‘ಜನರ ವೋಟ್ ವಿರುದ್ಧ ಹೋಗಲ್ಲ’; ತಾಂಡವ್ ರಾಮ್ ಉಳಿಸಿ ಸುದೀಪ್ ಮಾತು

ಬಿಗ್‌ಬಾಸ್ ಮನೆಯಿಂದ ತಾಂಡವ್ ರಾಮ್ ಎಲಿಮಿನೇಷನ್ ಆಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ವೋಟಿಂಗ್ ವಿವಾದದ ಕುರಿತು ಕಿಚ್ಚ ಸುದೀಪ್ ವಾರಾಂತ್ಯದ ಸಂಚಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜನರ ವೋಟ್‌ಗೆ ಬೆಲೆ ನೀಡಲಾಗಿದ್ದು, ತಾಂಡವ್​ಗೆ ರೀ-ಎಂಟ್ರಿ ಕೊಡಿಸಲಾಗಿದೆ. ಇದು ಕುತೂಹಲ ಮೂಡಿಸಿದೆ. ಈ ಬಗ್ಗೆ ಚರ್ಚೆ ಶುರವಾಗಿದೆ.

‘ಜನರ ವೋಟ್ ವಿರುದ್ಧ ಹೋಗಲ್ಲ’; ತಾಂಡವ್ ರಾಮ್ ಉಳಿಸಿ ಸುದೀಪ್ ಮಾತು
ಸುದೀಪ್-ತಾಂಡವ್
Edited By:

Updated on: Sep 27, 2026 | 9:38 PM

ಮುಖ್ಯಾಂಶಗಳು

  • ಮಿಡ್‌ವೀಕ್ ಎಲಿಮಿನೇಷನ್ ತಂದಿಟ್ಟ ಟ್ವಿಸ್ಟ್
  • ಪ್ರೇಕ್ಷಕರ ಅಸಮಾಧಾನಕ್ಕೆ ಸುದೀಪ್ ಉತ್ತರ
  • ತಾಂಡವ್ ರಾಮ್ ರೀ-ಎಂಟ್ರಿ ಕುರಿತು ಸಸ್ಪೆನ್ಸ್

ತಾಂಡವ್ ರಾಮ್ ಎಲಿಮಿನೇಷನ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅವರ ವೋಟ್ ಕಸಿದುಕೊಂಡಿದ್ದಕ್ಕೆ ಅವರು ಹೊರ ಹೋದರು. ಅವರು ಮತ್ತೆ ಬರ್ತಾರೆ ಎಂದು ಪ್ರೋಮೋ ಕೂಡ ತೋರಿಸಲಾಯಿತು. ಅಂತೆಯೇ ತಾಂಡವ್ ರಾಮ್ ಅವರನ್ನು ಮನೆ ಒಳಗೆ ಕಳುಹಿಸಲಾಗಿದೆ. ತಕ್ಷಣಕ್ಕೆ ಅವರು ಬಿಗ್ ಬಾಸ್ ಮನೆ ಒಳಗೆ ಹೋಗಲ್ಲ. ಈ ಬಗ್ಗೆ ಬಿಗ್ ಬಾಸ್ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಈ ವಾರದ ಟಾಸ್ಕ್​​ನಲ್ಲಿ ಕೆಲವರಿಗೆ ಶೇ.50ರಷ್ಟು ವೋಟ್ ಪಡೆದುಕೊಳ್ಳುವ ಆದೇಶ ನೀಡಲಾಯಿತು. ಈ ಬೆನಿಫಿಟ್ ಪಡೆದುಕೊಂಡಿದ್ದ ಧನುಷ್, ತಾಂಡವ್ ರಾಮ್ ಅವರಿಂದ ವೋಟ್ ಕಸಿದುಕೊಂಡರು. ಹೀಗಾಗಿ, ಮಧ್ಯ ವೀಕ್​​ನಲ್ಲಿ ತಾಂಡವ್ ರಾಮ್ ಅವರನ್ನು ಕಳುಹಿಸಲಾಯಿತು. ಇದಕ್ಕೆ ಅನೇಕರು ಅಪಸ್ವರ ತೆಗೆದಿದ್ದರು.

‘50 ಪರ್ಸೆಂಟ್ ವೋಟ್​​​ನ ನಾವು ಹಾಕಿದ್ದು. ಇದನ್ನು ಬೇರೆಯವರು ಕಸಿದುಕೊಂಡಿದ್ದು ಎಷ್ಟು ಸರಿ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ. ‘ಈ ರೀತಿಯ ವಿಷಯ ನಡೆದಾಗ ವೀಕೆಂಡ್​​ವರೆಗೆ ಕಾಯಿರಿ. ಸ್ವಲ್ಪ ತಾಳ್ಮೆ ಇರಲಿ. ನಾವು ಜನರ ವೋಟ್​​ ನಷ್ಟ ಆಗಲು ಬಿಡೋದಿಲ್ಲ. ಜನರ ವೋಟ್ ಪ್ರಕಾರವೇ ಎಲಿಮಿನೇಷನ್ ನಡೆಸಿದ್ದೇವೆ. ಯಾರಿಗೆ ಕಡಿಮೆ ವೋಟ್ ಬಿದ್ದಿದೆಯೋ ಅವರನ್ನೇ ಕಳುಹಿಸಿದ್ದೇವೆ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಬಿಗ್​​ಬಾಸ್ ಮನೆಗೆ ರೀ ಎಂಟ್ರಿ ಕೊಡ್ತಿದ್ದಾರೆ ತಾಂಡವ್ ರಾಮ್: ವಿಡಿಯೋ

ಇನ್ನು, ತಾಂಡವ್ ರಾಮ್​ಗೆ ಕೆಲವು ಕಿವಿಮಾತು ಹೇಳಿದ್ದಾರೆ. ‘ಕಿವಿಯಲ್ಲಿ ಪಿಸುಗುಡುವಂತಿಲ್ಲ. ನಿಮ್ಮ ಆಟವನ್ನು ನೀವು ಆಡಿ. ಈಗಲೇ ನಿಮ್ಮನ್ನು ಕಳುಹಿಸುತ್ತಿಲ್ಲ. ಈ ಬಗ್ಗೆ ಬಿಗ್ ಬಾಸ್ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. ಮುಂದಿನ ಸಂಚಿಕೆಯಲ್ಲಿ ತಾಂಡವ್ ರಾಮ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:51 pm, Sat, 26 September 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us