ಮನೆಯಲ್ಲಿ ಕಳೆದ ಕೆಲವು ವಾರಗಳಿಂದ ವಿನಯ್ (Vinay Gowda) ತುಸು ಶಾಂತವಾಗಿ ವರ್ತಿಸುತ್ತಿದ್ದಾರೆ. ತಮ್ಮ ಅಹಂಕಾರ ಭರಿತ ಮಾತು, ಅಗ್ರೆಸ್ಸಿವ್ ವರ್ತನೆ, ಬೇಕೆಂದೇ ಎದುರಾಳಿಯನ್ನು ಪ್ರವೋಕ್ ಮಾಡಿ ಜಗಳ ಮಾಡುವಂತೆ ಮಾಡುವ ತಮ್ಮ ಗುಣಗಳಿಗೆ ಕೆಲ ವಾರ ಬ್ರೇಕ್ ಕೊಟ್ಟಿದ್ದರು. ಆದರೆ ಅದನ್ನು ಶನಿವಾರದ ಎಪಿಸೋಡ್ ಬಳಿಕ ಮತ್ತೆ ಪ್ರಾರಂಭ ಮಾಡಿದ್ದಾರೆ. ಮನೆಯಲ್ಲಿ ಹಲವರ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳನ್ನು ಮನೆಯಲ್ಲಿ ಸಮಯ ಬಂದಾಗೆಲ್ಲ ವಿನಯ್ ಹೇಳಿದ್ದಾರೆ. ಅವರ ಬಳೆ ಹೇಳಿಕೆಯನ್ನು ಪ್ರೇಕ್ಷಕರು ಮರೆತಿಲ್ಲ, ಆದರೆ ಶನಿವಾರದ ಎಪಿಸೋಡ್ನಲ್ಲಿ ಡ್ರೋನ್ ಪ್ರತಾಪ್, ಸುದೀಪ್ ಎದುರು ವಿನಯ್ ಬಗ್ಗೆ ಹೇಳಿದ ಮಾತು ವಿನಯ್ ಅವರಿಗೆ ಬಹಳ ಕೋಪ ತರಿಸಿದಂತಿತ್ತು.
ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಆಡಿಸಿದ ಸಣ್ಣ ಆಟವೊಂದರಲ್ಲಿ ಡ್ರೋನ್ ಪ್ರತಾಪ್, ವಿನಯ್ಗೆ ತುಳಿದು ಮೇಲೆ ಹೋಗುವುದು ಹೇಗೆ ಎಂಬ ಪುಸ್ತಕವೊಂದನ್ನು ನೀಡಿದರು. ‘ವಿನಯ್ ಅವರು ತಮ್ಮ ಗೆಳೆಯರು ತಪ್ಪು ಮಾಡಿದಾಗ ಅವರನ್ನು ಬೈಯ್ಯದೆ, ಬುದ್ಧಿ ಹೇಳದೆ ಹೊಗಳುತ್ತಲೇ ಇರುತ್ತಾರೆ. ಇದನ್ನು ನಂಬಿದ ಅವರ ಗೆಳೆಯರು ಅದನ್ನೇ ಮುಂದುವರೆಸಿ ಕೊನೆಗೆ ಮನೆಯಿಂದಲೇ ಹೊರಗೆ ಹೋಗುತ್ತಾರೆ. ಅವರ ಬೆಡ್ಶೀಟ್ಗಳನ್ನೆಲ್ಲ ತೆಗೆದುಕೊಂಡು ವಿನಯ್ ಅವರು ತಮ್ಮ ಹಾಸಿಗೆ ಮಾಡಿಕೊಳ್ಳುತ್ತಾರೆ’ ಎಂದು ಹೇಳಿದರು.
ಶನಿವಾರದ ಎಪಿಸೋಡ್ ಬಳಿಕ ವಿನಯ್ ಈ ವಿಷಯದ ಬಗ್ಗೆ ಪ್ರತಾಪ್ ಅನ್ನು ಪ್ರಶ್ನೆ ಮಾಡಿದರು. ಪ್ರತಾಪ್, ‘ನಾನು ಈ ಮನೆಯಲ್ಲಿ ಏನು ನೋಡಿದ್ದೇನೆಯೋ ಅದನ್ನು ಹೇಳಿದ್ದೇನೆ’ ಎಂದರು. ಬಳಿಕ ಪ್ರತಾಪ್ ಮೇಲೆ ವಾಗ್ದಾಳಿ ನಡೆಸಿದ ವಿನಯ್, ಪ್ರತಾಪ್ ಅನ್ನು ಚೀಪ್ ಸ್ಕ್ಯಾಮರ್, ಚೀಪ್ ಎಂದೆಲ್ಲ ವಾಗ್ದಾಳಿ ಮಾಡಿದರು. ಪ್ರತಾಪ್ ಅದನ್ನು ವಿನಯ್ ಎದುರು ನಿಂತು ಪ್ರಶ್ನೆ ಮಾಡಿದರು. ಸಂಗೀತಾ ಮಧ್ಯ ಪ್ರವೇಶಿಸುವ ಪ್ರಯತ್ನ ಮಾಡಿದರಾದರೂ ವಿನಯ್ ನಿಲ್ಲಲಿಲ್ಲ.
ಇದನ್ನೂ ಓದಿ:ಕೊನೆಗೂ ಮನೆಗೆ ಬಂದ ಡ್ರೋನ್ ಪ್ರತಾಪ್, ಮನೆಯವರ ಮುಂದೆ ಹೇಳಿದ್ದೇನು?
ಸುದೀಪ್ರ ಎಪಿಸೋಡ್ ಪ್ರಾರಂಭವಾದಾಗಲೂ ಸಹ ವಿನಯ್ ಇದೇ ವಿಷಯವನ್ನು ಚರ್ಚೆ ಗೆ ಎತ್ತಿಕೊಂಡರು. ಪ್ರತಾಪ್, ಇಲ್ಲದನ್ನು ನನ್ನ ವಿರುದ್ಧ ಹೇಳುತ್ತಾನೆ ಎಂದು ಹೇಳುತ್ತಾ ಭಾವುಕರಾಗಿ ಸಣ್ಣಗೆ ಅತ್ತರು ಸಹ. ಆದರೆ ಪ್ರತಾಪ್ ಸಹ ಹಿಂದೆ ಸರಿಯಲಿಲ್ಲ, ವಿನಯ್ ಅವರ ಪದಬಳಕೆ, ಅವರು ಎದುರಿಗಿರುವವರನ್ನು ಮಾತನಾಡಿಸುವ ರೀತಿ ಅಹಂಕಾರದಿಂದ ಕೂಡಿರುತ್ತದೆ. ಅವರು ಸಾಕಷ್ಟು ಬಾರಿ ಸ್ಪರ್ಧಿಗಳ ಬಗ್ಗೆ ಏನೇನೋ ಮಾತನಾಡಿದ್ದಾರೆ. ನಾವು ಮಾತನಾಡಿದಾಗ ಅವರಿಗೆ ಸಹಿಸಲು ಆಗುವುದಿಲ್ಲ. ನಾನು ಮನೆಯ ವಿಷಯ ಬಿಟ್ಟು ಹೊರಗಿನದ್ದನ್ನು ಮಾತಾಡಿಲ್ಲ ಎಂದರು.
ಸುದೀಪ್ ಇಬ್ಬರ ವಾದವನ್ನು ಆಲಿಸಿದರು ಆದರೆ ಯಾವುದೇ ತೀರ್ಪು ನೀಡಲಿಲ್ಲ. ಆದರೆ ಇಂದಿನ ಎಪಿಸೋಡ್ ನಲ್ಲಿ ಒಂದಂತೂ ಖಾತ್ರಿಯಾಯಿತು, ವಿನಯ್, ಮತ್ತೆ ತಮ್ಮ ಹಳೆಯ ‘ಲಯ’ಕ್ಕೆ ಮರಳಿದ್ದಾರೆ. ಡ್ರೋನ್ ಪ್ರತಾಪ್ ಕಳೆದೆಡರು ವಾರದಿಂದ ಇದ್ದ ಡಲ್ ವ್ಯಕ್ತಿತ್ವವನ್ನು ಸೈಡಿಗೆ ಇಟ್ಟು ಮತ್ತೆ ಸಕ್ರಿಯವಾಗಿದ್ದಾರೆ. ಭಯಪಟ್ಟು ಹಿಂದೆ ಸರಿಯುವುದರ ಬದಲಿಗೆ ಧೈರ್ಯವಾಗಿ ಎದುರಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ