BBK 9 Final: ಇಂದು ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಫಿನಾಲೆ: ಯಾರು ಆಗ್ತಾರೆ ವಿನ್ನರ್..?
Bigg Boss Kannada 9 Final: ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಮಹಿಳಾ ಸ್ಪರ್ಧಿ ಗೆದ್ದಿದ್ದು ಒಂದೇ ಬಾರಿ. ಈ ಬಾರಿ ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ಫೈನಲ್ ತಲುಪಿರುವ ಕಾರಣ ಇವರಿಬ್ಬರಲ್ಲಿ ಒಬ್ಬರು ವಿನ್ ಆಗಲಿ ಎಂದು ಮಹಿಳಾ ಫ್ಯಾನ್ಸ್ಗಳ ಅಭಿಪ್ರಾಯ.
ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada 9) ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಶುಕ್ರವಾರ ಮತ್ತು ನಾಳೆ ಫೈನಲ್ ನಡೆಯಲಿದೆ. ಮನೆಯಲ್ಲಿ ಈಗ ಐವರು ಕಠಿಣ ಸ್ಪರ್ಧಿಗಳಿದ್ದಾರೆ. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ (Roopesh Shetty), ರಾಕೇಶ್ ಅಡಿಗ (Rakesh Adiga), ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಟಾಪ್ 5ರ ಸ್ಥಾನದಲ್ಲಿದ್ದಾರೆ. ಇವರಲ್ಲಿ ಬಿಗ್ ಬಾಸ್ ಸೀಸನ್ 9 ರ ವಿನ್ನರ್ ಯಾರಾಗಬಹುದು ಎಂಬುದು ಕುತೂಹಲ ಕೆರಳಿಸಿದೆ. ಸೋಷಿಯಲ್ ಮೀಡಿಯಾ ಅಭಿಪ್ರಾಯಗಳ ಪ್ರಕಾರ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ನಡುವೆ ತೀವ್ರ ಪೈಪೋಟಿಯಿದೆ.
ವಿಶೇಷ ಎಂದರೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಮಹಿಳಾ ಸ್ಪರ್ಧಿ ಗೆದ್ದಿದ್ದು ಒಂದೇ ಬಾರಿ. ಈ ಬಾರಿ ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ಫೈನಲ್ ತಲುಪಿರುವ ಕಾರಣ ಇವರಿಬ್ಬರಲ್ಲಿ ಒಬ್ಬರು ವಿನ್ ಆಗಲಿ ಎಂದು ಮಹಿಳಾ ಫ್ಯಾನ್ಸ್ಗಳ ಅಭಿಪ್ರಾಯ. ಅಂತಿಮವಾಗಿ ಯಾರು ವಿನ್ ಆಗ್ತಾರೆ ಎಂದು ಶನಿವಾರ ಅಧಿಕೃತವಾಗಿ ಪ್ರಕಟವಾಗಲಿದೆ. ಕಲರ್ಸ್ ಕನ್ನಡದಲ್ಲಿ ಶುಕ್ರವಾರ ಮತ್ತು ಶನಿವಾರ ರಾತ್ರಿ 7:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಈ ಬಾರಿ ‘ಬಿಗ್ ಬಾಸ್ ಒಟಿಟಿ’ ಮೊದಲ ಬಾರಿಗೆ ಆರಂಭ ಆಯಿತು. 45 ದಿನಗಳ ಕಾಲ ಸ್ಪರ್ಧಿಗಳು ದೊಡ್ಮನೆಯಲ್ಲಿ ಕಳೆದರು. ಇಲ್ಲಿಂದ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸನ್ಗೆ ಕಾಲಿಟ್ಟರು. ಈ ಬಾರಿ ನವೀನರು ಹಾಗೂ ಪ್ರವೀಣರು ಎಂಬ ತಂತ್ರದ ಮೊರೆ ಹೋಗಲಾಯಿತು. 9 ನವೀನರು ಹಾಗೂ 9 ಹಳೆಯ ಸ್ಪರ್ಧಿಗಳು ಬಂದರು. ಸದ್ಯ ಬಿಗ್ ಬಾಸ್ ಮನೆಯಲ್ಲಿ 5 ಸ್ಪರ್ಧಿಗಳಿದ್ದಾರೆ. ಈ ಪೈಕಿ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ರೂಪಾಯಿ ಹಾಗೂ ಒಂದು ಕಪ್ ಸಿಗಲಿದೆ.
ಮಿಡ್ವೀಕ್ ಎಲಿಮಿನೇಷನ್ನಲ್ಲಿ ಆರ್ಯವರ್ಧನ್ ಔಟ್:
ಆರ್ಯವರ್ಧನ್ ಗುರೂಜಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಕೊನೆಯ ವಾರದ ಮಿಡ್ವೀಕ್ ಎಲಿಮಿನೇಷನ್ನಲ್ಲಿ ಬಿಗ್ ಬಾಸ್ ಮನೆ ತೊರೆದರು. ಸಂಖ್ಯಾ ಶಾಸ್ತ್ರದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದ ಇವರು ಈ ಬಗ್ಗೆ ಸಾಕಷ್ಟು ಟ್ರೋಲ್ ಆಗಿದ್ದೂ ಇದೆ. 90ಕ್ಕೂ ಹೆಚ್ಚು ದಿನ ಟಿವಿ ಸೀಸನ್ನಲ್ಲಿ ಭಾಗವಹಿಸಿ ಆರ್ಯವರ್ಧನ್ ಅವರು ಔಟ್ ಆದರು. ಈ ಮೂಲಕ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ. ಕೊನೇ ವಾರದಲ್ಲಿ ಆರ್ಯವರ್ಧನ್ ಗುರೂಜಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ‘ಆಟ ಚೆನ್ನಾಗಿ ಆಡಿದ್ದೀರಿ. ಎಲ್ಲರ ಜೊತೆ ಬೆರೆತಿದ್ದೀರಿ. ಈ ವಾರ ನೀವು ಇದ್ದ ರೀತಿ ಚೆನ್ನಾಗಿತ್ತು’ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಮೆಚ್ಚುಗೆ ಪಡೆದಿದ್ದಕ್ಕೆ ಆರ್ಯವರ್ಧನ್ ಭಾವುಕರಾಗಿದ್ದರು. ಆದರೂ ಕೂಡ ಅವರು ಫಿನಾಲೆಗೆ ಬರಲು ಸಾಧ್ಯವಾಗಲಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.