷದ ವಯಸ್ಸಿನಿಂದಲೇ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ದಿಶಿತಾ, ‘ಬೇಬಿ’, ‘ಡಿಯರ್ ಜಿಂದಗಿ’, ‘ಹಿಂದಿ ಮೀಡಿಯಂ’, ‘ವಾರ್ 1’, ತೆಲುಗು ಚಿತ್ರ ‘ಸವ್ಯಸಾಚಿ’, ಹಾಗೂ ‘ಹಿಟ್: ದಿ ಫಸ್ಟ್ ಕೇಸ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ 16 ವರ್ಷದ ದಿಶಿತಾ ಸೆಹ್ಗಲ್ ಯುವ ಶೂರ್ಪಣಕಿಯಾಗಿ ಕಾಣಿಸಿಕೊಳ್ಳಲಿದ್ದು, ಈ ಪಾತ್ರದ ಮುಂದುವರಿದ ಭಾಗದಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ, ರಾವಣನಾಗಿ ಯಶ್, ರಾಮನಾಗಿ ರಣಬೀರ್ ಕಪೂರ್, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಭಾಗವು ದೀಪಾವಳಿ ಪ್ರಯುಕ್ತ ನವೆಂಬರ್ 5ರಂದು ತೆರೆಕಾಣಲಿದೆ. ಮುಂಗಡ ಬುಕಿಂಗ್ ಭರ್ಜರಿಯಾಗಿ ಸಾಗಿದ್ದು, ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More