AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Winner List: ಯಾವ ಸೀಸನ್ ಯಾರು ವಿನ್ನರ್? ಬಿಗ್​​ಬಾಸ್ ವಿಜೇತರ ಪೂರ್ಣ ಪಟ್ಟಿ

ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗುತ್ತಿದೆ. ಬಿಗ್​​ಬಾಸ್ ಗೆದ್ದು 50 ಲಕ್ಷ ಜೇಬಿಗಿಳಿಸಿಕೊಳ್ಳುವ ಜೊತೆಗೆ ದೊಡ್ಡ ಹೆಸರು ಮಾಡಬೇಕು, ಜನಪ್ರಿಯತೆ ಗಳಿಸಿಕೊಳ್ಳಬೇಕು ಎಂಬ ಉಮೇದಿನಲ್ಲಿ ಹಲವಾರು ಮಂದಿ ಸ್ಪರ್ಧಿಗಳು ಈ ಬಾರಿಯೂ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ವರೆಗೆ 12 ಸೀಸನ್​​ಗಳು ಮುಗಿದಿದ್ದು ನೂರಾರು ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದು ಹೋಗಿದ್ದಾರೆ. ಈ 12 ಸೀಸನ್​​ಗಳಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ ನೋಡಿ...

ಮಂಜುನಾಥ ಸಿ.
|

Updated on: Sep 05, 2026 | 3:53 PM

Share
ಬಿಗ್​​ಬಾಸ್ ಕನ್ನಡದ ಮೊದಲ ಶೋ ಒಂದು ರೀತಿ ಎವರ್​​ ಗ್ರೀನ್ ಶೋ. ಇತ್ತೀಚೆಗೆ ಸುದೀಪ್ ಸಹ ಹೇಳಿದಂತೆ ಅದೊಂದು ಅದ್ಭುತವಾದ ಆರಂಭ. ಯಾರಿಗೂ ಏನು ಮಾಡಬೇಕೋ ತಿಳಿಯದು ಆದರೆ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದರು. ಶೋಕ್ಕೆ ಅದ್ಭುತ ಆರಂಭ ದೊರಕಿಸಿಕೊಟ್ಟರು. ಆ ಶೋನಲ್ಲಿ ವಿಜಯ್ ರಾಘವೇಂದ್ರ ವಿಜೇತರಾಗಿದ್ದರು. ಅರುಣ್ ಸಾಗರ್ ರನ್ನರ್ ಅಪ್ ಆದರು.

1 / 12
ಮೊದಲ ಸೀಸನ್ ರೀತಿಯೇ ಕೆಲ ದೊಡ್ಡ ಹೆಸರುಗಳು ಬಿಗ್​​ಬಾಸ್ ಕನ್ನಡ ಸೀಸನ್ 2ರಲ್ಲೂ ಇತ್ತು. ಮಯೂರ್ ಪಟೇಲ್, ಆದಿ ಲೋಕೇಶ್, ಹರ್ಷಿಕಾ ಪೂಣಚ್ಚ, ಸೃಜನ್ ಲೋಕೇಶ್, ನೀತು ಶೆಟ್ಟಿ, ಶಕೀಲಾ ಹೀಗೆ ದೊಡ್ಡ ಹೆಸರುಗಳಿದ್ದವು. ಆದರೆ ಕೊನೆಗೆ ಗೆದ್ದಿದ್ದ ಅಕುಲ್ ಬಾಲಾಜಿ.

2 / 12
ಮೂರನೇ ಸೀಸನ್​​ನಲ್ಲಿ ಸಾಕಷ್ಟು ಡ್ರಾಮಾ ನಡೆದಿತ್ತು. ಆ ಶೋನಲ್ಲಿ ಹುಚ್ಚಾ ವೆಂಕಟ್ ಭಾಗಿ ಆಗಿದ್ದರು. ನಟಿ ಶ್ರುತಿ, ಮಾಸ್ಟರ್ ಆನಂದ್, ಪೂಜಾ ಗಾಂಧಿ, ಚಂದನ್ ಇನ್ನೂ ಕೆಲವು ಪ್ರಮುಖರು ಭಾಗಿ ಆಗಿದ್ದರು. ತಮಾಷೆಯಿಂದ ಕೂಡಿದ್ದ ಆ ಶೋನಲ್ಲಿ ಶ್ರುತಿ ವಿಜೇತರಾಗಿದ್ದರು.

3 / 12
ಬಿಗ್​​ಬಾಸ್ ಸೀಸನ್ 4, ಪ್ರೇಕ್ಷಕರು ಬಹು ಸಮಯ ನೆನಪಿಟ್ಟುಕೊಂಡಿದ್ದ ಶೋ. ಈ ಶೋನಿಂದಲೇ ಕನ್ನಡ ಮನೊರಂಜನಾ ಲೋಕಕ್ಕೆ ‘ಒಳ್ಳೆ ಹುಡುಗ ಪ್ರಥಮ್’ ಪರಿಚಯ ಆದದ್ದು. ಈ ಶೋನಲ್ಲಿ ಪ್ರಥಮ್ ವಿನ್ನರ್ ಆದರೆ ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದರು.

4 / 12
ಬಿಗ್​​ಬಾಸ್ ಕನ್ನಡ ಸೀಸನ್ 5 ಸಾಕಷ್ಟು ಗ್ಲಾಮರ್, ಸಂಗೀತ ಇದ್ದ ಶೋ. ಈ ಸೀಸನ್​​ನಲ್ಲಿ ಕೆಲ ಜಗಳಗಳು ಸಹ ಆದವು. ಈ ಸೀಸನ್​​ನಲ್ಲಿ ಚಂದನ್ ಗೌಡ ವಿನ್ನರ್ ಆದರೆ ಸಾಮಾನ್ಯನಾಗಿ ಒಳಗೆ ಹೋಗಿದ್ದ ದಿವಾಕರ್ ರನ್ನರ್ ಅಪ್ ಆದರು. ಶೋನಲ್ಲಿ ನಿವೇದಿತಾ ಸಹ ಭಾಗಿ ಆಗಿದ್ದರು.

5 / 12
ಬಿಗ್​​ಬಾಸ್ ಕನ್ನಡ ಸೀಸನ್ 6, ಸುದೀಪ್ ಅವರು ಹೇಳುವಂತೆ ಆ ಸೀಸನ್ ಅವರಿಗೆ ತುಸು ಕಷ್ಟಕರವಾದ ಶೋ ಆಗಿತ್ತು. ಆದರೆ ಆ ಶೋನಲ್ಲಿ ಸಾಮಾನ್ಯನಾಗಿ ಎಂಟ್ರಿ ಕೊಟ್ಟಿದ್ದ ಕೃಷಿಕ ಎಂದೇ ಪರಿಚಯಿಸಿಕೊಂಡಿದ್ದ ಶಶಿ ವಿನ್ನರ್ ಆಗಿದ್ದರು.

6 / 12
ಬಿಗ್​​ಬಾಸ್ ಕನ್ನಡ ಸೀಸನ್ 7 ಸುದೀಪ್ ಅವರ ಬಹಳ ಮೆಚ್ಚಿನ ಸೀಸನ್ ಅಂತೆ. ಅವರೇ ಹೇಳಿಕೊಂಡಿರುವಂತೆ ಏಳನೇ ಸೀಸನ್ ಅವರು ಖುಷಿ-ಖುಷಿಯಾಗಿ ನಡೆಸಿಕೊಟ್ಟರಂತೆ. ಈ ಸೀಸನ್​​ನಲ್ಲಿ ಶೈನ್ ಶೆಟ್ಟಿ, ವಾಸುಕಿ ವೈಭವ್, ದೀಪಿಕಾ ಇನ್ನೂ ಹಲವರು ಇದ್ದರು. ವಾಸುಕಿ ಈ ಸೀಸನ್​​ನಲ್ಲಿ ಸಾಕಷ್ಟು ಗಮನ ಸೆಳೆದಿದ್ದರು. ಆದರೆ ಕೊನೆಗೆ ಗೆದ್ದಿದ್ದು ಶೈನ್ ಶೆಟ್ಟಿ.

7 / 12
ಬಿಗ್​​ಬಾಸ್ ಕನ್ನಡ 8 ಸಾಕಷ್ಟು ತಮಾಷೆ, ಜಗಳ, ಮನೊರಂಜನೆಯಿಂದ ಕೂಡಿದ್ದ ಶೋ ಆಗಿತ್ತು. ಈ ಶೋನಲ್ಲಿ ಮೊದಲಿಗೆ ಹಾಸ್ಯನಟನೊಬ್ಬ ವಿಜೇತರಾಗಿದ್ದು ವಿಶೇಷ. ಈ ಶೋನಲ್ಲಿ ಭಾಗವಹಿಸಿದ್ದ ಮಂಜು ಪಾವಗಡ ಶೋ ಗೆದ್ದರು. ಕೋವಿಡ್ ಕಾರಣಕ್ಕೆ ಈ ಶೋ ಅನ್ನು ಎರಡು ಬಾರಿ ಮಾಡಲಾಗಿದ್ದು ಸಹ ಒಂದು ವಿಶೇಷ.

8 / 12
ಬಿಗ್​​ಬಾಸ್ ಕನ್ನಡ ಸೀಸನ್ 9 ಸಾಕಷ್ಟು ವಿಶೇಷವಾದ ಶೋ. ಒಟಿಟಿಯಲ್ಲಿ ಫಿನಾಲೆ ತಲುಪಿದ ಕೆಲವರನ್ನು ಟಿವಿ ಶೋಗೆ ಕರೆತರಲಾಗಿತ್ತು. ವಿಶೇಷವೆಂದರೆ ಒಟಿಟಿಯಲ್ಲಿ ಗೆದ್ದವರೇ ಮತ್ತೆ ಟಿವಿ ಶೋನಲ್ಲೂ ಫಿನಾಲೆಗೆ ಬಂದರು. ಈ ಶೋನಲ್ಲಿ ರೂಪೇಶ್ ಶೆಟ್ಟಿ ವಿಜೇತರಾದರೆ ರಾಕೇಶ್ ಅಡಿಗ ರನ್ನರ್ ಅಪ್ ಆದರು. ಸಾಕಷ್ಟು ಮನರಂಜನೆ ಇದ್ದ ಶೋ ಇದಾಗಿತ್ತು.

9 / 12
ಬಿಗ್​​ಬಾಸ್ ಕನ್ನಡ 10 ಭರ್ಜರಿ ಪೈಪೋಟಿ, ಜಗಳ ಇದ್ದ ಶೋ ಇದಾಗಿತ್ತು. ಸಂಗೀತ ಮತ್ತು ವಿನಯ್ ನಡುವಿನ ವೈರತ್ವ ರಾಜ್ಯದಾದ್ಯಂತ ಚರ್ಚೆ ಆಗಿತ್ತು. ಈ ಶೋ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಶೋನಲ್ಲಿ ಫಿನಾಲೆ ತಲುಪಿದ್ದು ಡ್ರೋನ್ ಪ್ರತಾಪ್ ಮತ್ತು ಕಾರ್ತಿಕ್. ಅಂತಿಮವಾಗಿ ಗೆದ್ದಿದ್ದು ಕಾರ್ತಿಕ್.

10 / 12
ಬಿಗ್​​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದರು ಸಹ. ಕೆಲವರು ಎವಿಕ್ಟ್ ಸಹ ಆದರು. ಎರಡು ವಾರದ ಬಳಿಕ ಹನುಮಂತನನ್ನು ಶೋಗೆ ಕರೆತರಲಾಯ್ತು. ಜನಪದ ಕಲಾವಿದ ಹನುಮಂತ ಶೋನ ದಿಕ್ಕನ್ನೆ ಬದಲಿಸಿದ್ದು ಮಾತ್ರವಲ್ಲ ವಿನ್ನರ್ ಆಗಿ ಸಹ ಹೊರಹೊಮ್ಮಿದರು.

11 / 12
ಬಿಗ್​​ಬಾಸ್ ಕನ್ನಡ ಸೀಸನ್ 12 ಸಂಪೂರ್ಣ ಗಿಲ್ಲಿ ಮಯ ಆಗಿತ್ತು. ಗಿಲ್ಲಿ ಮಾಡಿದ್ದೆಲ್ಲ ವೈರಲ್ ಆಯ್ತು. ಗಿಲ್ಲಿ ಮತ್ತು ಕಾವ್ಯಾ ಜೋಡಿಗೆ ದೊಡ್ಡ ಅಭಿಮಾನಿ ವರ್ಗವೇ ಹೊರಗೆ ಹುಟ್ಟಿಕೊಂಡಿತ್ತು. ಬಹುತೇಕ ಎಲ್ಲರ ನಿರೀಕ್ಷೆಯಂತೆ ಗಿಲ್ಲಿ ಈ ಶೋನ ವಿಜೇತರಾದರು. ಈಗ ಹೀರೋ ಸಹ ಆಗಿದ್ದಾರೆ.

12 / 12
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ರಾಮನಗರದಲ್ಲಿ ಕುಡಿಯುವ ನೀರಿನ ಬಿಲ್ ಶಾಕ್
ರಾಮನಗರದಲ್ಲಿ ಕುಡಿಯುವ ನೀರಿನ ಬಿಲ್ ಶಾಕ್
ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ವಿನೋದ್ ರಾಜ್ ಬೆಂಬಲ; ದಿನಸಿ ವಿತರಣೆ

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ನಟ ಅವಿನಾಶ್ ಬೆಂಬಲ

ಮತ್ತಿಬ್ಬರು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ:ಈವರೆಗೆ 20 ಮಂದಿ ಅಸ್ವಸ್ಥ

ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ

ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು

ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ

ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ

ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ

ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ