‘ತಿದ್ದೋದಲ್ಲ, ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ’; ಬಿಗ್ ಬಾಸ್ ವೇದಿಕೆ ಮೇಲೆ ಗುಡುಗಿದ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ವಾರದ ಪಂಚಾಯ್ತಿಯ ವೀಕೆಂಡ್ ಧಮಾಕಾ ಪ್ರೋಮೋ ಬಿಡುಗಡೆಯಾಗಿದೆ. ಸ್ಪರ್ಧಿಗಳ ಅತಿರೇಕದ ವರ್ತನೆ ಹಾಗೂ ಅವಾಚ್ಯ ಶಬ್ದಗಳ ಬಳಕೆಯ ಬಗ್ಗೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಕಠಿಣ ತೀರ್ಪುಗಳು ಹಾಗೂ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವುದಾಗಿ ಸುದೀಪ್ ಸ್ಪಷ್ಟಪಡಿಸಿದ್ದು, ಮನೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

‘ತಿದ್ದೋದಲ್ಲ, ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ’; ಬಿಗ್ ಬಾಸ್ ವೇದಿಕೆ ಮೇಲೆ ಗುಡುಗಿದ ಸುದೀಪ್
ಬಿಗ್ ಬಾಸ್

Updated on: Oct 10, 2026 | 12:58 PM

ಮುಖ್ಯಾಂಶಗಳು

  • ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಮಹತ್ವದ ತೀರ್ಪುಗಳು
  • ಮಿತಿ ಮೀರಿದ ಸ್ಪರ್ಧಿಗಳ ವರ್ತನೆಗೆ ಕಠಿಣ ಎಚ್ಚರಿಕೆ ನೀಡಿದ ಸುದೀಪ್
  • ಬಿಗ್ ಬಾಸ್ ಮನೆಯಲ್ಲಿ ಇಂದಿನ ಸಂಚಿಕೆಯ ಅಚ್ಚರಿಯ ಬೆಳವಣಿಗೆಗಳು

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ನಡೆದ ಗಲಾಟೆಗಳು, ಅವಾಚ್ಯ ಶಬ್ದಗಳ ಬಳಕೆ ಮತ್ತು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿರುವ ವಿಚಾರಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈಗ ಶನಿವಾರ ಬಂದಿದ್ದು, ಕಿಚ್ಚ ಸುದೀಪ್ ಪಂಚಾಯ್ತಿಗೆ ರೆಡಿ ಆಗಿದ್ದಾರೆ. ಈ ವಾರ ಸಾಕಷ್ಟು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಸುದೀಪ್ ಹೇಳಿದ್ದಾರೆ.

ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದೆ. ‘ಈ ವಾರದ ಚರ್ಚೆಗಿಂತ ಹೆಚ್ಚಿನ ಮಹತ್ವ ನಿರ್ಧಾರಗಳಿಗೆ ಇರಲಿದೆ’ ಎಂದು ಸ್ವತಃ ಕಿಚ್ಚ ಸುದೀಪ್ ತಿಳಿಸಿದ್ದಾರೆ. ‘ಮನೆ ಚೆನ್ನಾಗಿ ಕಾಣಲಿ ಅಂತ ಗಿಡ ತಂದು ಇಡ್ತೀವಿ. ಆದರೆ, ಆ ಗಿಡ ಅಡ್ಡಾದಿಡ್ಡಿ ಬೆಳೆದು ಗೋಡೆಯೇ ಒಡೆಯುವ ಹಂತಕ್ಕೆ ಹೋದಾಗ ಕಠಿಣ ಕ್ರಮ ಕೈಗೊಳ್ಳಲೇಬೇಕಾಗುತ್ತದೆ’ ಎಂಬ ಸುಳಿವನ್ನು ಸುದೀಪ್ ನೀಡಿದ್ದಾರೆ. ಇಂದಿನ ವೀಕೆಂಡ್ ಪಂಚಾಯ್ತಿಯಲ್ಲಿ ತಪ್ಪು ಮಾಡಿದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಖಚಿತವಾಗಿದ್ದು, ಯಾವೆಲ್ಲ ಮಹತ್ವದ ತೀರ್ಪುಗಳು ಹೊರಬರಲಿವೆ ಎಂಬ ಕುತೂಹಲ ಮೂಡಿದೆ. ಕೆಲವರನ್ನು ರೆಡ್ ಕಾರ್ಡ್ ಕೊಟ್ಟು ಮನೆಯಿಂದ ಹೊರಕ್ಕೆ ಕಳುಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿದ ಗಗನ್; ಕಾರಣವೇನು?

ಮಂಜು ಅವಾಚ್ಯ ಶಬ್ದ

ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ಅವರ ಆಟಕ್ಕಿಂತ ಮಾತಿನ ಪ್ರಭಾವವೇ ಹೆಚ್ಚಾಗಿದೆ. ಯಾರೇ ಎದುರಿಗೆ ಬಂದರೂ ತಮ್ಮ ವಾದದಿಂದಲೇ ಅವರನ್ನು ಮಣಿಸುವ ಚಾತುರ್ಯ ಹೊಂದಿರುವ ಮಂಜು, ಕೆಲವೊಮ್ಮೆ ಎಲ್ಲ ವಿಷಯಗಳಲ್ಲೂ ಅತಿರೇಕವಾಗಿ ಮಾತನಾಡುವುದು ಮನೆಯ ಇತರ ಸ್ಪರ್ಧಿಗಳಿಗೆ ಭಾರೀ ಕಿರಿಕಿರಿ ಉಂಟು ಮಾಡಿದೆ. ಅವರು ಈ ವಾರ ಬಳಕೆ ಮಾಡಿದ ಅವಾಚ್ಯ ಶಬ್ದಗಳು ಇಡೀ ಮನೆಯ ವಾತಾವರಣವನ್ನು ಹದಗೆಡಿಸಿದೆ. ಮಂಜು ಹಾಗೂ ಯಶಸ್, ಮಂಜು ಹಾಗೂ ಸೌಂದರ್ಯಾ ನಡುವೆ ಸಾಕಷ್ಟು ಕಿರಿಕ್ ಆಗಿದೆ.

ಗಗನ್ ಹಾಗೂ ಗಾನವಿ

ಮನೆಯಲ್ಲಿ ಗಗನ್ ಹಾಗೂ ಗಾನವಿ ನಡುವಿನ ಸಂಬಂಧವು ಮೊದಲಿನಿಂದಲೂ ಏರಿಳಿತಗಳಿಂದ ಕೂಡಿದೆ. ಟಾಸ್ಕ್ ವೇಳೆ ಗಗನ್ ಅವರನ್ನು ಉದ್ದೇಶಪೂರ್ವಕವಾಗಿ ‘ಕುನ್ನಿ’ ಎಂದು ಕರೆಯುವ ಮೂಲಕ ಗಾನವಿ ಅವರನ್ನು ಟ್ರಿಗರ್ ಮಾಡಿದ್ದರು. ಇದರ ಬೆನ್ನಲ್ಲೇ ಕಳಪೆ ಕೊಡುವ ಸಂದರ್ಭದಲ್ಲಿ ಇವರ ನಡುವೆ ನಡೆದ ಸಂಭಾಷಣೆಯು ತೀವ್ರ ಸ್ವರೂಪ ಪಡೆದುಕೊಂಡಿತು. ‘ನೀನು, ನಾನು ಹಾಕುವ ಪ್ಯಾಂಟ್​​ ಬೆಲೆ ಬಾಳಲ್ಲ’ ಎಂಬರ್ಥದಲ್ಲಿ ಗಗನ್ ಆಡಿದ್ದ ಮಾತುಗಳು ದೊಡ್ಡ ವಿವಾದಕ್ಕೆ ತಿರುಗಿ, ಇಬ್ಬರ ನಡುವೆ ಅವಾಚ್ಯ ಶಬ್ದಗಳ ಬಳಕೆಗೆ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ಮಾತುಕತೆ ವಿಕೋಪಕ್ಕೆ ಹೋಗಲು ಕಾರಣವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:28 pm, Sat, 10 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us