ಬಿಗ್ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಇನ್ನು ಒಂದು ವಾರವಷ್ಟೆ ಬಾಕಿ ಇದೆ. ಕಳೆದ ವಾರ ಯಾರು ಹೇಗೆ ಆಡಿದರು ಎಂದು ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ವಿಶ್ಲೇಷಣೆ ಮಾಡಿದರು. ಕಳೆದ ವಾರದಲ್ಲಿ ಟಾಸ್ಕ್ಗಳು ಒಂದಕ್ಕಿಂತಲೂ ಒಂದು ಕಠಿಣವಾಗಿದ್ದವು. ಸ್ಪರ್ಧಿಗಳು ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಟಾಸ್ಕ್ಗಳನ್ನು ಆಡಿದರು. ಕ್ಯಾಪ್ಟನ್ ಆಗಿದ್ದ ರಜತ್, ಉಸ್ತುವಾರಿ ನಿರ್ವಹಿಸಿದರು. ಆದರೆ ಅವರ ಉಸ್ತುವಾರಿ ಪಕ್ಷಾತೀತವಾಗಿರಲಿಲ್ಲ. ಬದಲಿಗೆ ಯಾರೋ ಕೆಲವರ ಪರವಾಗಿ ಅವರು ನಿಲುವು ತಳೆದಂತಿತ್ತು. ಈ ವಿಷಯವನ್ನು ವಿಡಿಯೋ ಸಾಕ್ಷಿ ಸಮೇತ ಹೊರಹಾಕಿದರು, ಮಾತ್ರವಲ್ಲದೆ ರಜತ್ ಅವರ ಆಟವನ್ನು ಟೀಕೆ ಸಹ ಮಾಡಿದರು.
ರಜತ್ರ ಉಸ್ತುವಾರಿಯ ಬಗ್ಗೆ ಮೊದಲಿಗೆ ಅಭಿಪ್ರಾಯ ಕೇಳಲಾಯ್ತು. ಆಗ ಗೌತಮಿ, ಉಗ್ರಂ ಮಂಜು, ಚೈತ್ರಾ, ಧನರಾಜ್ ಇನ್ನು ಕೆಲವರು ರಜತ್ ಅವರು ಪಕ್ಷಾತೀತವಾಗಿ ಉಸ್ತುವಾರಿ ಮಾಡಿಲ್ಲವೆಂದು. ಉದ್ದೇಶಪೂರ್ವಕವಾಗಿ ಕೆಲವರಿಗೆ ಫೇವರಿಸಮ್ ಮಾಡಿದರು. ಅವರ ತಂಡವನ್ನು ಗೆಲ್ಲಿಸಲು ಯತ್ನಿಸಿದರು ಎಂದು ಆರೋಪ ಮಾಡಿದರು. ಆದರೆ ರಜತ್ ಆ ಆರೋಪವನ್ನು ಒಪ್ಪಿಕೊಳ್ಳಲಿಲ್ಲ. ಆಗ ಸುದೀಪ್ ಕೆಲ ವಿಡಿಯೋಗಳನ್ನು ಪ್ಲೇ ಮಾಡಿದರು.
ಇದನ್ನೂ ಓದಿ:ಹನುಮಂತನ ಆ ಗುಣ ನನ್ನಲ್ಲೂ ಇದೆ: ಸುದೀಪ್ ಹೇಳಿದ ಆ ಗುಣ ಯಾವುದು?
ಮೂರು ವಿಡಿಯೋಗಳನ್ನು ಸುದೀಪ್ ಪ್ಲೇ ಮಾಡಿದರು. ಮೂರರಲ್ಲೂ ರಜತ್ ಕಳ್ಳಾಟ ಆಡಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮಾತ್ರವಲ್ಲದೆ ಭವ್ಯಾಗಾಗಿಯೇ ಅವರು ಈ ಮೋಸದಾಟ ಆಡಿದ್ದರು. ಇದನ್ನು ಟೀಕಿಸಿದ ಸುದೀಪ್, ಈ ವಿಡಿಯೋ ನೋಡಿದರೆ ಮಾತ್ರವಲ್ಲದೆ ಈ ವಾರವೆಲ್ಲ ನೀವು ಆಡಿರುವ ರೀತಿ ನೋಡಿದರೆ ಒಂದು ಪ್ಯಾಟರ್ನ್ ಕಾಣುತ್ತಿದೆ. ಪ್ರತಿ ಬಾರಿ ನೀವು ಬಯಾಸ್ ಆದಾಗಲೂ ಅದರ ಲಾಭ ಸಿಕ್ಕಿರುವುದು ಭವ್ಯಾಗೆ. ಹಾಗಿದ್ದಮೇಲೆ ಇದನ್ನು ಫೇವರಿಸಮ್ ಎನ್ನದೆ ಇನ್ನೇನೆಂದು ಕರೆಯಬೇಕು’ ಎಂದು ಪ್ರಶ್ನೆ ಮಾಡಿದರು.
ಆರಂಭದಲ್ಲಿ ವಿತಂಡ ವಾದ ಪ್ರಯತ್ನ ಮಾಡಿದ ರಜತ್, ‘ನೋಡಲಿಲ್ಲ, ರೂಲ್ಸ್ ಗೊತ್ತಿರಲಿಲ್ಲ’ ಎಂಬ ವಾದಿಸಲು ಯತ್ನಿಸಿದರು. ಆದರೆ ಸುದೀಪ್, ಚೈತ್ರಾ ಇದೇ ಉತ್ತರ ನೀಡಿದಾಗ ನೀವು ಹೇಗೆ ನಡೆದುಕೊಂಡಿರಿ ಎಂಬುದನ್ನು ನೆನಪು ಮಾಡಿಕೊಳ್ಳಿ ಎಂದರು. ಬ್ರೇಕ್ ಸಮಯದಲ್ಲಿ ಮನೆಯವರ ಮೇಲೆ ಸಹ ರಜತ್ ಸಿಟ್ಟಿನಿಂದ ಮಾತನಾಡಿದರು. ಅದಾದ ಬಳಿಕ ಸುದೀಪ್ ಮುಂದೆ ತಪ್ಪು ಒಪ್ಪಿಕೊಂಡ ರಜತ್, ಇನ್ನು ಮುಂದೆ ತಿದ್ದುಕೊಳ್ಳುವುದಾಗಿ ಹೇಳಿದರು. ಕ್ಷಮೆ ಸಹ ಕೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ