‘ಬಿಗ್ ಬಾಸ್ ಕನ್ನಡ ಸೀಸನ್ 8’ ಫಿನಾಲೆ ಬಂದೇ ಬಿಟ್ಟಿದೆ. 115ಕ್ಕೂ ಅಧಿಕ ದಿನ ಮನೆಯಲ್ಲಿ ಕಳೆದ ಐವರು ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಇವರಲ್ಲಿ ಗೆಲ್ಲೋದು ಯಾರು ಅನ್ನೋ ಕುತೂಹಲ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಫಿನಾಲೆಗೆ ಈಗಾಗಲೇ ಕಲರ್ಫುಲ್ ವೇದಿಕೆ ಸಜ್ಜಾಗಿದೆ. ಹಳೆಯ ಸ್ಪರ್ಧಿಗಳು ಬಿಗ್ ಬಾಸ್ ವೇದಿಕೆ ಏರಿ ಕಲರ್ಫುಲ್ ಆಗಿ ಡಾನ್ಸ್ ಮಾಡಿದ್ದಾರೆ. ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ಭಾನುವಾರ ರಾತ್ರಿ ಉತ್ತರ ಸಿಗಲಿದೆ.
‘ಬಿಗ್ ಬಾಸ್ ಸೀಸನ್ 8’ ಫಿನಾಲೆಯಲ್ಲಿ ಮಂಜು ಪಾವಗಡ, ವೈಷ್ಣವಿ ಗೌಡ, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಇದ್ದಾರೆ. ಈ ಪೈಕಿ ಇಬ್ಬರು ಸುದೀಪ್ ಅಕ್ಕಪಕ್ಕ ನಿಲ್ಲಲಿದ್ದಾರೆ. ಇವರಲ್ಲಿ ಒಬ್ಬರು ‘ಬಿಗ್ ಬಾಸ್ ಸೀಸನ್ 8’ ವಿನ್ನರ್ ಆಗಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಐದು ಸ್ಪರ್ಧಿಗಳ ಪೈಕಿ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ವೀಕ್ ಕ್ಯಾಂಡಿಡೇಟ್ ಎನಿಸಿಕೊಂಡಿದ್ದಾರೆ. ದಿವ್ಯಾ ಟಾಸ್ಕ್ನಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಆದರೆ, ಅವರಿಗೆ ಹೆಚ್ಚು ವೋಟ್ ಬೀಳುವ ಸಾಧ್ಯತೆ ತುಂಬಾನೇ ಕಡಿಮೆ. ಅರವಿಂದ್ ಹಾಗೂ ದಿವ್ಯಾ ನಡುವಿನ ಪ್ರೇಮ ವಿಚಾರ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.
ಇನ್ನು, ಪ್ರಶಾಂತ್ ಸಂಬರಗಿ ಫಿನಾಲೆ ತಲುಪಿದ್ದರೂ ಕೂಡ ಅವರ ಅಭಿಮಾನಿ ವರ್ಗ ಅಷ್ಟಾಗಿ ಹಿರಿದಾಗಿಲ್ಲ. ಅವರು ಮೊದಲ ಇನ್ನಿಂಗ್ಸ್ನಲ್ಲಿ ಒಂದು ರೀತಿ ಇದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ಕೊಂಚ ಬದಲಾದರು. ಕೊನೆಯ ದಿನಗಳಲ್ಲಿ ಅವರ ವರ್ತನೆ ಮತ್ತಷ್ಟು ಬದಲಾಗಿತ್ತು. ಹೀಗಾಗಿ, ಪ್ರಶಾಂತ್ ಗೆಲ್ಲುವ ಸಾಧ್ಯತೆ ತುಂಬಾನೇ ಕಡಿಮೆ. ಆರಂಭದಲ್ಲಿ ವೈಷ್ಣವಿ ಡಲ್ ಆಗಿದ್ದರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಅವರು ಬದಲಾಗಿದ್ದಾರೆ. ಹೆಚ್ಚು ಎಕ್ಸ್ಪ್ರೆಸಿವ್ ಆಗಿದ್ದಾರೆ. ಈ ಕಾರಣಕ್ಕೆ ವೀಕ್ಷಕರಿಗೆ ಅವರು ಇಷ್ಟವಾಗುತ್ತಾರೆ. ಆದರೆ, ಅವರಿಗೂ ಗೆಲ್ಲೋ ಚಾನ್ಸ್ ಕಡಿಮೆ.
ಅರವಿಂದ್ ಕೆ.ಪಿ. ಟಾಸ್ಕ್ಗಳನ್ನು ಅದ್ಭುತವಾಗಿ ಆಡಿದ್ದಾರೆ. ಆದರೆ, ಮನರಂಜನೆಯಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಇದು ಅವರಿಗೆ ಮೈನಸ್ ಆಗಬಹುದು. ಆದರೆ, ಅರವಿಂದ್ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ಈ ಕಾರಣಕ್ಕೆ ಅರವಿಂದ್ ಸುದೀಪ್ ಪಕ್ಕ ನಿಲ್ಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು, ಇನ್ನು, ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ ನಾಯಕತ್ವ ಹಾಗೂ ಮನರಂಜನೆ ಎರಡರಲ್ಲೂ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ಕೂಡ ದೊಡ್ದದಿದೆ. ಈ ಕಾರಣಕ್ಕೆ ಮಂಜು ಪಾವಗಡ ಕೂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಅರವಿಂದ್ ಅಥವಾ, ಮಂಜು ಪಾವಗಡ ಇಬ್ಬರಲ್ಲಿ ಒಬ್ಬರಿಗೆ ವಿಜಯದ ಮಾಲೆ ಬೀಳಲಿದೆ. ಯಾರು ಗೆಲ್ಲುತ್ತಾರೆ ಎನ್ನುವುದಕ್ಕೆ ಆಗಸ್ಟ್ 8ರ ರಾತ್ರಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಶಮಂತ್ ಹಾಡು, ರಘು ಡ್ಯಾನ್ಸ್, ಪ್ರಿಯಾಂಕಾ-ದಿವ್ಯಾ ವೈಯ್ಯಾರ, ಹಳೇ ಸ್ಪರ್ಧಿಗಳ ಧಮಾಕಾ
Published On - 2:39 pm, Sat, 7 August 21