ಮಂಜು ಮೇಲೆ ಹಲ್ಲೆ ಮಾಡಿದ್ರಾ ಸೌಂದರ್ಯಾ? ಬಿಗ್ ಬಾಸ್ ಮಾಡಿದ ನಿರ್ಧಾರ ಏನು?

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ಮಂಜು ಹಾಗೂ ಸೌಂದರ್ಯಾ ನಡುವೆ ತೀವ್ರ ಕಿತ್ತಾಟ ನಡೆದು, ತಳ್ಳಾಟದ ಹಂತಕ್ಕೆ ತಲುಪಿದೆ. ಸೌಂದರ್ಯಾ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಂಜು ಆರೋಪಿಸಿದ್ದಾರೆ. ನಿಯಮ ಉಲ್ಲಂಘನೆಯಾಗಿದ್ದರೂ ಆಟದ ಭರದಲ್ಲಿ ನಡೆದಿದ್ದರಿಂದ ಸೌಂದರ್ಯಾಗೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ವಾರ್ನಿಂಗ್ ಕೊಡುವ ಸಾಧ್ಯತೆಯಿದೆ. ಬಿಗ್ ಬಾಸ್ ನಿರ್ಧಾರಕ್ಕೆ ವೀಕ್ಷಕರು ಕಾಯುತ್ತಿದ್ದಾರೆ.

ಮಂಜು ಮೇಲೆ ಹಲ್ಲೆ ಮಾಡಿದ್ರಾ ಸೌಂದರ್ಯಾ? ಬಿಗ್ ಬಾಸ್ ಮಾಡಿದ ನಿರ್ಧಾರ ಏನು?
ಸೌಂದರ್ಯಾ ಶೆಟ್ಟಿ- ಮಂಜು

Updated on: Sep 15, 2026 | 6:34 AM

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ನಿಯಮ ಉಲ್ಲಂಘನೆ
  • ಸೌಂದರ್ಯಾಗೆ ಎವಿಕ್ಷನ್ ಭೀತಿ?
  • ಆಟದ ಭರದಲ್ಲಿ ನಡೆದ ತಳ್ಳಾಟ

ಬಿಗ್ ಬಾಸ್ ಮನೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಒಂದರಲ್ಲಿ ಮಂಜು ಹಾಗೂ ಸೌಂದರ್ಯಾ ನಡುವೆ ಕಿತ್ತಾಟ ನಡೆದಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ್ದಾರೆ. ಸೌಂದರ್ಯಾ ಅವರು ಕೋಪ ತಾಳಲಾರದೆ ಮಂಜುನ ತಳ್ಳಿದ್ದಾರೆ. ಇದರಿಂದ ಸಿಟ್ಟಾದ ಮಂಜು, ‘ಸೌಂದರ್ಯಾ ಅವರು ನನಗೆ ಹೊಡೆದಿದ್ದಾರೆ’ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಬಿಗ್ ಬಾಸ್ ಈ ವಿಷಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇಂದು ತಿಳಿಯಲಿದೆ.

ಬಿಗ್ ಬಾಸ್​ನ ಮೂಲ ನಿಯಮ ಎಂದರೆ ಯಾರೊಬ್ಬರೂ ಯಾರ ಮೇಲೆಯೂ ಹಲ್ಲೆ ನಡೆಸುವಂತಿ್ಲ್ಲ. ಹಾಗೆ ಹೊಡೆದರೆ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಈ ರೀತಿ ಹೊಡೆದು ದೊಡ್ಮನೆಯಿಂದ ಹೊರ ಹೋದವರು ಅನೇಕರಿದ್ದಾರೆ. ಆದರೆ, ಸೌಂದರ್ಯಾ ವಿಷಯದಲ್ಲಿ ಆ ರೀತಿ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಅವರಿಗೆ ಸುದೀಪ್ ಅವರು ವೀಕೆಂಡ್​​ನಲ್ಲಿ ಒಂದು ವಾರ್ನಿಂಗ್ ಕೊಟ್ಟು ಬಿಡಬಹುದು ಎನ್ನಲಾಗುತ್ತಿದೆ.

ಸೌಂದರ್ಯಾ ಅವರನ್ನು ಹೊರಕ್ಕೆ ಕಳುಹಿಸದೇ ಇರಲು ಒಂದು ಕಾರಣವೂ ಇದೆ. ಇಲ್ಲಿ ಸೌಂದರ್ಯಾ ತಳ್ಳಿದ್ದು ಆಟದ ಭರದಲ್ಲಿ. ಹೀಗಾಗಿ, ಇದಕ್ಕೆ ಕ್ಷಮೆ ಇದ್ದೇ ಇದೆ. ಈ ಮೊದಲು ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಕೂಡ ಇದೇ ರೀತಿಯ ತಪ್ಪನ್ನು ಮಾಡಿದ್ದರು. ಅವರಿಗೆ ವಾರ್ನಿಂಗ್ ಕೊಟ್ಟು ಬಿಡಲಾಗಿತ್ತು. ಈಗಲೂ ಸೌಂದರ್ಯಾಗೆ ಹಾಗೆಯೇ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಮತ್ತೆ ಬಿಗ್ ಬಾಸ್ ಮನೆಗೆ ಬರಲ್ಲ ಓಂ ಪ್ರಕಾಶ್ ರಾವ್; ಕಠಿಣ ನಿರ್ಧಾರ ಮಾಡಿದ ನಿರ್ದೇಶಕ

ನಿಜಕ್ಕೂ ಆಗಿದ್ದೇನು?

ಬಿಗ್ ಬಾಸ್ ಮನೆಯಲ್ಲಿ ಗೇಮ್ ಒಂದನ್ನು ನೀಡಲಾಗಿತ್ತು. ಕೆಂಪು ಬಣ್ಣದ ವಸ್ತುಗಳನ್ನು ಸೂಚಿಸಿದ ಸ್ಥಳದಿಂದ ತೆಗೆದುಕೊಂಡು ಬರಬೇಕು.ಆ ಬಳಿಕ ಅದನ್ನು ಕಾಯ್ದುಕೊಳ್ಳಬೇಕು. ಈ ರೀತಿ ಕಾಯ್ದುಕೊಳ್ಳುವಾಗ ಮಂಜು ಅವರು ಸೌಂದರ್ಯಾ ಅವರಿಂದ ವಸ್ತುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರು. ಈ ವೇಳೆ ತಳ್ಳಾಟ ನಡೆದಿದೆ. ಆ ಬಳಿಕ ಮಂಜು ಅವರನ್ನು ಕನ್​ಫೆಷನ್​ ರೂಂಗೆ ಕರೆಸಿ ಸಮಾಧಾನ ಮಾಡುವ ಕೆಲಸ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us