ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆ್ಯಂಕರಿಂಗ್ನ ಅದ್ಭುತವಾಗಿ ಮಾಡುತ್ತಿದ್ದಾರೆ. ವೀಕೆಂಡ್ ಬಂತು ಎಂದರೆ ಜನರು ಈ ಶೋ ನೋಡಲು ಕಾಯುತ್ತಾ ಇರುತ್ತಾರೆ. ಅವರು ಮೊದಲ ವಾರ ಜಗದೀಶ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದರ ಟಿಆರ್ಪಿ ಈಗ ರಿವೀಲ್ ಆಗಿದೆ. ವೀಕೆಂಡ್ನಲ್ಲಿ ವೀಕ್ಷಕರು ಭರ್ಜರಿ ಟಿಆರ್ಪಿ ತಂದುಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿರುವ ಕೊನೆಯ ಸೀಸನ್ ಇದಾಗಿದೆ. ಹೀಗಾಗಿ, ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ವಾರದ ದಿನಗಳಲ್ಲಿ 7.2 ಟಿವಿಆರ್ ಪಡೆದುಕೊಂಡಿದೆ. ಶನಿವಾರ 8.8 ಟಿವಿಆರ್ ಸಿಕ್ಕಿದೆ. ಭಾನುವಾರ 9.2 ಟಿವಿಆರ್ ದೊರೆತಿದೆ. ಶನಿವಾರ ಹಾಗೂ ಭಾನುವಾರದ ಟಿವಿಆರ್ ಸೇರಿಸಿದರೆ 9 ಟಿವಿಆರ್ ಆಗಲಿದೆ. ಇದು ಕಿಚ್ಚನಿಗೆ ಇರೋ ಕ್ರೇಜ್ನ ಸೂಚನೆ ಆಗಿದೆ.
ಇದು ಸುದೀಪ್ ಹೋಸ್ಟ್ ಮಾಡಿದ ಮೊದಲ ವಾರದ ಟಿಆರ್ಪಿ ಆಗಿದೆ. ಆ ವಾರದಲ್ಲಿ ಜಗದೀಶ್ ಅವರು ಬಿಗ್ ಬಾಸ್ ವಿರುದ್ಧ ಹರಿಹಾಯ್ದಿದ್ದರು. ಅವರು ಬಿಗ್ ಬಾಸ್ನ ಟೀಕೆ ಮಾಡಿದ್ದರು. ಬಿಗ್ ಬಾಸ್ನೇ ಖರೀದಿ ಮಾಡುವ ಮಾತನ್ನೂ ಆಡಿದ್ದರು. ಈ ಎಲ್ಲಾ ವಿಚಾರಗಳನ್ನು ಸುದೀಪ್ ಪ್ರಸ್ತಾಪ ಮಾಡಿದ್ದರು.
ಇನ್ನು ಧಾರಾವಾಹಿ ವಿಚಾರದಲ್ಲಿ ಟಿಆರ್ಪಿಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದಿದೆ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಹಲವು ಸತ್ಯಗಳು ರಿವೀಲ್ ಆಗುತ್ತಿವೆ. ಹೀಗಾಗಿ, ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ.
ಇದನ್ನೂ ಓದಿ: ಬಿಗ್ ಬಾಸ್ ಲಾಂಚ್ಗೆ ಭರ್ಜರಿ ಟಿಆರ್ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಮೂರನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಈ ಧಾರಾವಾಹಿಯ ಸಮಯ ಬದಲಾಗಿದೆ. ಆದಾಗ್ಯೂ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ. ಈ ಧಾರಾವಾಹಿ ಹೊಸದಾಗಿ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:09 pm, Thu, 17 October 24