
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಡಿಫರೆಂಟ್ ಆದ ಟಾಸ್ಕ್ ನೀಡಲಾಗಿದೆ. ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿಗೆ ಸ್ವಯಂವರ ಮಾಡುವ ರೀತಿಯಲ್ಲಿ ಟಾಸ್ಕ್ ರೂಪುಗೊಂಡಿದೆ. ಒಂದು ತಂಡದಲ್ಲಿ ಯಶಸ್ ಅವರು ವರನಾಗಿದ್ದರೆ, ಇನ್ನೊಂದು ತಂಡದಲ್ಲಿ ಗಗನ್ ಚಿನ್ನಪ್ಪ ಅವರು ವರನಾಗಿದ್ದಾರೆ. ಇಬ್ಬರ ಪೈಕಿ ಯಾರು ಸೌಂದರ್ಯಾ ಶೆಟ್ಟಿಯ ಮನಸ್ಸು ಗೆಲ್ಲುತ್ತಾರೆ ಎಂಬುದರ ಮೇಲೆ ಭವಿಷ್ಯ ನಿರ್ಧಾರ ಆಗಲಿದೆ.
ಒಂದೊಂದು ಟಾಸ್ಕ್ ಒಬ್ಬೊಬ್ಬರ ಪರವಾಗಿ ಇರುತ್ತದೆ. ಭುಜಬಲ ಪ್ರದರ್ಶಿಸಬೇಕೋ ಅಥವಾ ಬುದ್ಧಿಬಲ ಬಳಸಬೇಕೋ ಎಂಬ ಆಧಾರದ ಮೇಲೆ ಟಾಸ್ಕ್ ಸುಲಭವೋ ಅಥವಾ ಕಷ್ಟವೋ ಎಂಬುದು ಗೊತ್ತಾಗುತ್ತದೆ. ಆದರೆ ಈ ಬಾರಿ ಬಿಗ್ ಬಾಸ್ ನೀಡಿರುವ ಟಾಸ್ಕ್ ಬೇರೆ ರೀತಿ ಇದೆ. ಸೌಂದರ್ಯಾ ಶೆಟ್ಟಿ ಅವರನ್ನು ಮನವೊಲಿಸಲು ಬೇರೆಯದೇ ಪ್ರತಿಭೆ ಬೇಕಾಗಿದೆ.
ಈ ಟಾಸ್ಕ್ ಯಶಸ್ ಅವರ ಪರವಾಗಿದೆ. ಯಾಕೆಂದರೆ, ಅವರು ಮೊದಲಿನಿಂದಲೂ ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಆಪ್ತವಾಗಿದ್ದಾರೆ. ಹುಡುಗಿಯರ ಜೊತೆ ಆಪ್ತವಾಗಿ ಬೆರೆಯುವುದು ಅವರಿಗೆ ಕಷ್ಟವೇ ಅಲ್ಲ. ಈಗಾಗಲೇ ಅವರು ಸೌಂದರ್ಯಾ ಶೆಟ್ಟಿ ಜೊತೆ ಬಹಳ ಸಲುಗೆಯಿಂದ ನಡೆದುಕೊಂಡು ಅವರಿಗೆ ಅಭ್ಯಾಸ ಆಗಿದೆ. ಆದ್ದರಿಂದ ಈಗ ಈ ಟಾಸ್ಕ್ನಲ್ಲಿ ಅವರು ಸುಲಭವಾಗಿ ಮನವೊಲಿಸುತ್ತಿದ್ದಾರೆ.
ಆದರೆ ಗಗನ್ ಚಿನ್ನಪ್ಪ ಅವರಿಗೆ ಈ ಟಾಸ್ಕ್ ಕಷ್ಟ ಆಗಿದೆ. ಅವರ ವ್ಯಕ್ತಿತ್ವಕ್ಕೆ ವಿರುದ್ಧವಾದ ಟಾಸ್ಕ್ ಇದಾಗಿದೆ. ಆರಂಭದಿಂದಲೂ ಗಗನ್ ಅವರು ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಬೆರೆಯುತ್ತಿಲ್ಲ. ಹುಡುಗಿಯರ ಜೊತೆ ಅವರು ಆಪ್ತವಾಗಿ ನಡೆದುಕೊಂಡಿಲ್ಲ. ಈಗ ಏಕಾಏಕಿ ಸೌಂದರ್ಯಾ ಶೆಟ್ಟಿಯ ಮನಸ್ಸು ಒಲಿಸಿಕೊಳ್ಳಬೇಕು ಎಂದು ಅವರಿಗೆ ಸಹಜವಾಗಿಯೇ ಕಷ್ಟ ಆಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಗಗನ್, ಧನುಷ್ ಸೇರಿ 7 ಸ್ಪರ್ಧಿಗಳು ಈ ವಾರ ನಾಮಿನೇಟ್
ತಾವು ಏನು ಮಾಡಬೇಕು ಎಂಬುದೇ ಗಗನ್ ಚಿನ್ನಪ್ಪ ಅವರಿಗೆ ತಿಳಿಯುತ್ತಿಲ್ಲ. ಅದಕ್ಕಾಗಿ ಅವರು ಆಸಿಯಾ ಜೊತೆ ಹೋಗಿ ಸಲಹೆ ಕೇಳಿದ್ದಾರೆ. ಇದು ತಮಗೆ ಸೂಕ್ತವಾಗುವ ಟಾಸ್ಕ್ ಅಲ್ಲ ಎಂದು ಅವರು ಅಸಹಾಯಕತೆಯಿಂದ ಹೇಳಿಕೊಂಡಿದ್ದಾರೆ. ಆದರೆ ಯಶಸ್ ಅವರು ನಿರಾಯಾಸವಾಗಿ ಈ ಟಾಸ್ಕ್ ಆಡುತ್ತಿದ್ದಾರೆ. ಅವರು ಮಾಡುವ ಪ್ರಯತ್ನಗಳು ಸೌಂದರ್ಯಾ ಶೆಟ್ಟಿಗೆ ಇಷ್ಟ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.