ಗಿಲ್ಲಿ ನಟ ಕೇಳಿದ್ದಕ್ಕಿಂತ ಡಬಲ್ ಪ್ರೀತಿ ನೀಡಿದ ಫ್ಯಾನ್ಸ್: 2 ಮಿಲಿಯನ್ ಗ್ಯಾರಂಟಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ಗಿಲ್ಲಿ ನಟ ಅವರು ಪಡೆದಿರುವ ಜನಪ್ರಿಯತೆ ಅಪಾರ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಹೆಚ್ಚುತ್ತಿರುವ ಫಾಲೋವರ್ಸ್ ಸಂಖ್ಯೆಯೇ ಅದಕ್ಕೆ ಸಾಕ್ಷಿ ಆಗಿದೆ. ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಗಿಲ್ಲಿ ನಟ ಅವರಿಗೆ ಫ್ಯಾನ್ ಆಗಿದ್ದಾರೆ.

ಗಿಲ್ಲಿ ನಟ ಕೇಳಿದ್ದಕ್ಕಿಂತ ಡಬಲ್ ಪ್ರೀತಿ ನೀಡಿದ ಫ್ಯಾನ್ಸ್: 2 ಮಿಲಿಯನ್ ಗ್ಯಾರಂಟಿ
Gilli Nata Instagram

Updated on: Jan 18, 2026 | 2:58 PM

ಕಾಮಿಡಿ ಕಲಾವಿದ ಗಿಲ್ಲಿ ನಟ (Gilli Nata) ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಅವರ ಬಗ್ಗೆಯೇ ಮಾತುಕತೆ ನಡೆಯುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ಬರುವುದಕ್ಕೂ ಮುನ್ನ ಗಿಲ್ಲಿ ಅವರಿಗೆ ತಕ್ಕಮಟ್ಟಿಗಿನ ಜನಪ್ರಿಯತೆ ಇತ್ತು. ಆದರೆ ಬಿಗ್ ಬಾಸ್ ಶೋನಿಂದಾಗಿ ಅವರು ಸೂಪರ್ ಸ್ಟಾರ್ ಆಗಿದ್ದಾರೆ. ಗಿಲ್ಲಿಯನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಗಿಲ್ಲಿ ನಟ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ (Gilli Nata Instagram Followers) ಸಂಖ್ಯೆ ಅಚ್ಚರಿಯ ರೀತಿಯಲ್ಲಿ ಏರಿಕೆ ಆಗಿದೆ. ಇದನ್ನು ನೋಡಿದರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಗಿಲ್ಲಿ ನಟ ಅವರಿಗೆ ಅಚ್ಚರಿ ಆಗುವುದು ಗ್ಯಾರಂಟಿ.

ಬಿಗ್ ಬಾಸ್ ಶೋಗೆ ಹೋಗುವಾಗ ಗಿಲ್ಲಿ ನಟ ಅವರಿಗೆ 1 ಲಕ್ಷದ 6 ಸಾವಿರ ಜನರು ಫಾಲೋವರ್ಸ್ ಇದ್ದರು. ತಮಗೆ ಒಂದು ಮಿಲಿಯನ್, ಅಂದರೆ 10 ಲಕ್ಷ ಫಾಲೋವರ್ಸ್ ಆಗಬೇಕು ಎಂದು ಗಿಲ್ಲಿ ನಟ ಬಯಸಿದ್ದರು. ಅಭಿಮಾನಿಗಳು ಆ ಬಯಕೆಯನ್ನು ಕೆಲವೇ ದಿನಗಳ ಹಿಂದೆ ಈಡೇರಿಸಿದರು. ನೋಡನೋಡುತ್ತಿದ್ದಂತೆಯೇ ಗಿಲ್ಲಿ ನಟ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಏರಿಕೆ ಕಂಡಿದೆ.

ಇತ್ತೀಚೆಗೆ ಗಿಲ್ಲಿ ನಟ ಅವರ ಇನ್​ಸ್ಟಾಗ್ರಾಮ್ ಖಾತೆಗೆ 10 ಲಕ್ಷ (1 ಮಿಲಿಯನ್) ಫಾಲೋವರ್ಸ್ ಆಗಿದ್ದರು. ಫಿನಾಲೆ ಹತ್ತಿರ ಆದಂತೆಲ್ಲ ಗಿಲ್ಲಿ ನಟ ಅವರ ಕ್ರೇಜ್ ಜಾಸ್ತಿ ಆಗುತ್ತಲೇ ಹೋಯಿತು. ಚಿಕ್ಕ ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಗಿಲ್ಲಿ ನಟ ನೆಚ್ಚಿನ ಸ್ಪರ್ಧಿ ಆದರು. ಅವರ ಕಾಮಿಡಿಗೆ ಜನರು ಮನಸೋತರು. ಅದರ ಪರಿಣಾಮವಾಗಿ ಫಿನಾಲೆಯ ದಿನ (ಜನವರಿ 18) ಗಿಲ್ಲಿ ನಟ ಅವರನ್ನು ಬರೋಬ್ಬರಿ 16 ಲಕ್ಷ (1.6 ಮಿಲಿಯನ್) ಜನರು ಫಾಲೋ ಮಾಡುತ್ತಿದ್ದಾರೆ.

ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಗಂಟೆ ಗಂಟೆಗೂ ಗಿಲ್ಲಿ ನಟ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಫಿನಾಲೆ ಮುಗಿಯುವುದರೊಳಗೆ ಮತ್ತೊಂದು ಲಕ್ಷ ಫಾಲೋವರ್ಸ್ ಹೊಸದಾಗಿ ಸೇರ್ಪಡೆ ಆದರೂ ಅಚ್ಚರಿ ಏನಿಲ್ಲ. ಅಷ್ಟೇ ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಅವರಿಗೆ ಬರೋಬ್ಬರಿ 2 ಮಿಲಿಯನ್ (20 ಲಕ್ಷ) ಫಾಲೋವರ್ಸ್ ಆಗುವುದು ಖಚಿತ.

ಇದನ್ನೂ ಓದಿ: Bigg Boss Kannada Winner: ಗಿಲ್ಲಿ ನಟ ಗೆದ್ದಾಯಿತು; ತೀರ್ಪು ನೀಡಿದ ‘ಬಿಗ್ ಬಾಸ್ ಕನ್ನಡ 12’ ವೀಕ್ಷಕರು

ಯೂಟ್ಯೂಬ್ ವಿಡಿಯೋಗಳ ಮೂಲಕ ಗಿಲ್ಲಿ ನಟ ಅವರು ಫೇಮಸ್ ಆಗಿದ್ದರು. ಬಳಿಕ ಅವರಿಗೆ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಂತರ ಬಿಗ್ ಬಾಸ್ ಮೂಲಕ ಅದೃಷ್ಟದ ಬಾಗಿಲು ತೆರೆಯಿತು. ಇನ್ಮೇಲೆ ಅವರಿಗೆ ಸಿನಿಮಾ ಅವಕಾಶಗಳು ಹೇರಳವಾಗಿ ಸಿಗಲಿವೆ. ಬಡ ಕುಟುಂಬದಿಂದ ಬಂದ ಅವರು ಈ ಮೂಲಕ ಯಶಸ್ಸು ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.