BBK9 Finale: ಟ್ವಿಸ್ಟ್ ಕೊಟ್ಟ ಬಿಗ್ ಬಾಸ್​​; ಈ ಬಾರಿ ಭಾನುವಾರ ನಡೆಯಲ್ಲ ಫಿನಾಲೆ

Bigg Boss Kannada Finale Date: ಫಿನಾಲೆ ವೀಕ್​​ನಲ್ಲಿ ಆರ್ಯವರ್ಧನ್​ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗ ಇದ್ದಾರೆ. ಈ ಪೈಕಿ ಒಬ್ಬರು ಟ್ರೋಫಿ ಗೆಲ್ಲಲಿದ್ದಾರೆ.

BBK9 Finale: ಟ್ವಿಸ್ಟ್ ಕೊಟ್ಟ ಬಿಗ್ ಬಾಸ್​​; ಈ ಬಾರಿ ಭಾನುವಾರ ನಡೆಯಲ್ಲ ಫಿನಾಲೆ
ಬಿಗ್ ಬಾಸ್
Edited By:

Updated on: Dec 28, 2022 | 12:02 AM

‘ಬಿಗ್ ಬಾಸ್​ ಕನ್ನಡ ಸೀಸನ್ 9’ (Bigg Boss Finsle) ಈ ವಾರ ಪೂರ್ಣಗೊಳ್ಳಲಿದೆ. ಆರು ಮಂದಿ ಬಿಗ್ ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಮಿಡ್​ ವೀಕ್​ನಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅದು ಯಾರು, ಯಾವಾಗ ಎಂಬ ಪ್ರಶ್ನೆಗೆ ಬಿಗ್ ಬಾಸ್ ಕಡೆಯಿಂದಲೇ ಉತ್ತರ ಸಿಗಬೇಕಿದೆ. ಫಿನಾಲೆ ವೀಕ್​​ನಲ್ಲಿ ಐದು ಸ್ಪರ್ಧಿಗಳು ಉಳಿದುಕೊಳ್ಳಲಿದ್ದಾರೆ. ಪ್ರತಿ ಬಾರಿ ಶನಿವಾರ-ಭಾನುವಾರ ಬಿಗ್ ಬಾಸ್​ ಫಿನಾಲೆ ನಡೆಯುವುದು ಸಂಪ್ರದಾಯ. ಆದರೆ, ಈ ಬಾರಿ ಬಿಗ್ ಬಾಸ್​​ ಫಿನಾಲೆಗೆ (Bigg Boss Finale) ಟ್ವಿಸ್ಟ್​ ಕೊಡಲಾಗಿದೆ.

ಫಿನಾಲೆ ವೀಕ್​​ನಲ್ಲಿ ಆರ್ಯವರ್ಧನ್​ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗ ಇದ್ದಾರೆ. ಈ ಪೈಕಿ ಒಬ್ಬರು ಟ್ರೋಫಿ ಗೆಲ್ಲಲಿದ್ದಾರೆ. ಅದು ಯಾರು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಇದಕ್ಕೆ ಉತ್ತರ ಸಿಗುವ ಸಮಯ ಹತ್ತಿರವಾಗಿದೆ. ಆದರೆ, ಈ ಬಾರಿ ಭಾನುವಾರ ಫಿನಾಲೆ ನಡೆಯುತ್ತಿಲ್ಲ.

ಬಿಗ್ ಬಾಸ್ ಫಿನಾಲೆ ಯಾವಾಗ?

ಈ ಬಾರಿ ಶನಿವಾರ (ಡಿಸೆಂಬರ್​ 31) ಹಾಗೂ ಭಾನುವಾರ (ಜನವರಿ 1ಕ್ಕೆ) ಫಿನಾಲೆ ನಡೆಯಲಿದೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಈ ಬಾರಿ ಆರೀತಿ ಆಗುತ್ತಿಲ್ಲ. ಶುಕ್ರವಾರ (ಡಿಸೆಂಬರ್ 30) ಹಾಗೂ ಶನಿವಾರ (ಡಿಸೆಂಬರ್ 31) ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಶನಿವಾರ ಯಾರು ಟ್ರೋಫಿ ಗೆಲ್ಲಲಿದ್ದಾರೆ ಅನ್ನೋದು ರಿವೀಲ್ ಆಗಲಿದೆ. ಇದನ್ನು ವೀಕೆಂಡ್ ಸಮಯದಲ್ಲಿ ಸುದೀಪ್ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
Roopesh Shetty: ರೂಪೇಶ್ ಶೆಟ್ಟಿಗೋಸ್ಕರ ದೊಡ್ಡ ತ್ಯಾಗ ಮಾಡಲು ಮುಂದಾದ ಆರ್ಯವರ್ಧನ್ ಗುರೂಜಿ
Arun Sagar: ಬಿಗ್​ ಬಾಸ್​ನಿಂದ ಅರುಣ್​ ಸಾಗರ್​ ಎಲಿಮಿನೇಟ್​; ಫಿನಾಲೆಯ ಸಮೀಪದಲ್ಲಿ ಮುಗ್ಗರಿಸಿದ ಕಲಾವಿದ
ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ
ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಮರು ಎಂಟ್ರಿ ಪಡೆದ ದೀಪಿಕಾ ದಾಸ್​ಗೆ ಇದು ನಿರ್ಣಾಯಕ ವಾರ

ಹಲವು ಬಾರಿ ಬಿಗ್ ಬಾಸ್ 110 ದಿನ, 120 ದಿನ ನಡೆದ ಉದಾಹರಣೆ ಇದೆ. ಆದರೆ, ಈ ಬಾರಿ ಬಿಗ್ ಬಾಸ್​ನ ಸರಿಯಾಗಿ 100 ದಿನಕ್ಕೆ ಪೂರ್ಣಗೊಳಿಸಲಾಗುತ್ತಿದೆ. ಈ ಬಾರಿ ಒಟಿಟಿ ಸೀಸನ್​ ಇತ್ತು. ಅದನ್ನೂ ಸೇರಿಸಿದರೆ ಒಟ್ಟಾರೆ ಬಿಗ್ ಬಾಸ್ ಜರ್ನಿ 145 ದಿನ ಆಗಲಿದೆ. ಈ ಕಾರಣದಿಂದಲೂ ಬಿಗ್ ಬಾಸ್ 100ನೇ ದಿನಕ್ಕೆ ಅಂತ್ಯವಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ

Bigg Boss Kannada Finale:

ಈ ಬಾರಿ ಬಿಗ್ ಬಾಸ್ ಫಿನಾಲೆ ಗ್ರ್ಯಾಂಡ್ ಆಗಿ ನಡೆಯಲಿದೆ. ಹಳೆಯ ಸ್ಪರ್ಧಿಗಳು ಬಿಗ್ ಬಾಸ್ ವೇದಿಕೆ ಏರಿ ಡ್ಯಾನ್ಸ್ ಮಾಡಲಿದ್ದಾರೆ. ವಿವಿಧ ಮನರಂಜನಾ ಕಾರ್ಯಕ್ರಮಗಳು ಕೂಡ ಫಿನಾಲೆ ಎಪಿಸೋಡ್​ನಲ್ಲಿ ಇರಲಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಫಿನಾಲೆ ಎಪಿಸೋಡ್ ನಡೆಸಿಕೊಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:47 pm, Mon, 26 December 22