‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಹತ್ತು ಹಲವು ಮನಸ್ಥಿತಿಗಳು ಒಂದೆಡೆ ಸೇರುತ್ತವೆ. ಹೀಗಿದ್ದಾಗ ಜಗಳಗಳು ಕಾಮನ್. ಸಾಮಾನ್ಯವಾಗಿ ಬಿಗ್ ಬಾಸ್ಗೆ ಬಂದ ಮೊದಲ ವಾರ ಎಲ್ಲರೂ ಶಾಂತರೀತಿಯಿಂದ ವರ್ತಿಸೋಕೆ ಪ್ರಯತ್ನಿಸತ್ತಾರೆ. ಮೊದಲ ದಿನವೇ ಏಕೆ ಕಿತ್ತಾಟ ಎನ್ನುವ ಭಾವನೆ ಅನೇಕರಲ್ಲಿ ಇರುತ್ತದೆ. ಆದರೆ, ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಈ ರೀತಿ ಆಗಿಲ್ಲ. ಎರಡನೇ ದಿನಕ್ಕೆ ಕಿತ್ತಾಟ ಶುರುವಾಗಿದೆ. ಸಂಗೀತಾ ಶೃಂಗೇರಿ ಹಾಗೂ ವಿನಯ್ ಮಧ್ಯೆ ಕಿತ್ತಾಟ ನಡೆದಿದೆ.
ಈ ಬಾರಿ ದೊಡ್ಮನೆಗೆ ಎಂಟ್ರಿ ಪಡೆಯೋದು ಅಷ್ಟು ಸುಲಭದ್ದಾಗಿರಲಿಲ್ಲ. ಶೋ ನೋಡೋಕೆ ಬಂದವರಿಗೆ ಓಟಿಂಗ್ ಮಾಡುವ ಅವಕಾಶ ಇತ್ತು. ಹೀಗೆ ಓಟಿಂಗ್ ಮಾಡಿದಾಗ ಶೇ.80ರ ಮೇಲೆ ಬಂದರೆ ಅವರು ಅರ್ಹರು ಎಂದು ಪರಿಗಣಿಸಲಾಗಿತ್ತು. ಇನ್ನು, ಶೇ.40ರಿಂದ 79 ಇದ್ದರೆ ಅವರನ್ನು ಅನರ್ಹರು ಎಂದು ಪರಿಗಣಿಸಿ ಬಿಗ್ ಬಾಸ್ ಮನೆ ಒಳಗೆ ಕಳುಹಿಸಲಾಯಿತು.
ಅನರ್ಹರನ್ನು ನಾಮಿನೇಟ್ ಮಾಡಲು ಅರ್ಹರಿಗೆ ಅವಕಾಶ ಇತ್ತು. ಈ ಪೈಕಿ ವಿನಯ್ ಅವರು ಸಂಗೀತಾ ಹೆಸರನ್ನು ಹೇಳಿದರು. ಅನರ್ಹರಿಗೆ ಸೋಫಾ, ಬೆಡ್ರೂಂ ಬಳಕೆಗೆ ಅವಕಾಶ ಇರಲಿಲ್ಲ. ಆದಾಗ್ಯೂ ಸಂಗೀತಾ ಅವರು ಸೋಫಾ ಮೇಲೆ ಕುಳಿತರು. ಇದೇ ವಿಚಾರ ಇಟ್ಟುಕೊಂಡು ವಿನಯ್ ಅವರು ಸಂಗೀತಾ ಅವರನ್ನು ನಾಮಿನೇಟ್ ಮಾಡಿದರು. ಇದಕ್ಕೆ ಸಂಗೀತಾ ಸಿಟ್ಟಾಗಿದ್ದಾರೆ.
‘ನಾನು ತಪ್ಪು ಮಾಡಿದ್ದರೆ ಬಿಗ್ ಬಾಸ್ ಶಿಕ್ಷೆ ಕೊಡುತ್ತಿದ್ದರು. ನೀವೇ ಬಿಗ್ ಬಾಸ್ ಆಗ್ಬಿಟ್ರಲ್ಲ’ ಎಂದರು ಸಂಗೀತಾ. ‘ನನ್ನತ್ರ ಯಾರೂ ಮಾತಾಡೋದನ್ನು ಇಟ್ಕೋಬೇಡಿ’ ಎಂದು ವಿನಯ್ ಎಚ್ಚರಿಕೆ ಕೊಟ್ಟರು. ಈ ಹಿನ್ನೆಲೆಯಲ್ಲಿ ಇವರ ಬಿಗ್ ಬಾಸ್ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಯ್ತು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವ ಫಿಟ್ನೆಸ್ ಫ್ರೀಕ್ ಸುಂದರಿಯ ಫೋಟೋಸ್
‘ಬಿಗ್ ಬಾಸ್’ ಮನೆಯಲ್ಲಿ 17 ಸ್ಪರ್ಧಿಗಳು ಇದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಒಂದು ದಿನದ ಅತಿಥಿಯಾಗಿ ದೊಡ್ಮನೆ ಸೇರಿದ್ದರು. ಅವರು ಒಂದೇ ದಿನಕ್ಕೆ ವಾಪಸ್ ತೆರಳಿದ್ದಾರೆ. ಅವರು ಬಿಗ್ ಬಾಸ್ಗೆ ಬಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Tue, 10 October 23