ಸಂಬಂಧ ಇಲ್ಲದಿರುವ ಜಗಳಕ್ಕೆ ತಲೆ ಹಾಕಿದ ಪ್ರಶಾಂತ್ ಸಂಬರ್ಗಿ; ಮುಂದೇನಾಯ್ತು?  

| Updated By: ರಾಜೇಶ್ ದುಗ್ಗುಮನೆ

Updated on: Oct 27, 2022 | 11:24 AM

ಬಿಗ್ ಬಾಸ್ ಮನೆಯಲ್ಲಿ ದುರಾಸೆ ಎಂಬ ವಿಚಾರಕ್ಕೆ ದೊಡ್ಡ ಕಿರಿಕ್ ಶುರುವಾಗಿದೆ. ಈ ಜಗಳ ದೊಡ್ದದಾಗುವಂತೆ ಮಾಡಿದ್ದು ಪ್ರಶಾಂತ್ ಅವರು ಎಂಬುದು ಅನೇಕರ ಆರೋಪ.

ಸಂಬಂಧ ಇಲ್ಲದಿರುವ ಜಗಳಕ್ಕೆ ತಲೆ ಹಾಕಿದ ಪ್ರಶಾಂತ್ ಸಂಬರ್ಗಿ; ಮುಂದೇನಾಯ್ತು?  
ಪ್ರಶಾಂತ್
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಸಂಬಂಧ ಇಲ್ಲದಿರುವ ವಿಚಾರಕ್ಕೆ ತಲೆ ಹಾಕೋಕೆ ಪ್ರಯತ್ನಿಸುತ್ತಾರೆ. ಕಳೆದ ಸೀಸನ್​ನಲ್ಲಿ ಅವರು ಜಗಳ ಮಾಡಿ ಸಖತ್ ಫೇಮಸ್ ಆಗಿದ್ದರು. ಈ ಬಾರಿಯೂ ಜಗಳ ಮಾಡೋದನ್ನು ಅವರು ಮುಂದುವರಿಸಿದಂತಿದೆ. ಈ ಕಾರಣಕ್ಕೆ ಅವರ ವಿರುದ್ಧ ಎಲ್ಲರೂ ತಿರುಗಿ ಬೀಳುತ್ತಿದ್ದಾರೆ. ಈ ಬಾರಿ ಮನೆಯಲ್ಲಿ ದೀರ್ಘವಾದ ಜಗಳ ನಡೆದಿದೆ. ಪ್ರಶಾಂತ್ ಸಂಬರ್ಗಿ ಅವರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಪ್ರಶಾಂತ್ ಸಂಬರ್ಗಿ ಅವರು ಸಂಬಂಧ ಇಲ್ಲದ ವಿಚಾರಕ್ಕೆ ತಲೆ ಹಾಕೋದು ಜಾಸ್ತಿ ಅನ್ನೋದು ಮನೆಯವರ ಅಭಿಪ್ರಾಯ. ಇದನ್ನು ಅವರು ಪದೇಪದೇ ಸಾಬೀತು ಮಾಡುತ್ತಲೇ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದುರಾಸೆ ಎಂಬ ವಿಚಾರಕ್ಕೆ ದೊಡ್ಡ ಕಿರಿಕ್ ಶುರುವಾಗಿದೆ. ಈ ಜಗಳ ದೊಡ್ದದಾಗುವಂತೆ ಮಾಡಿದ್ದು ಪ್ರಶಾಂತ್ ಅವರು ಎಂಬುದು ಅನೇಕರ ಆರೋಪ.

ಮನೆಯಲ್ಲಿ ಒಂದು ಟಾಸ್ಕ್ ನೀಡಲಾಗಿದೆ. ಹಬ್ಬದ ಸಮಯವಾದ್ದರಿಂದ ಸ್ಪರ್ಧಿಗಳ ಮನೆಯಿಂದ ಗಿಫ್ಟ್ ಕಳುಹಿಸಲು ಅವಕಾಶ ನೀಡಲಾಗಿತ್ತು. ಟಾಸ್ಕ್ ಗೆದ್ದವರಿಗೆ ಮನೆಯಿಂದ ತಂದ ಗಿಫ್ಟ್ ಓಪನ್ ಮಾಡಲು ಅವಕಾಶ ಇತ್ತು. ಅಲ್ಲದೆ, ಹೆಚ್ಚು ಟಾಸ್ಕ್ ಗೆದ್ದವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ ಎಂಬುದನ್ನು ಬಿಗ್ ಬಾಸ್ ಹೇಳಿದರು. ಈ ಟಾಸ್ಕ್​ನ ನಿಯಮಗಳ ವಿಚಾರದಲ್ಲಿ ಸಾನಿಯಾ ಸರಿಯಾಗಿ ಗೈಡ್ ಮಾಡಿಲ್ಲ ಅನ್ನೋದು ಅರುಣ್ ಸಾಗರ್ ಅವರ ಆರೋಪ. ಇದೇ ಸಂದರ್ಭದಲ್ಲಿ ‘ಕ್ಯಾಪ್ಟನ್ಸಿ ಟಾಸ್ಕ್​ ಬೇಕು ಮತ್ತು ಮನೆಯಿಂದ ತಂದ ಗಿಫ್ಟ್ ಕೂಡ ಬೇಕು ಎಂದು ಹೇಳೋದು ದುರಾಸೆ ಆಗುತ್ತದೆ’ ಎಂದರು ಅವರು.

ಇದನ್ನೂ ಓದಿ
ಸಾನ್ಯಾ ಐಯ್ಯರ್-ಪ್ರಶಾಂತ್ ಸಂಬರ್ಗಿ ಪ್ಲ್ಯಾನ್​ಗೆ ಬಕ್ರಾ ಆದ ರೂಪೇಶ್ ರಾಜಣ್ಣ
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ

ಈ ವಿಚಾರದಲ್ಲಿ ಅರುಣ್ ಸಾಗರ್ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಕಿತ್ತಾಟ ಶುರುವಾಗಿದೆ. ಇವರಿಬ್ಬರ ಜಗಳಕ್ಕೆ ಪ್ರಶಾಂತ್ ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ. ಅವರು ರೂಪೇಶ್ ರಾಜಣ್ಣ ವಿರುದ್ಧ ಕೂಗಾಟ ನಡೆಸಿದ್ದಾರೆ. ಸಂಬಂಧವೇ ಇಲ್ಲದ ಪ್ರಶಾಂತ್ ಸಂಬರ್ಗಿ ಬಂದು ಇಲ್ಲಿ ಮಧ್ಯೆ ಮೂಗು ತೂರಿಸುವ ಅವಶ್ಯಕತೆ ಏನಿತ್ತು ಅನ್ನೋದು ರೂಪೇಶ್ ರಾಜಣ್ಣ ಹಾಗೂ ಸಾನ್ಯಾ ಪ್ರಶ್ನೆ. ಈ ಬಗ್ಗೆ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: ‘ರೂಪೇಶ್​ ರಾಜಣ್ಣಗೆ ನಿಯತ್ತಿದೆ, ಮೌಲ್ಯಗಳಿವೆ’; ಕೊನೆಗೂ ಒಪ್ಪಿಕೊಂಡ ಪ್ರಶಾಂತ್ ಸಂಬರ್ಗಿ

‘ನಾನು ಅರುಣ್ ಸಾಗರ್ ಮಾತನಾಡುತ್ತಿದ್ದೆವು. ಮಧ್ಯದಲ್ಲಿ ಪ್ರಶಾಂತ್ ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ. ಅವರಿಗೂ ಜಗಳಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಆದಾಗ್ಯೂ ಬಂದಿದ್ದಾರೆ. ಅವರು ಬರದೆ ಇದ್ದಿದ್ದರೆ ಜಗಳ ಯಾವಾಗೋ ಪೂರ್ಣಗೊಳ್ಳುತ್ತಿತ್ತು’ ಎಂಬ ಅಭಿಪ್ರಾಯವನ್ನು ರೂಪೇಶ್ ರಾಜಣ್ಣ ಹೊರಹಾಕಿದ್ದಾರೆ.

Published On - 11:10 am, Thu, 27 October 22