‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಭಕ್ಕೆ ಇನ್ನು ಉಳಿದಿರೋದು ಮೂರು ದಿನಗಳು ಮಾತ್ರ. ಈ ಬಾರಿ ಯಾವೆಲ್ಲ ಕ್ಷೇತ್ರದ, ಯಾವೆಲ್ಲಾ ಸ್ಪರ್ಧಿಗಳು ಭಾಗವಹಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಹೀಗಿರುವಾಗಲೇ ಸ್ಪರ್ಧಿಗಳ ಫೋಟೋಗಳು ಲೀಕ್ ಆಗಿವೆ. ಇದನ್ನು ಮಾಡಿದ್ದು ಬೇರಾರೂ ಅಲ್ಲ, ಸ್ವತಃ ಕಲರ್ಸ್ ಕನ್ನಡದವರೇ. ಅವರು ಕೆಲವು ಸ್ಪರ್ಧಿಗಳ ಬ್ಲರ್ ಫೋಟೋಗಳನ್ನು ಹಂಚಿಕೊಂಡಿದ್ದು, ವೀಕ್ಷಕರ ತಲೆಗೆ ಹುಳಬಿಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಭ ಸೆಪ್ಟೆಂಬರ್ 29ರಂದು ನಡೆಯಲಿದೆ. ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲು ಕಲರ್ಸ್ ಕನ್ನಡ ನಿರ್ಧರಿಸಿದೆ. ‘ರಾಜಾ ರಾಣಿ’ ಶೋ ಫಿನಾಲೆಯಲ್ಲಿ ಕೆಲವು ಕಂಟೆಸ್ಟ್ಗಳನ್ನು ರಿವೀಲ್ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲು. ಅದಕ್ಕೂ ಮೊದಲು ಪ್ರೋಮೋ ರಿಲೀಸ್ ಆಗಿದ್ದು, ಸ್ಪರ್ಧಿಗಳ ಮುಖವನ್ನು ತೋರಿಸಲಾಗಿದೆ.
ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್’ಗೆ ಸಂಬಂಧಿಸಿದ ಹೊಸ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಬರೋ ಒಂದು ಕ್ಲಿಪ್ನಲ್ಲಿ ಕೆಲವು ಸ್ಪರ್ಧಿಗಳ ಫೋಟೋಗಳನ್ನು ತೋರಿಸಲಾಗಿದೆ. ಎಲ್ಲರನ್ನೂ ಬ್ಲರ್ ಮಾಡಲಾಗಿದೆ. ಇದು ವೀಕ್ಷಕರ ತಲೆಗೆ ಹುಳಬಿಟ್ಟಂತೆ ಆಗಿದೆ. ಹೀಗಾಗಿ ಇವರು ಯಾರು ಎಂದು ಊಹಿಸುವ ಪ್ರಯತ್ನ ಮಾಡುತ್ತಿದ್ದಾರೆ.
Any guess #BBK11 contestants????#BiggBossKannada11 #BiggBoss #BiggBossKannada #ColorsKannada #JioCinema pic.twitter.com/n8g0Qu9pm2
— Cine Sanchike | ಸಿನಿ ಸಂಚಿಕೆ 🎞️ (@cinesanchike) September 25, 2024
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ನಲ್ಲಿ ಎರಡು ಮನೆ; ಅಪ್ಡೇಟ್ ಕೊಟ್ಟ ಸುದೀಪ್
ಈ ಬಾರಿ ಬಿಗ್ ಬಾಸ್ ವಿಶೇಷವಾಗಿರಲಿದೆ. 11ನೇ ಸೀಸನ್ ಎಂಬ ಕಾರಣಕ್ಕೆ ಅದ್ದೂರಿತನ ಹೆಚ್ಚಿಸಲು ನಿರ್ಧರಿಸಲಾಗಿದೆ. ‘ನರಕ ಹಾಗೂ ಸ್ವರ್ಗ’ ಕಾನ್ಸೆಪ್ಟ್ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಮೂಡಿ ಬರುತ್ತಿದೆ. ಕಿಚ್ಚ ಸುದೀಪ್ ಅವರ ಸಾರಥ್ಯ ಇರಲಿದೆ.
ಕಳೆದ ವರ್ಷ ‘ಬಿಗ್ ಬಾಸ್’ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಟಫ್ ಕಾಂಪಿಟೇಷನ್ ಇತ್ತು. ಹಾಸ್ಯಕ್ಕೆ ಜಾಗ ಇಲ್ಲದೆ, ಎಲ್ಲರೂ ಕಿತ್ತಾಡಿಕೊಂಡಿದ್ದರು. ಈ ಬಾರಿ ಹಾಗಾಗಿದರಲಿ ಎಂಬುದು ಎಲ್ಲರ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:44 pm, Thu, 26 September 24