Yash: ಜನವರಿ 8ಕ್ಕೆ ರಾಕಿಂಗ್ ‌ಸ್ಟಾರ್ ಫ್ಯಾನ್ಸ್​ಗೆ ಕಾದಿದೆ ಬಿಗ್ ಸರ್​ಪ್ರೈಸ್: ಯಶ್ 19ಗೆ‌‌ ಡೈರೆಕ್ಟರ್ ಫಿಕ್ಸ್?

Narthan Birthday: ಇಂದು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ನರ್ತನ್ ಅವರ ಹುಟ್ಟುಹಬ್ಬ. ಇವರ ಜನ್ಮದಿನಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಸಿಯಲ್ ‌ಮೀಡಿಯಾ ಪೇಜ್​ನಲ್ಲಿ ನರ್ತನ್​ಗೆ ಕೆವಿನ್ ವಿಶ್ ಮಾಡಿದೆ.

Yash: ಜನವರಿ 8ಕ್ಕೆ ರಾಕಿಂಗ್ ‌ಸ್ಟಾರ್ ಫ್ಯಾನ್ಸ್​ಗೆ ಕಾದಿದೆ ಬಿಗ್ ಸರ್​ಪ್ರೈಸ್: ಯಶ್ 19ಗೆ‌‌ ಡೈರೆಕ್ಟರ್ ಫಿಕ್ಸ್?
Narthan and Yash
Follow us
TV9 Web
| Updated By: Vinay Bhat

Updated on:Dec 30, 2022 | 10:55 AM

ಕೇವಲ ಸ್ಯಾಂಡಲ್​ವುಡ್ (Sandalwood) ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ರಾಕಿಂಗ್ ಸ್ಟಾರ್ ಯಶ್ (Yash) ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ. ಯಶ್ 19ನೇ ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಲೇ ಇವೆ. ಯಶ್ 19ನೇ ಚಿತ್ರದ ನಿರ್ದೇಶನ ಯಾರು ಮಾಡುತ್ತಾರೆ, ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ. ಆದರೆ, ಕೆವಿಎನ್ (KVN) ಪ್ರೊಡಕ್ಷನ್ ಹೌಸ್ ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಇದರ ಜೊತೆಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಕೂಡ ಇದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಇಂದು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ನರ್ತನ್ ಅವರ ಹುಟ್ಟುಹಬ್ಬ. ಇವರ ಜನ್ಮದಿನಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ತಮ್ಮ ಸೋಸಿಯಲ್ ‌ಮೀಡಿಯಾ ಪೇಜ್​ನಲ್ಲಿ ನರ್ತನ್​ಗೆ ಕೆವಿನ್ ವಿಶ್ ಮಾಡಿದೆ. ಇದರಲ್ಲಿ ನಮ್ಮ ಡೈರೆಕ್ಟರ್ ಎಂದು ಬರೆದಿರುವುದು ಕುತೂಹಲ ಕೆರಳಿಸಿದೆ. ಈ ಮೂಲಕ ಯಶ್ 19 ಬಗ್ಗೆ ಚಿಕ್ಕ ಸುಳಿವು ನೀಡಿರುವ ಕೆವಿಎನ್ ಜನವರಿ 8 ಕ್ಕೆ ಯಶ್ ಹುಟ್ಟುಹಬ್ಬದ ದಿನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ
Image
‘ಮೇಡಂ ಕೆಳಗಿನ ಬಟ್ಟೆ ಎಲ್ಲಿ?’ ಹಾಟ್ ಫೋಟೋಶೂಟ್ ಮಾಡಿಸಿ ಟ್ರೋಲ್ ಆದ ನಟಿ ಅನನ್ಯಾ ಪಾಂಡೆ
Image
Shah Rukh Khan: ‘ಪಠಾಣ್​’ ಚಿತ್ರಕ್ಕೆ ಸೆನ್ಸಾರ್​ ಸಂಕಷ್ಟ; ಹಲವು ಬದಲಾವಣೆ ಮಾಡುವಂತೆ ಅಧಿಕಾರಿಗಳಿಂದ ಸೂಚನೆ
Image
‘ಪದವಿ ಪೂರ್ವ’, ‘ಜಮಾಲಿಗುಡ್ಡ’ ಜತೆ ಬರ್ತಿವೆ ಹಲವು ಸಿನಿಮಾ; ವರ್ಷದ ಕೊನೇ ವಾರವೂ ಸಖತ್​ ಪೈಪೋಟಿ
Image
Vallabhaneni Janardhan: ‘ಮಾನಸ ಸರೋವರ’ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್​ ಮಾಡಿ ಗೆದ್ದಿದ್ದ ವಲ್ಲಭನೇನಿ ಜನಾರ್ಧನ್​ ನಿಧನ

ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು

ಶಿವರಾಜ್​ ಕುಮಾರ್ ಹಾಗೂ ಶ್ರೀಮುರಳಿ ನಟನೆಯ ‘ಮಫ್ತಿ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ನರ್ತನ್ ಅವರು ಸಾಕಷ್ಟು ಗಮನ ಸೆಳೆದರು. ಅವರಿಗೆ ಈ ಚಿತ್ರ ಸಾಕಷ್ಟು ಖ್ಯಾತಿ ನೀಡಿತು. ಈಗ ಅವರು ನಿರ್ದೇಶನ ಮಾಡಲಿರುವ ಮುಂದಿನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲೂ ಕಾಡುತ್ತಿದೆ. ಯಶ್ 19ನೇ ಚಿತ್ರಕ್ಕೆ ನರ್ತನ್​ ಅವರೇ ಡೈರೆಕ್ಷನ್ ಮಾಡುತ್ತಾರಾ ಅಥವಾ ಬೇರೆ ಚಿತ್ರವನ್ನು ಅವರು ಘೋಷಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.

ಸೈಫೈ- ಆಕ್ಷನ್ ಚಿತ್ರ?:

ಇತ್ತೀಚೆಗಷ್ಟೆ ಫಿಲ್ಮ್ ಕಂಪಾನಿಯನ್ ತಮ್ಮ 2ನೇ ಆನಿವರ್ಸರಿ ವಿಶೇಷವಾಗಿ ಯಶ್ ಸಂದರ್ಶನ ಮಾಡಿತ್ತು. ರಾಕಿಂಗ್ ಸ್ಟಾರ್: ಗೇಮ್‌ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಹೆಸರಿನಲ್ಲಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ಯಶ್ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಕಥೆಯ ಬಗ್ಗೆ ಯಾವುದೇ ವಿಚಾರವನ್ನು ಯಶ್ ಹೇಳಿಲ್ಲ. ಆದರೆ ಸೈನ್‌ಫಿಕ್ಷನ್ ಅಥವಾ ಆಕ್ಷನ್ ಸಿನಿಮಾ ಮಾಡುವ ಒಲವು ವ್ಯಕ್ತಪಡಿಸಿದ್ದಾರೆ. ಯಶ್ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ತೆರೆಗೆ ತರುವ ಮನಸ್ಸು ಮಾಡಿರುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದಾರಂತೆ. ಕನ್ನಡದಲ್ಲೇ ಈ ಸಿನಿಮಾ ಮೂಡಿ ಬರುತ್ತದೆ ಎನ್ನುವ ಸುಳಿವು ಕೊಟ್ಟಿದ್ದಾರೆ. ಯಶ್ ಕೆಲ ದಿನಗಳ ಹಿಂದೆ ಹಾಲಿವುಡ್ ನಟ, ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:55 am, Fri, 30 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ