ಮತ್ತೆ ಚಿಗುರಿತು ವಿನಯ್-ಕಾರ್ತಿಕ್ ಗೆಳೆತನ: ಸರಿ ಹೋದರೆ ವಿನಯ್-ಸಂಗೀತಾ?

|

Updated on: Dec 10, 2023 | 11:24 PM

Bigg Boss: ಹೊರಗೆ ಕೆಲವು ವರ್ಷಗಳಿಂದಲೂ ಒಳ್ಳೆಯ ಗೆಳೆಯರಾಗಿದ್ದ ವಿನಯ್ ಹಾಗೂ ಕಾರ್ತಿಕ್ ಗೆಳೆತನ ಮನೆಯ ಒಳಗೆ ಮುರಿದು ಹೋಗಿದೆ. ಆದರೆ ಸುದೀಪ್ ದೆಸೆಯಿಂದಾಗಿ ಆ ಗೆಳೆತನ ಮತ್ತೆ ಚಿಗುರಿದೆ. ಅಂದಹಾಗೆ ಸಂಗೀತಾ ಹಾಗೂ ವಿನಯ್ ಗೆಳೆತನ ಸರಿಹೋಯ್ತಾ?

ಮತ್ತೆ ಚಿಗುರಿತು ವಿನಯ್-ಕಾರ್ತಿಕ್ ಗೆಳೆತನ: ಸರಿ ಹೋದರೆ ವಿನಯ್-ಸಂಗೀತಾ?
ವಿನಯ್ ಗೌಡ
Follow us on

ವಿನಯ್ ಗೌಡ (Vinay Gowda) ಹಾಗೂ ಕಾರ್ತಿಕ್ ಮಹೇಶ್ ಅವರದ್ದು ಹಲವು ವರ್ಷಗಳ ಗೆಳೆತನ. ಬಿಗ್​ಬಾಸ್​ ಮನೆಯಲ್ಲಿ ಇರುವ ಅತ್ಯಂತ ಹಳೆಯ ಗೆಳೆಯರು ವಿನಯ್ ಹಾಗೂ ಕಾರ್ತಿಕ್. ಆದರೆ ಈ ಇಬ್ಬರ ನಡುವೆ ಭೀಕರ ಎಂಬಂತೆ ಜಗಳವಾಗಿತ್ತು. ಇಬ್ಬರ ನಡುವಿನ ಗೆಳೆತನ ಮುರಿದು ಬಿದ್ದಿತ್ತು. ವಿನಯ್, ಕಾರ್ತಿಕ್​ ಮೇಲೆ ಹಲ್ಲೆಗೆ ಯತ್ನಿಸಿದರೆ, ಕಾರ್ತಿಕ್ ಸಹ ವಿನಯ್ ವಿರುದ್ಧ ಚಪ್ಪಲಿ ತೆಗೆದು ನೆಲಕ್ಕೆ ಎಸದು ಸಿಟ್ಟು ತೋರಿಸಿದ್ದರು. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರು. ನಿನ್ನನ್ನು ಮುಗಿಸುವುದೇ ನನ್ನ ಗುರಿ ಎಂದು ವಿನಯ್ ಹೇಳಿದ್ದರು. ಸ್ನೇಹ ಇಲ್ಲಿಗೆ ಮುಗಿಯಿತು ಎಂದು ಸಹ ಹೇಳಿದ್ದರು. ಆದರೆ ಈಗ ಸುದೀಪ್ ದೆಸೆಯಿಂದ ಇವರಿಬ್ಬರ ಸ್ನೇಹ ಮತ್ತೆ ಚಿಗುರೊಡೆದಿದೆ.

ಕಳೆದ ವಾರ ನಡೆದ ಟಾಸ್ಕ್​ಗಳಿಂದ ಬಿಗ್​ಬಾಸ್ ಸ್ಪರ್ಧಿಗಳ ಮನದಲ್ಲಿ ಎದುರಾಳಿ ತಂಡದ ಪರವಾಗಿ ದ್ವೇಷ ತುಂಬಿಕೊಂಡಿತ್ತು. ಇದನ್ನು ಹೋಗಲಾಡಿಸುವ ಕಾರಣಕ್ಕೆ ಸುದೀಪ್ ಸಣ್ಣ ಟಾಸ್ಕ್​ ಒಂದನ್ನು ನೀಡಿದರು. ಕಾಗದದ ಬಿಳಿ ಗುಲಾಬಿ ಬುಟ್ಟಿ ಇಟ್ಟು, ಯಾರಿಗೆ ಕ್ಷಮೆ ಕೇಳಬೇಕೆನ್ನಿಸುತ್ತದೆಯೋ ಅವರಿಗೆ ಇದನ್ನು ಕೊಟ್ಟು ಕ್ಷಮೆ ಕೇಳಿ ಎಂದರು. ವಿನಯ್, ಕಾರ್ತಿಕ್​ಗೆ ಗುಲಾಬಿ ನೀಡಿ ಕ್ಷಮೆ ಕೇಳಿದರು. ವಿನಯ್ ಕ್ಷಮೆ ಸ್ವೀಕರಿಸಿದ ಕಾರ್ತಿಕ್, ವಿನಯ್​ರನ್ನು ತಬ್ಬಿಕೊಂಡು ಮತ್ತೆ ಗೆಳೆತನ ಮುಂದುವರೆಸಿದರು.

ಇದನ್ನೂ ಓದಿ:‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ ಶೃಂಗೇರಿ

ಆದರೆ ಕಾರ್ತಿಕ್, ಸಂಗೀತಾಗೆ ಹೂವು ನೀಡಿ, ಪರೋಕ್ಷವಾಗಿ ಸಂಗೀತಾ ಬಹಳ ಡಾಮಿನೆಂಟ್ ನೇಚರ್​ನವರು, ಅದನ್ನು ಅವರು ಸರಿ ಮಾಡಿಕೊಳ್ಳಬೇಕು ಎಂದರು. ನಮ್ರತಾ ಸಹ ಸಂಗೀತಾಗೆ ಹೂವು ನೀಡಿ, ಇಬ್ಬರೂ ಮತ್ತೆ ಗೆಳೆಯರಾಗೋಣ ಎಂದರು. ಪವಿ, ಕಾರ್ತಿಕ್ ಹಾಗೂ ಸಂಗೀತಾ ಇಬ್ಬರಿಗೂ ಹೂವು ನೀಡಿ ಕ್ಷಮೆ ಕೇಳಿದರು. ಸಂಗೀತಾ, ಹೂವು ತೆಗೆದುಕೊಂಡು, ವಿನಯ್​ಗೆ ಕೊಡುತ್ತಾರೆ ಎಂದು ಮನೆಯ ಸದಸ್ಯರು ಭಾವಿಸಿದ್ದರು, ಆದರೆ ಅವರು ಕೊಟ್ಟಿದ್ದು ಮೈಖಲ್​ಗೆ. ನಾವಿಬ್ಬರೂ ಗೆಳೆಯರಾಗಿದ್ದೆವು, ಇನ್ನು ಮುಂದೆ ಮತ್ತೆ ಗೆಳೆಯರಾಗೋಣ ಎಂದರು.

ಈ ನಡುವೆ ತುಕಾಲಿ ಸಂತು, ಡ್ರೋನ್ ಪ್ರತಾಪ್​ಗೆ ಹೂವು ಕೊಟ್ಟು ಭಾವುಕರಾಗಿಬಿಟ್ಟರು, ನಾನು ತಪ್ಪು ಮಾಡಿದರೆ ಕ್ಷಮಿಸು, ನನ್ನಿಂದ ನಿನಗೆ ಬಹಳ ಬೇಸರ ಆಗಿದೆ ಎಂದರು. ಪ್ರತಾಪ್, ವರ್ತೂರು ಸಂತೋಷ್​ಗೆ ಹೂ ಕೊಟ್ಟು, ನೀವು ಮೊದಲಿದ್ದಂತೆ ಇಲ್ಲ ಎಂದರು. ಕೊನೆಗೆ ವರ್ತೂರು, ತಮ್ಮ ತಪ್ಪಿನ ಅರಿವು ಮಾಡಿಕೊಂಡು ಡ್ರೋನ್​ಗೆ ಹೂವು ನೀಡಿದರು. ಇಬ್ಬರೂ ತಬ್ಬಿಕೊಂಡರು, ನಂತರ ಇಬ್ಬರೂ ಹೋಗಿ ತುಕಾಲಿಯನ್ನು ತಬ್ಬಿಕೊಂಡು ಮತ್ತೆ ಮೂವರೂ ಒಂದಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ