ಕೊನೆಗೂ ಮನೆಗೆ ಬಂದ ಡ್ರೋನ್ ಪ್ರತಾಪ್, ಮನೆಯವರ ಮುಂದೆ ಹೇಳಿದ್ದೇನು?

Drone Prathap: ಅನಾರೋಗ್ಯದಿಂದ ಬಿಗ್​ಬಾಸ್ ಮನೆಯಿಂದ ಹೊರ ಹೋಗಿದ್ದ ಡ್ರೋನ್ ಪ್ರತಾಪ್ ಶನಿವಾರದ ಎಪಿಸೋಡ್​ನಲ್ಲಿ ಮನೆಯಲ್ಲಿ ಕಾಣಿಸಿಕೊಂಡರು. ತಮ್ಮ ಅನಾರೋಗ್ಯದ ಬಗ್ಗೆ ಮನೆಯ ಸದಸ್ಯರ ಮುಂದೆ ವರದಿ ಒಪ್ಪಿಸಿದರು.

ಕೊನೆಗೂ ಮನೆಗೆ ಬಂದ ಡ್ರೋನ್ ಪ್ರತಾಪ್, ಮನೆಯವರ ಮುಂದೆ ಹೇಳಿದ್ದೇನು?
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on: Jan 06, 2024 | 11:25 PM

ಡ್ರೋನ್ ಪ್ರತಾಪ್ (Drone Prathap)​ ಬಗ್ಗೆ ಕಳೆದ ಎರಡು-ಮೂರು ದಿನಗಳಿಂದ ಥರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಬಿಗ್​ಬಾಸ್ ಮನೆಯಲ್ಲಿ ಡ್ರೊನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಎರಡು ದಿನದ ಹಿಂದೆ ತುಸು ಜೋರಾಗಿ ಹಬ್ಬಿತ್ತು. ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು, ಪ್ರತಾಪ್​ಗೆ ಫುಡ್ ಪಾಯ್ಸನ್ ಆಗಿತ್ತೆಂದು ಸ್ಪಷ್ಟಪಡಿಸಿದರು. ಮೂರು ದಿನಗಳ ಕಾಲ ಮನೆಯಿಂದ ಹೊರಗೆ ಇದ್ದ ಡ್ರೋನ್ ಪ್ರತಾಪ್ ಶನಿವಾರದ ಎಪಿಸೋಡ್​ನಲ್ಲಿ ಮನೆಗೆ ಬಂದಿದ್ದಾರೆ.

ಶನಿವಾರದ ಎಪಿಸೋಡ್​ನಲ್ಲಿ ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಗೆ ಬಂದರು. ತಮ್ಮ ಮೆಲು ನಗೆ ಬೀರುತ್ತಾ ಬಿಗ್​ಬಾಸ್ ಮನೆಗೆ ಡ್ರೋನ್ ಪ್ರತಾಪ್ ಆಗಮಿಸಿದರು. ಕೂಡಲೇ ಓಡಿ ಹೋಗಿ ನಮ್ರತಾ, ಪ್ರತಾಪ್​ರನ್ನು ತಬ್ಬಿಕೊಂಡರು, ಸಂಗೀತಾ ಸಹ ಅಲ್ಲಿಯೇ ಇದ್ದರು. ಪ್ರತಾಪ್ ಅನ್ನು ಕರೆದುಕೊಂಡು ಹೋಗಿ ಪೂಜೆ ಮಾಡಿಸಲಾಯ್ತು. ಆ ಬಳಿಕ ನಿನ್ನನ್ನು ಬಹಳ ಮಿಸ್ ಮಾಡಿಕೊಂಡಿದ್ದಾಗಿ ಸಂಗೀತಾ, ಪ್ರತಾಪ್ ಬಳಿ ಹೇಳಿಕೊಂಡು ಭಾವುಕರಾದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸುಳಿವಿಲ್ಲ, ಸ್ಪರ್ಧಿಗಳಿಗೆ ಬಿಗ್​ಬಾಸ್ ಕೊಟ್ಟ ಮಾಹಿತಿ ಏನು?

ಅದಾದ ಬಳಿಕ ಡ್ರೋನ್ ಪ್ರತಾಪ್ ತಮಗೆ ಆಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ಮನೆಯವರ ಬಳಿ ಮಾಹಿತಿ ಹಂಚಿಕೊಂಡರು. ‘‘ಹೊಸ ವರ್ಷ ಆದಾಗಿನಿಂದಲೂ ನಾನು ಸರಿಯಾಗಿ ಊಟ ಸೇವಿಸಿರಲಿಲ್ಲ. ಯಾರು ಕೇಳಿದರು ಊಟ ಆಗಿದೆ ಎನ್ನುತ್ತಿದ್ದೆ. ಚಪಾತಿ ರೋಲ್ ಮಾಡುವಾಗ ಸಹ ನನ್ನ ಪಾಲಿನ ಚಪಾತಿ ಹಿಟ್ಟನ್ನು ಎತ್ತಿಟ್ಟುಬಿಡುತ್ತಿದ್ದೆ. ಕೊನೆಯ ಎರಡು ದಿನವಂತೂ ಊಟವನ್ನೇ ಮಾಡಲಿಲ್ಲ. ಇದರಿಂದ ಹೊಟ್ಟೆಯಲ್ಲಿ ಬರ್ನಿಂಗ್ ಇಶ್ಯೂ ಆಗಿ ಫುಡ್ ಪಾಯ್ಸನ್ ಆಗಿತ್ತು. ಚಿಕಿತ್ಸೆ ನೀಡಿದರು. ಈಗ ಆರೋಗ್ಯ ಸರಿಯಾಗಿದೆ. ಯಾರೂ ಏನೇನೋ ಊಹಿಸಬೇಡಿ’ ಎಂದು ಮನೆಯ ಸದಸ್ಯರ ಮುಂದೆ ಹೇಳಿದರು.

ಆ ಬಳಿಕ ಸುದೀಪ್ ಅವರು ವಾರದ ಪಂಚಾಯಿತಿಗೆ ಬಂದಾಗ ಡ್ರೋನ್ ಪ್ರತಾಪ್​ರ ಆರೋಗ್ಯ ವಿಚಾರಿಸಿದರು. ಆರಾಮವಾಗಿದ್ದೇನೆ ಎಂದು ಪ್ರತಾಪ್ ಹೇಳಿದರು. ಕಳೆದ ಕೆಲ ವಾರಗಳಿಂದ ಪ್ರತಾಪ್ ಮನೆಯಲ್ಲಿ ಡಲ್ ಆಗಿದ್ದರು. ಆದರೆ ಇಂದು ಸುದೀಪ್​ರ ಎಪಿಸೋಡ್​ನಲ್ಲಿ ಪ್ರತಾಪ್ ತುಸು ಗಟ್ಟಿಯಾಗಿ ಮಾತನಾಡಿದರು. ವಿನಯ್ ಅವರಿಗೆ, ವರ್ತೂರು ಸಂತೋಶ್ ಅವರ ವಿರುದ್ಧ ಮಾತನಾಡಿದರು. ಸಂಗೀತಾ ಸಹ, ಪ್ರತಾಪ್ ಅನ್ನುದ್ದೇಶಿಸಿ, ‘ನೀನು ಬಹಳ ಲೌಡ್ ಆಗಿ ಮಾತನಾಡುತ್ತಿದ್ದೀಯ, ಎದುರುತ್ತರ ಕೊಡುತ್ತಿದ್ದೀಯ, ಮುಂಚಿನಂತೆ ಇದ್ದುಬಿಡು ಸಾಕು’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ