‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಯಲ್ಲಿ ರಜತ್ ಔಟ್ ಆಗಿದ್ದಾರೆ. ಫಿನಾಲೆಯಲ್ಲಿ ಇದ್ದ ಆರು ಸ್ಪರ್ಧಿಗಳ ಸಂಖ್ಯೆ ಎರಡಕ್ಕೆ ಇಳಿಕೆ ಆಗಿದೆ. ರಜತ್ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿತ್ತು. ವೈಲ್ಡ್ ಕಾರ್ಡ್ ಮೂಲಕ 50 ದಿನ ಆದ ಬಳಿಕ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಭಾನುವಾರ (ಜನವರಿ 26) ಹೊರ ಹೋಗಿದ್ದಾರೆ. ಈ ಮೂಲಕ ತ್ರಿವಿಕ್ರಂ ಹಾಗೂ ಹನುಮಂತ ಉಳಿದುಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸಾಕಷ್ಟು ಗಮನ ಸೆಳೆದಿದೆ. ಈವರೆಗೆ 20 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಆ ಪೈಕಿ ಫಿನಾಲೆಗೆ ಆರು ಮಂದಿ ಮಾತ್ರ ಬಂದಿದ್ದರು. ಮೋಕ್ಷಿತಾ, ಭವ್ಯಾ ಗೌಡ, ಹನುಮಂತ, ತ್ರಿವಿಕ್ರಂ, ಮಂಜು ಮಧ್ಯೆಯ ಸ್ಪರ್ಧೆಯಲ್ಲಿ ಭವ್ಯಾ ಮೊದಲು ಹೋದರೆ, ನಂತರ ಮಂಜು, ಮೋಕ್ಷಿತಾ ಔಟ್ ಆದರು. ನಂತರ ರಜತ್ ಅವರು ವೇದಿಕೆಯ ಮೇಲೆ ಬಂದು ಹೊರ ಹೋದರು. ಅವರು ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ನಡೆದಿದ್ದಾರೆ.
ಬಿಗ್ ಬಾಸ್ ವೇದಿಕೆ ಏರಿದಾಗಿನಿಂದಲೂ ಒಂದು ಹೊಸ ಅಲೆ ಸೃಷ್ಟಿ ಮಾಡಿದ್ದರು ರಜತ್. ಅವರು ಟಾಸ್ಕ್ನಿಂದ ಹಿಡಿದು ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಈ ಮೂಲಕ ದೊಡ್ಮನೆಗೆ ಚೈತನ್ಯ ಕೊಟ್ಟರು. ರಜತ್ ಅವರು ಟಾಸ್ಕ್ನಲ್ಲಿ ಭೇಷ್ ಎನಿಸಿಕೊಂಡಿದ್ದರು. ಇದುವೇ ಅವರಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಮನರಂಜನೆಯಲ್ಲೂ ಅವರು ಹಿಂದೆ ಬಿದ್ದಿರಲಿಲ್ಲ.
ಇದನ್ನೂ ಓದಿ: ರಜತ್ಗೆ ಮಾತ್ರ ಜಾಕೆಟ್ ಕಳುಹಿಸಿದ ಸುದೀಪ್? ಕಾರಣ ಏನು?
ರಜತ್ ಅವರಿಗೆ ದುರಹಂಕಾರ ಇತ್ತೀಚೆಗೆ ಹೆಚ್ಚಾಯಿತೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿತ್ತು. ಅವರು ಫೇವರಿಸಂ ಆರೋಪ ಕೂಡ ಹೊತ್ತರು. ಎಲ್ಲಕ್ಕಿಂತ ಮುಖ್ಯವಾಗಿ ರಜತ್ ಅವರು ಹಲವು ಸಮಯದಲ್ಲಿ ಭಾಷೆ ಮೇಲೆ ಹಿಡಿತ ಇಟ್ಟುಕೊಳ್ಳದೆ ಎಡವಿದ್ದರು. ಈ ವಿಚಾರದಲ್ಲಿ ಸುದೀಪ್ ಅನೇಕ ಬಾರಿಗೆ ಅವರಿಗೆ ಕಿವಿಮಾತು ಕೂಡ ಹೇಳಿದ್ದರು. ಆದರೆ, ರಜತ್ ಇದನ್ನು ತಿದ್ದುಕೊಂಡಿಲ್ಲ. ಎಲ್ಲರನ್ನೂ ಹೊರಕ್ಕೆ ಕಳಿಸಿ, ಕಪ್ ಗೆದ್ದೇ ಹೋಗೋದು ಎಂದು ರಜತ್ ಹೇಳಿದ್ದರು. ಅವರ ಆಸೆ ಈಡೇರಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:26 pm, Sun, 26 January 25