ಕೆಲವೇ ಗಂಟೆಗಳ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಪ್ರೋಮೋ ಬಿಡುಗಡೆ ಆಯಿತು. ಇದನ್ನು ನೋಡಿದ ವೀಕ್ಷಕರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಈ ಪ್ರೋಮೋದಲ್ಲಿ ಅತಿ ಹೆಚ್ಚು ಹೈಲೈಟ್ ಆಗಿರುವುದು ಕಿಚ್ಚ ಸುದೀಪ್. ಹೌದು, ಈ ಬಾರಿ ಆ್ಯಂಕರ್ ಬದಲಾಗುತ್ತಾರೆ ಎಂಬ ಬಗ್ಗೆ ಗುಮಾನಿ ಇತ್ತು. ಆ ಗುಮಾನಿಯಲ್ಲಿ ಹೆಚ್ಚು ಮಾಡುವ ರೀತಿಯಲ್ಲಿ ಈ ಮೊದಲು ಒಂದು ಪ್ರೋಮೋ ಬಂದಿತ್ತು. ಆದರೆ ಈಗ ಬಿಡುಗಡೆ ಆಗಿರುವ ಹೊಸ ಪ್ರೋಮೋದಲ್ಲಿ ಸುದೀಪ್ ಅವರು ಕಾಣಿಸಿಕೊಂಡಿರುವುದರಿಂದ ಎಲ್ಲ ಅನುಮಾನಗಳು ಬಗೆಹರಿದಿವೆ. ‘ಬಿಬಿಕೆ 11’ ಪ್ರೋಮೋ ನೋಡಿದ ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಕಲರ್ಸ್ ಕನ್ನಡ’ ಸೋಶಿಯಲ್ ಮೀಡಿಯಾದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಪ್ರೋಮೋವನ್ನು ಹಂಚಿಕೊಂಡಿದೆ. ಅದಕ್ಕೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ‘ಕೃಷ್ಣ ಇಲ್ಲದೇ ಮಹಾಭಾರತ ಇಲ್ಲ. ಕಿಚ್ಚ ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಕನ್ನಡ ಇಲ್ಲ’ ಎಂದು ಫ್ಯಾನ್ಸ್ ಅಭಿಪ್ರಾಯ ತಿಳಿಸಿದ್ದಾರೆ. ‘ಕಿಚ್ಚ ಸುದೀಪ್ ಅವರೇ ಆ್ಯಂಕರ್ ಎಂಬುದು ತಿಳಿದು ಈಗ ಸಮಾಧಾನ ಆಯ್ತು’ ಎಂದು ಕೂಡ ಅನೇಕರು ಹೇಳಿದ್ದಾರೆ.
‘ನಾವು ಬಿಗ್ ಬಾಸ್ ನೋಡುವುದೇ ಸುದೀಪ್ ಅವರಿಗೋಸ್ಕರ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ‘ಬದಲಾವಣೆ ಜಗದ ನಿಯಮ; ಅದಕ್ಕೆ ಬಿಗ್ ಬಾಸ್ ಕೂಡ ಹೇಳೋದು ‘ಹೌದು ಸ್ವಾಮಿ’. ಆದರೆ ಇವರ ವಿಚಾರದಲ್ಲಿ ಬದಲಾವಣೆ ನೋ ವೇ, ಚಾನ್ಸೇ ಇಲ್ಲ’ ಎಂದು ಈ ಪ್ರೋಮೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ಮಾತನ್ನು ಸುದೀಪ್ ಫ್ಯಾನ್ಸ್ ಕೂಡ ನಿಜ ಎಂದಿದ್ದಾರೆ.
‘ಇನ್ಮೇಲೆ ಕಲರ್ಸ್ ಕನ್ನಡ ನಂಬರ್ 1 ಆಗುತ್ತೆ’ ಎಂದು ಕೆಲವು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಇದು 11ನೇ ಸೀಸನ್ ಆದ್ದರಿಂದ ಈ ಬಾರಿ ಬಿಗ್ ಬಾಸ್ ಶೋ ತುಂಬ ಸ್ಪೆಷಲ್ ಆಗಿರಲಿದೆ ಎಂಬ ನಿರೀಕ್ಷೆ ವೀಕ್ಷಕರಿಗೆ ಇದೆ. ಅದಕ್ಕೆ ತಕ್ಕಂತೆಯೇ ಪ್ರೋಮೋದಲ್ಲಿ ಸುದೀಪ್ ಅವರು ‘ಇದು ಹೊಸ ಅಧ್ಯಾಯ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಇಷ್ಟು ಕಳಪೆ ಬಿಗ್ ಬಾಸ್ ನಿರೂಪಕ ಬೇರೆ ಯಾರೂ ಇಲ್ಲ’: ಸ್ಟಾರ್ ನಟನ ವಿರುದ್ಧ ನೆಟ್ಟಿಗರ ಅಸಮಾಧಾನ
ಸೆಪ್ಟೆಂಬರ್ 29ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಲಿದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬುದನ್ನು ತಿಳಿಯುವ ಕಾತರ ಎಲ್ಲರಲ್ಲೂ ಇದೆ. ಇನ್ನು, ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆಯ ಕೆಲಸಗಳಲ್ಲೂ ನಿರತರಾಗಿದ್ದಾರೆ. ಅದರ ನಡುವೆ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.