ಬಿಗ್ ಬಾಸ್ ಕನ್ನಡ ಸೀಸನ್ 13: ಯಶಸ್, ಶಾಸ್ತ್ರಿಗೆ ಬುದ್ಧಿ ಕಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ

ಕಿರಣ್ ಶಾಸ್ತ್ರಿ ಮತ್ತು ಯಶಸ್​ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ ಅವರು ಶಾಕ್ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಯಶಸ್ ಮತ್ತು ಶಾಸ್ತ್ರಿಯನ್ನು ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಇವರಿಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಅರ್ಹತೆ ಇಲ್ಲ ಎಂದು ಗಾನವಿ ಅವರು ಮುಲಾಜಿಲ್ಲದೇ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13: ಯಶಸ್, ಶಾಸ್ತ್ರಿಗೆ ಬುದ್ಧಿ ಕಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ
Yashas, Kiran Shastri

Updated on: Sep 28, 2026 | 10:41 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಮೂವರು ಹೊಸ ಸ್ಪರ್ಧಿಗಳನ್ನು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಿಸಲಾಗಿದೆ. ಗಾನವಿ ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ಯಶಸ್ ಮತ್ತು ಕಿರಣ್ ಶಾಸ್ತ್ರಿಗೆ ಶಾಕ್ ನೀಡಿದ್ದಾರೆ. ಮನೆಯೊಳಗೆ ಆರಾಮಾಗಿ ಕಾಲ ಕಳೆಯುತ್ತಿದ್ದ ಈ ಇಬ್ಬರು ಸ್ಪರ್ಧಿಗಳನ್ನು ಅವರು ವಾಪಸ್ ವಿಮಾನಕ್ಕೆ ಕಳಿಸಿದ್ದಾರೆ. ಗಾನವಿ ಗೌಡ ಬರುತ್ತಿದ್ದಂತೆಯೇ ಕಿರಣ್ ಶಾಸ್ತ್ರಿ ಜೊತೆ ಮಾತಿನ ಚಕಮಕಿ ನಡೆದಿದೆ.

ಗಾನವಿ ಗೌಡ ಅವರು ಹೈಜಾಕರ್ ಆಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕಿರಣ್ ಶಾಸ್ತ್ರಿ ಮತ್ತು ಯಶಸ್ ಅವರನ್ನು ಹೈಜಾಕ್ ಮಾಡಿದ್ದು ಯಾಕೆ ಎಂದು ಗಾನವಿ ಅವರು ಕಾರಣ ನೀಡಿದರು. ‘ಶಾಸ್ತ್ರಿ ಅತಿ ನಾಟಕೀಯ. ಜೊತೆಗೆ ಇದ್ದುಕೊಂಡೇ ಪವರ್ ಕಿತ್ತುಕೊಳ್ಳುತ್ತೀರಿ. ಅಕ್ಕ ಅಕ್ಕ ಅಂದುಕೊಂಡು ಮೋಸ ಮಾಡ್ತೀರಿ. ನಿಮ್ಮ ವ್ಯಕ್ತಿತ್ವ ನನಗೆ ಇಷ್ಟ ಇಲ್ಲ. ಈ ಮನೆಯಲ್ಲಿ ಇರಲು ನೀವು ಅನರ್ಹ’ ಎಂದು ಗಾನವಿ ಗೌಡ ಹೇಳಿದರು.

ಈ ಮಾತಿಗೆ ತಿರುಗೇಟು ನೀಡಲು ಶಾಸ್ತ್ರಿ ಪ್ರಯತ್ನಿಸಿದರು. ‘ನಿಮಗೆ ಇಷ್ಟ ಇಲ್ವಾ ಬಿಟ್ಟಾಕಿ. ನಿಮ್ಮ ಅಭಿಪ್ರಾಯ ತಗೊಂಡು ಏನೂ ಆಗಬೇಕಿಲ್ಲ. ನನ್ನನ್ನು ಕಂಡರೆ ನಿಮಗೆ ಭಯ. ಅದನ್ನು ಪರೋಕ್ಷವಾಗಿ ಹೇಳಿದ್ದೀರಿ’ ಎಂದು ಅವರು ಹೇಳಿದರು. ಆ ಮಾತಿಗೆ ಉತ್ತರಿಸಿದ ಗಾನವಿ, ‘ನಿಮ್ಮನ್ನು ಕಂಡರೆ ಭಯ ಇಲ್ಲ. ಕಿರಿಕಿರಿ ಆಗುತ್ತದೆ. ಬರೀ ದೇವಿ ಹೂ ಕೊಡು ಅಂತ ಹೇಳಿರೋದು ಅಷ್ಟೇ ನೀವು. ನಿಮ್ಮನ್ನು ಹೊರಗಡೆಯಿಂದ ನೋಡಿಕೊಂಡು ಬಂದೇ ಈ ನಿರ್ಧಾರ ತೆಗೆದುಕೊಂಡಿರುವುದು’ ಎಂದರು.

ಗಾನವಿ ಗೌಡ ಎದುರುಗಡೆ ಇದ್ದಾಗ ಕಿರಣ್ ಶಾಸ್ತ್ರಿ ಅವರು ‘ಮೇಡಂ, ಅಕ್ಕಾ..’ ಎಂದು ಗೌರವದಿಂದ ಮಾತನಾಡಿದರು. ಆದರೆ ವಿಮಾನದ ಒಳಗೆ ಹೋದ ಬಳಿಕ ‘ನನ್ನೇ ಹೈಜಾಕ್ ಮಾಡಿದಳು ಈ ಯಮ್ಮಾ’ ಎಂದು ಏಕವಚನದಲ್ಲಿ ಮಾತು ಆರಂಭಿಸಿದರು. ‘ನೀವು ಕುಡಿಯುತ್ತಿರುವ ಟೀ ವಿಷ ಆಗಲಿ’ ಎಂದು ಕೆಟ್ಟ ಮನಸ್ಥಿತಿ ಕೂಡ ಪ್ರದರ್ಶಿಸಿದರು.

ಇದನ್ನೂ ಓದಿ: ‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ

‘ಯಶಸ್ ಅವರ ಕೊಡುಗೆ ಈ ಶೋನಲ್ಲಿ ಕಾಣಿಸುತ್ತಿಲ್ಲ. ಅವರಿಗೆ ಸಾಮರ್ಥ್ಯ ಇದೆ. ಆದರೆ ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಅರ್ಹರಲ್ಲ’ ಎಂದು ಗಾನವಿ ಗೌಡ ಅವರು ಹೇಳಿದರು. ಹಾಗಾಗಿ ಮನೆಯಲ್ಲಿ ಸ್ಥಾನ ಕಳೆದುಕೊಂಡ ಯಶಸ್ ಮತ್ತು ಕಿರಣ್ ಶಾಸ್ತ್ರಿ ಈಗ ಮನೆ ಬಿಟ್ಟು ವಿಮಾನಕ್ಕೆ ತೆರಳಿದ್ದಾರೆ. ಬಿಗ್ ಬಾಸ್ ಮುಂದಿನ ಆದೇಶ ನೀಡುವ ತನಕ ಅವರು ವಿಮಾನದಲ್ಲೇ ಇರಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us