AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಷ್ಟು ಕಳಪೆ ಬಿಗ್​ ಬಾಸ್​ ನಿರೂಪಕ ಬೇರೆ ಯಾರೂ ಇಲ್ಲ’: ಸ್ಟಾರ್​ ನಟನ ವಿರುದ್ಧ ನೆಟ್ಟಿಗರ ಅಸಮಾಧಾನ

ಬಿಗ್​ ಬಾಸ್​ ನಿರೂಪಣೆ ಮಾಡುವುದು ಸುಲಭದ ಕೆಲಸ ಅಲ್ಲ. ತಾನೂ ಕೂಡ ಬಿಗ್​ ಬಾಸ್​ ನಡೆಸಿಕೊಡಬಲ್ಲೆ ಎಂದು ಜವಾಬ್ದಾರಿ ಹೊತ್ತುಕೊಂಡ ಸ್ಟಾರ್​ ನಟನಿಗೆ ವೀಕ್ಷಕರು ಕಳಪೆ ಪಟ್ಟ ನೀಡಿದ್ದಾರೆ. ಹೌದು, ಬಾಲಿವುಡ್​ ನಟ ಅನಿಲ್​ ಕಪೂರ್​ ಅವರಿಗೆ ನೆಟ್ಟಿಗರಿಂದ ತೀವ್ರ ಟೀಕೆ ಎದುರಾಗಿದೆ. ‘ಬಿಗ್​ ಬಾಸ್​ ಒಟಿಟಿ 3’ ಶೋ ನೋಡಿದವರು ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಇಷ್ಟು ಕಳಪೆ ಬಿಗ್​ ಬಾಸ್​ ನಿರೂಪಕ ಬೇರೆ ಯಾರೂ ಇಲ್ಲ’: ಸ್ಟಾರ್​ ನಟನ ವಿರುದ್ಧ ನೆಟ್ಟಿಗರ ಅಸಮಾಧಾನ
ಬಿಗ್​ ಬಾಸ್
ಮದನ್​ ಕುಮಾರ್​
|

Updated on: Jul 27, 2024 | 5:19 PM

Share

ಹಲವು ಭಾಷೆಯಲ್ಲಿ ಬಿಗ್​ ಬಾಸ್​ ರಿಯಾಲಿಟಿ ಶೋ ಫೇಮಸ್​ ಆಗಿದೆ. ಟಿವಿಯಲ್ಲಿ ಪ್ರಸಾರ ಆಗುವ ಕಾರ್ಯಕ್ರಮ ಮಾತ್ರವಲ್ಲದೇ ಒಟಿಟಿ ವರ್ಷನ್​ ಕೂಡ ಜನಮೆಚ್ಚುಗೆ ಗಳಿಸಿದೆ. ಆದರೆ ಈ ಕಾರ್ಯಕ್ರಮವನ್ನು ಯಾರು ನಡೆಸಿಕೊಡುತ್ತಾರೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಕನ್ನಡದಲ್ಲಿ ನಟ ಸುದೀಪ್​ ಅವರು ಬಿಗ್​ ಬಾಸ್​ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​ ಕೂಡ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ಅನಿಲ್​ ಕಪೂರ್​ ಅವರು ಅತಿ ಕಳಪೆ ನಿರೂಪಕ ಎಂಬ ಟೀಕೆಗೆ ಒಳಗಾಗಿದ್ದಾರೆ.

ಹಿಂದಿಯಲ್ಲಿ ‘ಬಿಗ್​ ಬಾಸ್​ ಒಟಿಟಿ’ ಶೋ ಸೆನ್ಸೇಷನ್​ ಸೃಷ್ಟಿಸಿದೆ. ಈ ಮೊದಲು ಎರಡು ಸೀಸನ್​ಗಳು ಯಶಸ್ವಿ ಆಗಿದ್ದವು. ಈ ವರ್ಷ ‘ಬಿಗ್​ ಬಾಸ್​ ಒಟಿಟಿ 3’ ನಡೆಯುತ್ತಿದೆ. ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು, ಎರಡನೇ ಸೀಸನ್​ಗೆ ಸಲ್ಮಾನ್​ ಖಾನ್​ ನಿರೂಪಕ ಆಗಿದ್ದರು. ಮೂರನೇ ಸೀಸನ್​ನಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಅನಿಲ್​ ಕಪೂರ್​ ಅವರಿಗೆ ನೀಡಲಾಯಿತು.

ಈಗ ಹಿಂದಿ ‘ಬಿಗ್​ ಬಾಸ್​ ಒಟಿಟಿ 3’ ಕೊನೇ ಹಂತ ತಲುಪಿದೆ. ಶೀಘ್ರದಲ್ಲೇ ಇದರ ಫಿನಾಲೆ ನಡೆಯಲಿದೆ. ಇಷ್ಟು ದಿನಗಳ ಕಾಲ ಅನಿಲ್​ ಕಪೂರ್​ ಅವರ ನಿರೂಪಣೆಯನ್ನು ನೋಡಿದ ವೀಕ್ಷಕರು ಬೇಸತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಇನ್ನೆಂದೂ ಅನಿಲ್​ ಕಪೂರ್​ ಅವರು ಬಿಗ್​ ಬಾಸ್​ ನಿರೂಪಣೆ ಮಾಡುವುದು ಬೇಡ ಎಂದು ಜನರು ತಾಕೀತು ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿ ಹಿನಾ ಖಾನ್​ಗೆ 3ನೇ ಹಂತದ ಸ್ತನ ಕ್ಯಾನ್ಸರ್​; ಶಾಕಿಂಗ್​ ವಿಚಾರ ತಿಳಿಸಿದ ನಟಿ

ಬಿಗ್​ ಬಾಸ್​ ನಿರೂಪಣೆ ಮಾಡುವವರಿಗೆ ಒಂದು ಬಗೆಯ ಗತ್ತು ಇರಬೇಕು. ಸಂದರ್ಭಕ್ಕೆ ತಕ್ಕಂತೆ ತುಂಬ ಸಹಜವಾಗಿ ಮಾತನಾಡುವ ಕಲೆ ಇರಬೇಕು. ಈ ಗುಣಗಳು ಅನಿಲ್​ ಕಪೂರ್​ ಅವರಿಗೆ ಇಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ. ‘ಇವರದ್ದು ಫೇಕ್​ ವ್ಯಕ್ತಿತ್ವ, ಫೇಕ್​ ನಗು, ಫೇಕ್​ ಸಿಟ್ಟು. ಅತಿ ಕಳಪೆ ನಿರೂಪಕ ಇವರು. ಇಂಥವರು ಬಂದರೆ ಬಿಗ್ ಬಾಸ್​ ಅಂತ್ಯವಾಗುತ್ತದೆ’ ಎಂದು ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್