ಈ ವಾರ ನಾಮಿನೇಟ್ ಆದವರ್ಯಾರು: ಹೊರ ಹೋಗುವುದ್ಯಾರು?

|

Updated on: Dec 12, 2023 | 11:33 PM

Bigg Boss: ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಲು ಈ ವಾರ ನಾಮಿನೇಟ್ ಮಾಡಿದವರು ಯಾರು? ಈ ವಾರ ಸೇಫ್ ಆಗಿದ್ಯಾರು?

ಈ ವಾರ ನಾಮಿನೇಟ್ ಆದವರ್ಯಾರು: ಹೊರ ಹೋಗುವುದ್ಯಾರು?
ಬಿಗ್​ಬಾಸ್
Follow us on

ಬಿಗ್​ಬಾಸ್ (BiggBoss) ಮನೆಯಲ್ಲಿ ಕಳೆದ ವಾರ ನಡೆದ ಜಗಳ-ಕಿತ್ತಾಟದ ಬಿಸಿ ಇನ್ನೂ ಪೂರ್ಣವಾಗಿ ಆರಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್ ನೀಡುವ ಮೂಲಕ ಮನೆಯ ವಾತಾವರಣವನ್ನು ತಿಳಿ ಗೊಳಿಸುವ ಪ್ರಯತ್ನವನ್ನು ಬಿಗ್​ಬಾಸ್ ಮಾಡಿದ್ದಾರಾದರೂ, ಆ ಟಾಸ್ಕ್​ಗೂ ಮುನ್ನ ನಡೆದ ನಾಮಿನೇಷನ್, ಕಳೆದ ವಾರ ನಡೆದ ಜಿದ್ದಾ-ಜಿದ್ದು ಸ್ಪರ್ಧಿಗಳ ಮನದಲ್ಲಿ ಹಾಗೆಯೇ ಇದೆ ಎಂಬುದಕ್ಕೆ ಸಾಕ್ಷಿಯಾಯಿತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸ್ವಲ್ಪ ಕಡಿಮೆ ಮಂದಿ ನಾಮಿನೇಟ್ ಆಗಿದ್ದಾರೆ, ಆದರೆ ಕಳೆದ ವಾರ ಇದ್ದ ಮುಖಗಳು ಈ ವಾರವೂ ಕೆಲವು ಇವೆ.

ಕಳೆದ ಬಾರಿ ನಾಮಿನೇಷನ್​ನಿಂದ ಹೊರಗೆ ಉಳಿದಿದ್ದ ವೈಲ್ಡ್ ಕಾರ್ಡ್ ಎಂಟ್ರಿಗಳಾದ ಅವಿನಾಶ್ ಹಾಗೂ ಪವಿ ಅವರನ್ನು ಈ ಬಾರಿ ನಾಮಿನೇಟ್ ಮಾಡುವ ಅವಕಾಶ ಸ್ಪರ್ಧಿಗಳಿಗೆ ಇತ್ತು. ಬಹುತೇಕರು ವೈಲ್ಡ್ ಕಾರ್ಡ್ ಎಂಟ್ರಿಗಳನ್ನು ಹೊರಗೆ ಕಳಿಸುವ ಪ್ರಯತ್ನ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು, ಅಂತೆಯೇ ಕೆಲವರು ವೈಲ್ಡ್ ಕಾರ್ಡ್ ಎಂಟ್ರಿ ಸದಸ್ಯರ ಹೆಸರು ತೆಗೆದುಕೊಂಡರಾದರೂ ನಾಮಿನೇಟ್ ಆಗಿದ್ದು ಒಬ್ಬರು ಮಾತ್ರ.

ಈ ಬಾರಿ ಸೀಕ್ರೆಟ್ ರೂಂನಲ್ಲಿ ನಾಮಿನೇಷನ್ ನಡೆಯಿತು, ಮೊದಲ ಹೋದ ನಮ್ರತಾ ಆರು ಮಂದಿಯ ಸ್ಪರ್ಧಿಗಳ ಚಿತ್ರವನ್ನು ತೂಗು ಹಾಕಿ ಆರು ಮಂದಿಯನ್ನು ನಾಮಿನೇಟ್ ಮಾಡಿದರು. ನಂತರ ಬಂದವರು ಇಬ್ಬರನ್ನು ನಾಮಿನೇಟ್ ಮಾಡಬೇಕಾಗಿತ್ತು. ನಾಮಿನೇಟ್ ಮಾಡಬೇಕಾದವರ ಚಿತ್ರಗಳನ್ನು ಅದೇ ಗೋಡೆಯ ಮೇಲೆ ತೂಗು ಹಾಕಬೇಕಿತ್ತು. ಅಂತೆಯೇ ಎಲ್ಲ ಸ್ಪರ್ಧಿಗಳು ಬಂದು ತಾವು ನಾಮಿನೇಟ್ ಮಾಡಲು ಇಚ್ಛಿಸಿದವರ ಫೋಟೊಗಳನ್ನು ಗೋಡೆಗೆ ತೂಗು ಹಾಕಿದರು.

ಇದನ್ನೂ ಓದಿ:ಬಿಗ್​ಬಾಸ್ ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್: ಕಾರಣವೇನು?

ಕಾರ್ತಿಕ್, ವಿನಯ್​ ಹೆಸರನ್ನು ನಾಮಿನೇಟ್ ಮಾಡಿದ್ದು, ವರ್ತೂರು ಅವರು ಕಾರ್ತಿಕ್ ಹಾಗೂ ತನಿಷಾ ಹೆಸರನ್ನು ನಾಮಿನೇಟ್ ಮಾಡಿದ್ದು ಆಶ್ಚರ್ಯಕಾರಿಯಾಗಿತ್ತು. ಸಿರಿ ಅವರು ತುಕಾಲಿಯನ್ನು, ಪವಿಯನ್ನು ಮುಖ್ಯವಾಗಿ ನಾಮಿನೇಟ್ ಮಾಡಿದರು. ಸಂಗೀತಾ ಅವರು ತುಕಾಲಿಯನ್ನು, ನಮ್ರತಾ ಹಾಗೂ ವಿನಯ್​ ಅನ್ನು ನಾಮಿನೇಟ್ ಮಾಡಿದರು ತುಕಾಲಿ ಸಂತು, ಸಂಗೀತಾ, ಡ್ರೋನ್ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು.

ಕೊನೆಯದಾಗಿ ವಿನಯ್, ಸಂಗೀತಾ, ಪವಿ, ಡ್ರೋನ್ ಪ್ರತಾಪ್, ಮೈಖಲ್, ಸಿರಿ ಅವರುಗಳು ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆದರು. ಕಳೆದ ವಾರ ನಾಮಿನೇಟ್ ಆಗಿದ್ದ ತುಕಾಲಿ, ನಮ್ರತಾ, ಕಾರ್ತಿಕ್ ಅವರುಗಳು ಸೇಫ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ