‘ನನ್ನ ಮೇಲೆ ಆಗಿದ್ದ ಭಯ ಈಗೆಲ್ಲಿ ಹೋಯ್ತು?’; ಸುದೀಪ್ ಪ್ರಶ್ನೆಗೆ ತುಕಾಲಿ ಶಾಕ್
‘ಮುಂದಿನ ಬಾರಿ ನೀವು ಇದೇ ರೀತಿ ಮಾಡಿದರೆ ನನ್ನ ಧ್ವನಿ ಇಷ್ಟು ಕೂಲ್ ಆಗಿ ಇರೋದಿಲ್ಲ, ನೆನಪಿರಲಿ. ಇದು ನಾನು ನಿಮಗೆ ಕೊಡ್ತಿರೋ ಪ್ರಾಮಿಸ್’ ಎಂದರು ಕಿಚ್ಚ. ಅವರ ಖಡಕ್ ಕ್ಲಾಸ್ಗೆ ತುಕಾಲಿ ಸಂತೋಷ್ ಅವರು ಶಾಕ್ಗೆ ಒಳಗಾದರು. ಅವರಿಗೆ ಮರಳಿ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ.
ತುಕಾಲಿ ಸಂತೋಷ್ (Tukali Santhosh) ಅವರು ಆರಂಭದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅವರು ಹಲವು ವಿಚಾರದಲ್ಲಿ ಬದಲಾಗಿದ್ದಾರೆ. ಈ ಕಾರಣಕ್ಕೆ ಒಂದು ವರ್ಗದ ಜನರಿಗೆ ಅವರು ಇಷ್ಟ ಆಗುತ್ತಿದ್ದಾರೆ. ಮೊದಲು ಮಾತನಾಡಲು ಹಿಂಜರಿಯುತ್ತಿದ್ದರು. ಆದರೆ, ಈಗ ಹಾಗಿಲ್ಲ. ಅವರು ಅನೇಕ ವಿಚಾರಗಳ ಬಗ್ಗೆ ನಿರರ್ಗಳವಾಗಿ ಅಭಿಪ್ರಾಯ ತಿಳಿಸುತ್ತಾರೆ. ಈ ಬಗ್ಗೆ ಸುದೀಪ್ (Kichcha Sudeep) ಅವರಿಗೆ ಖುಷಿ ಇದೆ. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಕಿಚ್ಚ ಅಸಮಾಧಾನ ಹೊರಹಾಕಿದ್ದಾರೆ. ‘ನನ್ನನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದೀರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಸುದೀಪ್ ಅವರು ಕ್ಯಾಪ್ಟನ್ಸಿ ಬಗ್ಗೆ ಮಾತನಾಡುತ್ತಿದ್ದರು. ‘ಎಲ್ಲರೂ ಅಲ್ಲಿಗೆ ಹೋಗೋಕೆ ಇಷ್ಟ ಪಡ್ತೀರಿ. ನಾಯಕತ್ವದ ಜೊತೆ ಇಮ್ಯೂನಿಟಿ ಬರುತ್ತದೆ. ಸಾಕಷ್ಟು ಬೆನಿಫಿಟ್ ಸಿಗುತ್ತದೆ. ಇದಕ್ಕೋಸ್ಕರ ಅನೇಕ ಟಾಸ್ಕ್ ಇದೆ. ಈ ಆಟಕ್ಕಾಗಿ ಮೈ ಕೈ ಮೂಳೆ ಮುರಿದು ಕೊಳ್ತೀರಿ. ಅಲ್ಲಿಗೆ ಬಂದಮೇಲೆ ಆ ಸ್ಥಾನಕ್ಕೆ ಗೌರವ ಬೇಕು’ ಎಂದರು. ಆ ಬಳಿಕ ಸಂಗೀತಾ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಗುತ್ತಿದೆ ಎಂದು ಕೇಳಿದರು. ಈ ವೇಳೆ ತುಕಾಲಿ ಸಂತೋಷ್ ಅವರು ಕೈ ಎತ್ತಿದರು. ಅವರು ಸಂಗೀತಾನ ಹೊಗಳುವ ಭರದಲ್ಲಿ ನಮ್ರತಾ ಕ್ಯಾಪ್ಟನ್ಸಿಯನ್ನು ತೆಗಳಿದರು. ಈ ವಿಚಾರವಾಗಿ ವಾದ ವಿವಾದ ನಡೆಯಿತು.
ಯಾರೇ ಮಾತನಾಡುವಾಗ ತಮ್ಮ ಅಭಿಪ್ರಾಯ ಹೇಳಬೇಕು ಎಂದಿದ್ದವರು ಕೈ ಎತ್ತಬೇಕು. ಕೈ ಎತ್ತಿ ತಮ್ಮ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿಸಬೇಕು. ಸಂತೋಷ್ ಹೇಳಿದ ಮಾತಿಗೆ ವಿನಯ್ ಹಾಗೂ ನಮ್ರತಾ ಉತ್ತರಿಸುತ್ತಿದ್ದರು. ಈ ವೇಳೆ ತುಕಾಲಿ ಸಂತೋಷ್ ಅವರು ಕೈ ಎತ್ತದೇ ಮಧ್ಯೆ ಮಾತನಾಡಿದರು. ಇದರಿಂದ ಸುದೀಪ್ ಸಿಟ್ಟಾದರು. ‘ಮೊದಲ ವಾರದ ಪಂಚಾಯ್ತಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಭಯ ಎನ್ನುತ್ತಿದ್ದಿರಿ. ಈಗ ಆ ಭಯ ಎಲ್ಲಿ ಹೋಯ್ತು? ನನ್ನನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದೀರಾ’ ಎಂದು ಸುದೀಪ್ ಕೇಳಿದರು.
ಇದನ್ನೂ ಓದಿ: ‘ಇದೆಲ್ಲ ಅಲ್ಲಿದ್ದವರ ಹತ್ರ ಇಟ್ಕೊಳಿ, ನನ್ನ ಹತ್ತಿರ ಅಲ್ಲ’; ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್
‘ಅಣ್ಣ ಗೊತ್ತಾಗಲಿಲ್ಲ, ಕ್ಷಮಿಸಿ’ ಎಂದರು ತುಕಾಲಿ ಸಂತೋಷ್. ‘ಕ್ಷಮೆಯನ್ನು ಸ್ವೀಕರಿಸಿದ್ದೇನೆ. ಬಹುಶಃ ಇದು ಹತ್ತನೇ ಬಾರಿ ಇರಬಹುದು’ ಎಂದು ಸುದೀಪ್ ವ್ಯಂಗ್ಯವಾಗಿ ಮಾತನಾಡಿದರು. ಆ ಬಳಿಕ ತುಕಾಲಿ ಸಂತೋಷ್ ಅವರಿಗೆ ಸುದೀಪ್ ಒಂದು ಪ್ರಾಮಿಸ್ ಮಾಡಿದರು. ‘ಮುಂದಿನ ಬಾರಿ ನೀವು ಇದೇ ರೀತಿ ಮಾಡಿದರೆ ನನ್ನ ಧ್ವನಿ ಇಷ್ಟು ಕೂಲ್ ಆಗಿ ಇರೋದಿಲ್ಲ, ನೆನಪಿರಲಿ. ಇದು ನಾನು ನಿಮಗೆ ಕೊಡ್ತಿರೋ ಪ್ರಾಮಿಸ್’ ಎಂದರು ಕಿಚ್ಚ. ಅವರ ಖಡಕ್ ಕ್ಲಾಸ್ಗೆ ತುಕಾಲಿ ಸಂತೋಷ್ ಅವರು ಶಾಕ್ಗೆ ಒಳಗಾದರು. ಅವರಿಗೆ ಮರಳಿ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಣೆಗೆ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Sun, 7 January 24