
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನಕ್ಕೊಂದು ವಿಚಿತ್ರ ತಿರುವುಗಳು ಸಿಗುತ್ತಿವೆ. ಈ ವಾರ ಮನೆಯಲ್ಲಿ ವಾಡಿಕೆಯಂತೆ ನಾಮಿನೇಷನ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಆದರೆ ಈ ವಾರ ವೋಟಿಂಗ್ ಲೈನ್ಸ್‌ಗಳನ್ನು ಓಪನ್ ಮಾಡಲಾಗಿಲ್ಲ. ಹೀಗಾಗಿ ಮನೆಯಿಂದ ಈ ವಾರ ಯಾರೊಬ್ಬರೂ ಹೊರ ಹೋಗೋದಿಲ್ಲ ಅನ್ನೋದು ಸ್ಪಷ್ಟವಾಗಿದೆ. ಆದರೆ, ಪ್ರ್ಯಾಂಕ್ ನಡೆಯುವ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆ ಪ್ರಮುಖ ಕಾರಣ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ನಿರ್ಗಮನ. ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಎದುರಾದ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ರಾವ್ ಅವರು ದೊಡ್ಮನೆಯಿಂದ ಅರ್ಧಕ್ಕೇ ಹೊರಬಂದಿದ್ದಾರೆ. ಒಬ್ಬ ಸ್ಪರ್ಧಿ ಶೋ ತೊರೆದಿರುವುದರಿಂದ ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಯಾವುದೇ ಎಲಿಮಿನೇಷನ್ ಇಲ್ಲದಿರುವ ಕಾರಣ ಬಿಗ್ ಬಾಸ್ ಈ ವಾರ ಹೊಸ ಗಿಮಿಕ್ ಮಾಡಲು ಮುಂದಾಗಿದ್ದಾರೆ. ಎಲಿಮಿನೇಷನ್ ಹೆಸರಿನಲ್ಲಿ ಸ್ಪರ್ಧಿಗಳಿಗೆ ದೊಡ್ಡ ಪ್ರ್ಯಾಂಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ಸಸ್ಪೆನ್ಸ್ ಪ್ರ್ಯಾಂಕ್ ಅಸ್ತ್ರವನ್ನು ಬಳಸಲಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರ್ಯಾಂಕ್‌ನ ಮುಖ್ಯ ಟಾರ್ಗೆಟ್ ಕಾಮನ್ ಮ್ಯಾನ್ ಸ್ಪರ್ಧಿಗಳೇ ಆಗುವ ಲಕ್ಷಣಗಳಿವೆ. ಸದ್ಯ ಮನೆಯಲ್ಲಿ ನಿಯಮ ಉಲ್ಲಂಘನೆ ಹಾಗೂ ಗಲಾಟೆಗಳಿಂದ ಸುದ್ದಿಯಲ್ಲಿರುವ ಅಗ್ನಿಪರೀಕ್ಷೆಯ ಸ್ಪರ್ಧಿಗಳಾದ ಮಂಜು, ಕಿರಣ್ ಶಾಸ್ತ್ರಿ ಅಥವಾ ಲಿಖಿತ್ ಅವರ ಮೇಲೆ ಈ ಪ್ರ್ಯಾಂಕ್ ತೂಗುಕತ್ತಿ ತೂಗುವ ಸಾಧ್ಯತೆ ಹೆಚ್ಚಾಗಿದೆ.
ಫೇಕ್ ಎಲಿಮಿನೇಷನ್ ಮಾಡುವ ಮೂಲಕ ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ತಕ್ಕ ಪಾಠ ಕಳಿಸಲು ಬಿಗ್ ಬಾಸ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಈ ಪ್ರ್ಯಾಂಕ್‌ನಿಂದ ಮನೆಯೊಳಗಿನ ಸ್ಪರ್ಧಿಗಳು ಮತ್ತಷ್ಟು ಅಲರ್ಟ್ ಆಗಲಿದ್ದು, ಮುಂಬರುವ ಸಂಚಿಕೆಗಳು ಇನ್ನಷ್ಟು ರೋಚಕತೆಯನ್ನು ಪಡೆದುಕೊಳ್ಳಲಿವೆ.
ಇದನ್ನೂ ಓದಿ: ‘ಒಬ್ಬರನ್ನು ಮನೆಗೆ ಕಳುಹಿಸಿಯೇ ಹೋಗೋದು’; ಲಿಖಿತ್-ಮಂಜು ವಿರುದ್ಧ ತೊಡೆತಟ್ಟಿದ ಧನುಷ್
ಕಾಮಾನ್ ಮ್ಯಾನ್ ಸ್ಪರ್ಧಿಗಳು ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಅವರಿಗೆ ಸುದೀಪ್ ಕಡೆಯಿಂದ ಖಡಕ್ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.