ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ (Bigg Boss) ಈ ವಾರ ಡಬಲ್ ಎಲಿಮಿನೇಷನ್ (Elimination). ಸಾಮಾನ್ಯವಾಗಿ ಭಾನುವಾರದ ಎಪಿಸೋಡ್ನ ಕೊನೆಯಲ್ಲಿ ಮನೆಯಿಂದ ಹೊರ ಹೋಗುವವರ ಹೆಸರನ್ನು ಸುದೀಪ್ ಘೋಷಿಸುವುದು ಸಾಮಾನ್ಯ, ಆದರೆ ಈ ವಾರ ಡಬಲ್ ಎಲಿಮಿನೇಷನ್ ಇದ್ದ ಕಾರಣ, ಶನಿವಾರ ಒಬ್ಬರು ಮನೆಯಿಂದ ಎಲಿಮಿನೇಟ್ ಆಗಿದ್ದು, ಭಾನುವಾರವೂ ಒಬ್ಬರು ಎಲಿಮಿನೇಟ್ ಆಗಿದ್ದಾರೆ.
ಶನಿವಾರದ ಎಪಸೋಡ್ನಲ್ಲಿ ಇಶಾನಿ ಮನೆಯಿಂದ ಎಲಿಮಿನೇಟ್ ಆದರೆ ಭಾನುವಾರದ ಎಪಿಸೋಡ್ನಲ್ಲಿ ನಟಿ ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ ದಸರಾ ಹಬ್ಬದ ಸಂದರ್ಭದಲ್ಲಿಯೇ ಮನೆಯಿಂದ ಎಲಿಮಿನೇಟ್ ಆಗಿದ್ದರು. ಆದರೆ ಹಬ್ಬದ ಸಮಯವಾದ್ದರಿಂದ ಆ ವಾರ ಭಾಗ್ಯಶ್ರೀ ಅವರ ಎಲಿಮಿನೇಷನ್ ಅನ್ನು ರದ್ದು ಮಾಡಲಾಯ್ತು. ಹಾಗಾಗಿ ಭಾಗ್ಯಶ್ರೀ ಮನೆಯಲ್ಲಿಯೇ ಉಳಿದುಕೊಂಡರು.
ದಸರಾ ಹಬ್ಬದ ಬಳಿಕ ಭಾಗ್ಯಶ್ರೀ ಆಟದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿತ್ತು. ಅಲ್ಲದೆ ಡ್ರೋನ್ ಪ್ರತಾಪ್ ಅವರಿಂದಾಗಿಯೂ ಒಮ್ಮೊ ನಾಮಿನೇಷನ್ನಿಂದ ಭಾಗ್ಯಶ್ರೀ ಉಳಿದುಕೊಂಡರು. ಹಾಗಾಗಿ ಮೊದಲ ಮೂರನೇ ವಾರಕ್ಕೆ ಮನೆಯಿಂದ ಹೊರಗೆ ಬೇಕಾಗಿದ್ದ ಭಾಗ್ಯಶ್ರೀ ಆರು ವಾರಗಳ ವರೆಗೆ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡರು. ಆದರೆ ಅಂತಿಮವಾಗಿ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ.
ಭಾಗ್ಯಶ್ರೀ, ಆರಂಭದಿಂದಲೂ ಮನೆಯ ಯುವ ಸದಸ್ಯರೊಟ್ಟಿಗೆ ಹೊಂದಿಕೊಳ್ಳಲು ಕಷ್ಟಪಟ್ಟರು. ಮಧ್ಯ ವಯಸ್ಸಿನ ಭಾಗ್ಯಶ್ರೀ ಟಾಸ್ಕ್ನಲ್ಲಿಯೂ ನಿಧಾನವಾಗಿದ್ದರು. ಮಾತ್ರವಲ್ಲದೆ ಮನೆಯ ಇತರೆ ಸದಸ್ಯರೊಟ್ಟಿಗೆ ಅವರ ಆಲೋಚನೆಗಳು, ಯೋಚನಾಕ್ರಮವೂ ಮ್ಯಾಚ್ ಆಗುತ್ತಿರಲಿಲ್ಲ. ಹೀಗಾಗಿ ಸದಾ ಬಹುತೇಕ ತಮ್ಮದೇ ವಯಸ್ಸಿನವರಾದ ನಟಿ ಸಿರಿ ಅವರೊಟ್ಟಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಈಗ ಕೊನೆಗೂ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಈ ವರೆಗೆ ಬಿಗ್ಬಾಸ್ ಮನೆಯಿಂದ ಸ್ನೇಕ್ ಶ್ಯಾಮ್, ರಕ್ಷಕ್, ಗೌರೀಶ್ ಅಕ್ಕಿ, ಇಶಾನಿ, ಭಾಗ್ಯಶ್ರೀ ಅವರುಗಳು ಹೊರಗೆ ಹೋಗಿದ್ದಾರೆ. ಸಿರಿ, ವಿನಯ್, ನಮ್ರತಾ, ತನಿಷಾ, ಸಂಗೀತಾ, ಕಾರ್ತಿಕ್, ಸ್ನೇಹಿತ್, ತುಕಾಲಿ ಸಂತೋಷ್, ನೀತು, ವರ್ತೂರು ಸಂತೋಷ್ ಅವರುಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಮುಂದಿನ ವಾರ ಯಾರು ಹೊರಗೆ ಹೋಗುತ್ತಾರೆ ಎಂಬುದು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ