ಹೀಗೆ ಆಟ ಮುಂದುವರಿದರೆ ಹನುಮಂತನೇ ವಿನ್ನರ್? ಸೂಚನೆ ಕೊಟ್ಟ ಸುದೀಪ್

|

Updated on: Jan 13, 2025 | 8:54 AM

ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ ವಾರಗಳಲ್ಲಿ, ಹನುಮಂತ ಅವರ ಆಟದ ಬಗ್ಗೆ ಸುದೀಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಹನುಮಂತರಿಗೆ "ಹೀಗೆಯೇ ಆಟ ಆಡಿ" ಎಂದು ಹೇಳಿದ್ದು, ಅವರ ಗೆಲುವಿನ ಸಾಧ್ಯತೆಗಳನ್ನು ಸೂಚಿಸುತ್ತದೆ. ಉಳಿದ ಸ್ಪರ್ಧಿಗಳಿಗೆ ತಮ್ಮ ಆಟವನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದ ಸುದೀಪ್, ಹನುಮಂತ ಬಳಿ ಈ ವಿಚಾರ ಹೇಳಿದ್ದಾರೆ.

ಹೀಗೆ ಆಟ ಮುಂದುವರಿದರೆ ಹನುಮಂತನೇ ವಿನ್ನರ್? ಸೂಚನೆ ಕೊಟ್ಟ ಸುದೀಪ್
ಹನುಮಂತ-ಸುದೀಪ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸದ್ಯ 7 ಸ್ಪರ್ಧಿಗಳು ಇದ್ದಾರೆ. ಹನುಮಂತ, ರಜತ್, ತ್ರಿವಿಕ್ರಂ, ಭವ್ಯಾ, ಮೋಕ್ಷಿತಾ, ಭವ್ಯಾ ಹಾಗೂ ಗೌತಮಿ ಮಧ್ಯೆ ಸ್ಪರ್ಧೆ ಜೋರಾಗಿದೆ. ಇನ್ನು ಬಿಗ್ ಬಾಸ್ ಫಿನಾಲೆಗೆ ಉಳಿದಿರೋದು ಕೇವಲ 2 ವಾರ ಮಾತ್ರ. ಈ ಪೈಕಿ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಕಾಡಿದೆ. ಇದಕ್ಕೆ ಸುದೀಪ್ ಅವರು ಪರೋಕ್ಷವಾಗಿ ಉತ್ತರಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗಿದೆ. ಅವರು ದಿನ ಕಳೆದಂತೆ ಆಟದ ಶೈಲಿ ಬದಲಿಸಿಕೊಳ್ಳುತ್ತಿದ್ದಾರೆ. ಇವರು ಕಪ್ ಗೆಲ್ಲುತ್ತಾರಾ? ಹೀಗೊಂದು ಪ್ರಶ್ನೆ ಅನೇಕರಿಗೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಸುದೀಪ್ ಅವರು ಮಾತು.

ಯಾರು ಫಿನಾಲೆ ಸೇರುತ್ತಾರೆ, ಯಾರು ಅದಕ್ಕೂ ಮೊದಲೇ ಎಲಿಮಿನೇಟ್ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿತು. ಆಗ ಸುದೀಪ್ ಅವರು, ‘ಯಾರು ಹೋಗ್ತಾರೆ, ಯಾರು ಗೆಲ್ಲುತ್ತಾರೆ ಎಂಬುದು ನನ್ನ ಕಣ್ಣಿಗೆ ಸರಿಯಾಗಿ ಕಾಣುತ್ತಿದೆ. ಆದರೆ, ಅದನ್ನು ಹೇಳೋಕೆ ಆಗಲ್ಲ’ ಎಂದು ಸುದೀಪ್ ಹೇಳಿದರು. ಆ ಬಳಿಕ ಅವರು ಹನುಮಂತ ಆಟದ ಬಗ್ಗೆ ಮೆಚ್ಚುಗೆ ಹೊರಹಾಕಿದರು.

ಯಾವ ಆಟಗಾರರಲ್ಲಿ ಯಾರು ಏನನ್ನು ಬದಲಿಸಿಕೊಳ್ಳಬೇಕು ಎಂದು ಸುದೀಪ್ ಹೇಳಿದ್ದರು. ಈ ವೇಳೆ ಎಲ್ಲರಿಗೂ ಕಿವಿಮಾತು ಕೊಟ್ಟರು. ಆದರೆ, ಹನುಮಂತಗೆ ಮಾತ್ರ ‘ಹೀಗೆಯೇ ಆಟ ಆಡಿ’ ಎಂದರು. ಒಂದೊಮ್ಮೆ ಬೇರೆಯವರು  ಆಟದ ವೈಖರಿಸಿ ಬದಲಿಸಿಕೊಳ್ಳದೆ ಇದ್ದರೆ ಗೆಲುವು ಹನುಮಂತನ ಪಾಲಾಗಲಿದೆ ಎಂದು ಸುದೀಪ್ ಪರೋಕ್ಷೆವಾಗಿ ಹೇಳಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹನುಮಂತನ ಕೈಯಲ್ಲೇ ಇದೆಯಾ ‘ಬಿಗ್ ಬಾಸ್​ ಕನ್ನಡ 11’ ಟ್ರೋಫಿ?

ಹನುಮಂತ ಅವರು ಈಗಾಗಲೇ ಫಿನಾಲೆಗೆ ಕಾಲಿಟ್ಟಿದ್ದಾರೆ. ಟಾಪ್ ಐದರಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಸದ್ಯ ಉಳಿದಿರುವ ನಾಲ್ಕು ಸ್ಥಾನಗಳಿಗೆ ಯಾರು ಬರುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.