
‘ಬಿಗ್ ಬಾಸ್ ಕನ್ನಡ’ (Bigg Boss Kannada) ಈಗಾಗಲೇ 11 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಈ ಶೋ ಕರ್ನಾಟಕದಲ್ಲಿ ಶೇ.82 ಟಿವಿ ಪ್ರೇಕ್ಷಕರನ್ನು ತಲುಪಿದೆ ಅನ್ನೋದು ವಿಶೇಷ. ಇದು ರಾಜ್ಯದ ಅತ್ಯಂತ ಯಶಸ್ವಿ ಶೋ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಶೋ ಕಳೆದ ಒಂದು ದಶಕದಿಂದ ಪ್ರಸಾರ ಕಾಣುತ್ತಿದೆ. ಮನರಂಜನೆಗೆ ಕೊರತೆ ಮಾಡದೆ ಶೋ ಎಲ್ಲರ ಗಮನ ಸೆಳೆದಿದೆ. ಈಗ 12ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಸೆಪ್ಟೆಂಬರ್ 28ರಿಂದ ಆರಂಭ ಆಗಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ಮಾಡುತ್ತಿದ್ದಾರೆ. ಅವರು ಕಳೆದ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಗೇಮ್ಗೆ ತುಂಬಾನೇ ಫೇಮಸ್. ಪ್ರತಿ ವರ್ಷವೂ ಹೊಸ ಹೊಸ ಆಟದ ವಿಧಾನ ಸೇರ್ಪಡೆ ಆಗುತ್ತವೆ. ಅದೇ ರೀತಿ ವಿವಿಧ ರೀತಿಯ ಸ್ಪರ್ಧಿಗಳು ಆಗಮಿಸುತ್ತಾರೆ. ಈ ಬಾರಿಯೂ ಅದು ಮುಂದುವರಿಯಲಿದೆ.
ಬಿಗ್ ಬಾಸ್ ವಿಶೇಷತೆ ಬಗ್ಗೆ ಜಿಯೋಸ್ಟಾರ್ ದಕ್ಷಿಣ ವಿಭಾಗದ ಎಂಟರ್ಟೇನ್ಮೆಂಟ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಮಾತನಾಡಿದ್ದಾರೆ. ‘ಬಿಗ್ ಬಾಸ್ ಸಾಂಸ್ಕೃತಿಕ ಕೇಂದ್ರ. ಇಲ್ಲಿ ವಿವಿಧ ರೀತಿಯ ಸ್ಪರ್ಧಿಗಳು ಬರುತ್ತಾರೆ. ಇದು ಭಿನ್ನ ಅನುಭವ ನೀಡುತ್ತದೆ. ಪ್ರತಿ ಬಾರಿಯೂ ಬಿಗ್ ಬಾಸ್ ಹೊಸ ರೂಪದಲ್ಲಿ ಬರುತ್ತಿರುವುದರಿಂದ ಪ್ರೇಕ್ಷಕರು ಪ್ರೀತಿ ತೋರುವುದನ್ನು ಮುಂದುವರಿಸಿದ್ದಾರೆ. ಬಿಗ್ ಬಾಸ್ ಕನ್ನಡ ಇದು ಕೇವಲ ಟಿವಿ ಶೋ ಅಲ್ಲ. ಇದು ಸಮುದಾಯಗಳನ್ನು ಸಂಪರ್ಕಿಸೋ ಸಾಂಸ್ಕೃತಿಕ ಕೇಂದ್ರ’ ಎಂದಿದ್ದಾರೆ ಅವರು.
ಬಿಗ್ ಬಾಸ್ ಅನೇಕ ಹೊಸ ತಾರೆಗಳನ್ನು ಮತ್ತು ಇನ್ಫ್ಲ್ಯುನ್ಸರ್ಗಳನ್ನು ಪರಿಚಯಿಸಿದೆ. ಬಿಗ್ ಬಾಸ್ ವೇದಿಕೆ ಏರಿ ಅನೇಕರ ಬದುಕು ಬದಲಾಗಿದೆ. ಇದಲ್ಲದೆ, ಹಲವು ಬ್ರ್ಯಾಂಡ್ಗಳಿಗೆ ಇದು ವೇದಿಕೆ ಕೂಡ ಆಗಿದೆ. ಹಲವು ಬ್ರ್ಯಾಂಡ್ಗಳ ಜೊತೆ ಬಿಗ್ ಬಾಸ್ ಒಪ್ಪಂದ ಮಾಡಿಕೊಳ್ಳುತ್ತದೆ. ಇದರಿಂದ, ಗ್ರಾಹಕರೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಸಹಕಾರಿ ಆಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಎಂಟ್ರಿ ಬಗ್ಗೆ ಸುಧಾರಾಣಿ ಸ್ಪಷ್ಟನೆ
ಬಿಗ್ ಬಾಸ್ ಪ್ರತಿ ಆವೃತ್ತಿಯಲ್ಲೂ ಸ್ಥಳೀಯ ಮೌಲ್ಯಗಳನ್ನು ಪ್ರತಿಬಿಂಬಿಸಲು ಆದ್ಯತೆ ನೀಡಲಾಗುತ್ತಿದೆ. ಸಂಬಂಧ ಹಾಗೂ ಮಾನವೀಯ ಕಥೆಗಳನ್ನು ಇದರಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಅನೇಕ ಮನೆಗಳಲ್ಲಿ ಅಜ್ಜ-ಅಜ್ಜಿ, ಮೊಮ್ಮಕ್ಕಳೊಂದಿಗೆ ಕುಳಿತು ಚರ್ಚಿಸುತ್ತಾ ನೋಡಬಹುದಾದ ಕುಟುಂಬ ಒಗ್ಗಟ್ಟಿನ ಶೋ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.