‘ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ’; ಸತೀಶ್ಗೆ ಶೇಪ್ಔಟ್ ಮಾಡಿದ ಸುದೀಪ್
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ಸ್ಪರ್ಧಿ ಡಾಗ್ ಸತೀಶ್ ಅವರ ಜನಪ್ರಿಯತೆ ಕುರಿತು ನಿರೂಪಕ ಸುದೀಪ್ ಕಾಲೆಳೆದ ಪ್ರಸಂಗ ವೈರಲ್ ಆಗಿದೆ. ಬಿಗ್ ಬಾಸ್ ನಂತರ ತನ್ನ ಜೀವನ ಬದಲಾಗಿದೆ, ಈಗ ಬೀದಿ ಬೀದಿಗಳಲ್ಲೂ ಗುರುತಿಸುತ್ತಿದ್ದಾರೆ ಎಂದು ಸತೀಶ್ ಹೇಳಿದಾಗ, ಸುದೀಪ್ ಹಾಸ್ಯಮಯವಾಗಿ ಅವರನ್ನು ಟ್ರೋಲ್ ಮಾಡಿದರು.

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಅವರು ಕೆಲವೇ ವಾರ ಇದ್ದರು. ದೊಡ್ಮನೆಯಲ್ಲಿ ಸುದ್ದಿ ಆಗಿಲ್ಲ. ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಸಂದರ್ಶನ ನೀಡಿ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಸುದೀಪ್ ಅವರು ಸತೀಶ್ ಅವರ ಕಾಲೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಇದಕ್ಕೆ ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಡಾಗ್ ಸತೀಶ್ ಕೂಡ ಬಂದಿದ್ದರು. ಸತೀಶ್ ಅವರು ಕರಿ ಬಣ್ಣದ ಗ್ಲಾಸ್ ಹಾಕಿದ್ದರು. ‘ಇದನ್ನು ಅವರು ಯಾವುದೇ ಕಾರಣಕ್ಕೂ ತೆಗೆಯಲ್ಲ. ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ ಎಂಬುದು ಬೇಸರ’ ಎಂದು ಸುದೀಪ್ ಹೇಳಿದರು.
ಬಿಗ್ ಬಾಸ್ ಬಳಿಕ ಹೇಗಿದೆ ಜೀವನ ಎಂದು ಎಲ್ಲಾ ಸ್ಪರ್ಧಿಗಳಿಗೆ ಕೇಳಲಾಯಿತು. ‘ಬಿಗ್ ಬಾಸ್ ಮುಗಿದ ಬಳಿಕ ಜೀವನ ಸ್ವಲ್ಪವಾದರೂ ಬದಲಾಗಿರಬೇಕಲ್ಲ’ ಎಂದು ಕಿಚ್ಚ ಕೇಳಿದರು. ಇದಕ್ಕೆ ಉತ್ತರಿಸಿದ ಸತೀಶ್, ‘ನಾನು ಮೊದಲು ಇಂಟರ್ನ್ಯಾಷನಲ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದೆ. ಆದರೆ, ರೆಕೋಗ್ನೈಸೇಷನ್ ಇರಲಿಲ್ಲ. ಬಿಗ್ ಬಾಸ್ನಿಂದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ’ ಎಂದರು.
ಇದನ್ನೂ ಓದಿ: ‘ರಕ್ಷಿತಾ ಶೆಟ್ಟಿ ವಿನ್ನರ್’; ವೀಕ್ಷಕರಿಗೆ ಶಾಕ್ ಕೊಟ್ಟ ವಿಕಿಪೀಡಿಯಾ ಸತೀಶ್ ಹೇಳಿದ್ದು ಅರ್ಥ ಆಗಿಲ್ಲ ಎಂದರು ಸುದೀಪ್. ಆಗ, ‘ಅಷ್ಟೊಂದು ರೆಕಗ್ನೈಸ್ ಇರಲಿಲ್ಲ. ಈಗ ಬೀದಿ ಬೀದಿಯಲ್ಲೂ ನನ್ನ ಗುರುತು ಹಿಡಿಯುತ್ತಿದ್ದಾರೆ’ ಎಂದರು ಸತೀಶ್. ಆಗ ಸುದೀಪ್, ‘ನಾನು ಕುಡ್ಕೋ ಬಂದಿದೀನೋ, ಅವರು ಕುಡ್ಕ ಬಂದಿದಾರೋ’ಎಂದು ಸತೀಶ್ಗೆ ಶೇಪ್ಔಟ್ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




