‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಫಿನಾಲೆಗೆ (BBK 9 Finale) ಕೌಂಟ್ಡೌನ್ ಶುರುವಾಗಿದೆ. ಇಂದು (ಡಿಸೆಂಬರ್ 30) ಹಾಗೂ ನಾಳೆ (ಡಿಸೆಂಬರ್ 31) ರಾತ್ರಿ 7.30ಕ್ಕೆ ಫಿನಾಲೆ ನಡೆಯಲಿದೆ. ಬಿಗ್ ಬಾಸ್ನ (Bigg Boss) ದೀರ್ಘ ಪಯಣ ಈಗ ಪೂರ್ಣಗೊಳ್ಳುತ್ತಿದೆ. ಸ್ಪರ್ಧಿಗಳಿಗೆ ತಮ್ಮ ತಮ್ಮ ಮನೆ ಸೇರುವ ಖುಷಿ ಹಾಗೂ ದೊಡ್ಮನೆ ಬಿಟ್ಟು ಹೋಗಬೇಕಲ್ಲ ಎಂಬ ದುಃಖ ಎರಡೂ ಇದೆ. ಈ ಬಾರಿ ಫಿನಾಲೆ ಅದ್ದೂರಿಯಾಗಿ ನಡೆಯಲಿದೆ. ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಫಿನಾಲೆ ಹೇಗಿರಲಿದೆ ಎನ್ನುವುದರ ಝಲಕ್ ಅನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ, ನಟಿ ಸಂಜನಾ ಆನಂದ್ ಮೊದಲಾದವರು ಸ್ಟೆಪ್ ಹಾಕಿದ್ದಾರೆ. ಇವರ ಡ್ಯಾನ್ಸ್ನಿಂದ ಫಿನಾಲೆ ವೇದಿಕೆಯ ರಂಗು ಹೆಚ್ಚಿದೆ. ಇಂದು ಹಾಗೂ ನಾಳೆ ಎರಡೂ ದಿನ ಮನರಂಜನಾ ಕಾರ್ಯಕ್ರಮಗಳು ಇರಲಿವೆ.
ಈ ಬಾರಿ ಒಟ್ಟೂ 18 ಸ್ಪರ್ಧಿಗಳು ಬಿಗ್ ಬಾಸ್ನಲ್ಲಿ ಪಾಲ್ಗೊಂಡಿದ್ದರು. ಆ ಪೈಕಿ 13 ಸ್ಪರ್ಧಿಗಳು ಈಗಾಗಲೇ ಎಲಿಮಿನೇಟ್ ಆಗಿದ್ದಾರೆ. ಆ ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆಯಲ್ಲಿ ಭಾಗಿ ಆಗುತ್ತಿದ್ದಾರೆ. ಹೊಸ ಸ್ಪರ್ಧಿಗಳ ಕುರಿತಂತೆ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಕೆಲವರು ಡ್ಯಾನ್ಸ್ ಕೂಡ ಮಾಡಲಿದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು
ಪ್ರತಿ ಬಾರಿ ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ದೊಡ್ಮನೆ ಒಳಗೆ ಎಂಟ್ರಿ ಕೊಡುತ್ತಾರೆ. ಕೊನೆಯದಾಗಿ ಉಳಿದುಕೊಳ್ಳುವ ಎರಡು ಸ್ಪರ್ಧಿಗಳನ್ನು ಅವರು ವೇದಿಕೆಗೆ ಕರೆದುಕೊಂಡು ಬರುತ್ತಾರೆ. ಪ್ರತಿ ಬಾರಿ ಇದು ನಡೆದುಕೊಂಡು ಬಂದೇ ಇದೆ. ಈ ಬಾರಿಯೂ ಸುದೀಪ್ ಅವರು ದೊಡ್ಮನೆ ಒಳಗೆ ಕಾಲಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸದ್ಯ ದೊಡ್ಮನೆಯಲ್ಲಿ ಐವರು ಸ್ಪರ್ಧಿಗಳಿದ್ದಾರೆ. ಈ ಪೈಕಿ ಇಂದು ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆ ಇದೆ. ಮೂವರು ಸ್ಪರ್ಧಿಗಳು ಮುಂದಿನ ಎಪಿಸೋಡ್ವರೆಗೆ ಉಳಿದುಕೊಳ್ಳಲಿದ್ದಾರೆ. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್ ತಮ್ಮ ತಮ್ಮ ಸ್ಟ್ರೆಂತ್ ಏನು ಎಂಬುದನ್ನು ತೋರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ