BBK9 Finale: ಬಿಗ್ ಬಾಸ್ ಟ್ರೋಫಿಗಾಗಿ 6 ಮಂದಿ ನಡುವೆ ಫೈಟ್; ಫಿನಾಲೆಗೆ ಸಜ್ಜಾಗುತ್ತಿದೆ ಕಲರ್ಫುಲ್ ವೇದಿಕೆ
Bigg Boss Kannada Finale: ‘ಬಿಗ್ ಬಾಸ್ ಕನ್ನಡ ಸೀಸನ್ 9’ ಫಿನಾಲೆ ಡಿ.30 ಮತ್ತು 31ರಂದು ನಡೆಯಲಿದೆ. 6 ಮಂದಿ ನಡುವೆ ಟ್ರೋಫಿಗಾಗಿ ಪೈಪೋಟಿ ಜೋರಾಗಿದೆ. ಮಿಡ್ ವೀಕ್ನಲ್ಲಿ ಒಬ್ಬರು ಔಟ್ ಆಗಲಿದ್ದಾರೆ.
Updated on: Dec 26, 2022 | 4:37 PM

ರಾಕೇಶ್ ಅಡಿಗ ಅವರು ಉತ್ತಮ ಆಟ ಪ್ರದರ್ಶಿಸುತ್ತ ಬಂದಿದ್ದಾರೆ. ಬಿಗ್ ಬಾಸ್ ಒಟಿಟಿಯಿಂದ ಇಲ್ಲಿಯ ತನಕ ಅವರಿಗೆ ವೀಕ್ಷಕರಿಂದ ತುಂಬ ಸಪೋರ್ಟ್ ಸಿಕ್ಕಿದೆ. ಅವರೀಗ ಫಿನಾಲೆಯ ಕಣದಲ್ಲಿದ್ದಾರೆ.

ರೂಪೇಶ್ ಶೆಟ್ಟಿ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಮೊದಲು ಸಾನ್ಯಾ ಐಯ್ಯರ್ ಜೊತೆ ಮಾತ್ರ ಬೆರೆಯುತ್ತಿದ್ದ ಅವರು ನಂತರ ಎಲ್ಲರೊಂದಿಗೂ ಸ್ನೇಹ ಬೆಳೆಸಿದರು. ಕೊನೇ ವಾರ ಸಮೀಪಿಸಿದ್ದು, ಟ್ರೋಫಿ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಕಾಮಿಡಿ ಮತ್ತು ಪ್ರಾಮಾಣಿಕತೆಯಲ್ಲಿ ಆರ್ಯವರ್ಧನ್ ಗುರೂಜಿ ಗಮನ ಸೆಳೆಯುತ್ತಿದ್ದಾರೆ. ಅವರ ಮಾತುಗಳಿಂದ ಮನೆಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಾರೆ. ಕೆಲವೊಮ್ಮೆ ಕಿರಿಕಿರಿಯೂ ಆಗಿದ್ದುಂಟು. ಅವರು ಕೂಡ ಫಿನಾಲೆ ವಾರದಲ್ಲಿ ಫೈಟ್ ನೀಡುತ್ತಿದ್ದಾರೆ.

ದಿವ್ಯಾ ಉರುಗಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಸ್ಪರ್ಧಿಸಿದ್ದರು. 9ನೇ ಸೀಸನ್ನಲ್ಲೂ ಅವರಿಗೆ ಅವಕಾಶ ಸಿಕ್ಕಿದ್ದಕ್ಕೆ ಅಭಿಮಾನಿಗಳು ಖುಷಿಪಟ್ಟರು. ಕಳೆದ ಬಾರಿಯಂತೆ ಈ ಬಾರಿ ಕೂಡ ಫಿನಾಲೆ ವಾರದ ತನಕ ದಿವ್ಯಾ ಬಂದಿದ್ದಾರೆ.

ಕಿರುತೆರೆ ನಟಿ ದೀಪಿಕಾ ದಾಸ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲಿ ಗಮನ ಸೆಳೆದಿದ್ದರು. ಈ ಬಾರಿ ‘ಸೀಸನ್ 9’ರಲ್ಲೂ ಅವರು ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಅಭಿಮಾನಿಗಳಿಂದ ಅವರಿಗೆ ಬೆಂಬಲ ಸಿಗುತ್ತಿದೆ.

ಫಿನಾಲೆ ವಾರದಲ್ಲಿ ಇರುವ ಏಕೈಕ ಹೊಸ ಸ್ಪರ್ಧಿ ಎಂದರೆ ಅದು ರೂಪೇಶ್ ರಾಜಣ್ಣ. ಹೊಸಬರಾದರೂ ಅವರು ತಮ್ಮ ನೇರ-ನಿಷ್ಠುರ ನಡೆಯಿಂದ ಗುರುತಿಸಿಕೊಂಡಿದ್ದಾರೆ. ಹಳಬರಿಗೆ ಅವರು ಟಫ್ ಸ್ಪರ್ಧೆ ನೀಡುತ್ತಿದ್ದಾರೆ.




