ಶುರುವಾಯ್ತು ಮರಾಠಿ ಬಿಗ್​ಬಾಸ್ 5, ಸುದೀಪ್ ಆಪ್ತ ನಿರೂಪಕ

Bigg Boss Marathi: ಮರಾಠಿ ಬಿಗ್​ಬಾಸ್ ಸೀಸನ್ 5 ಪ್ರಾರಂಭವಾಗುತ್ತಿದೆ. ಕಿಚ್ಚ ಸುದೀಪ್​ರ ಆಪ್ತ ಗೆಳೆಯ ರಿತೇಶ್ ಈ ಬಾರಿ ಶೋ ನಿರೂಪಣೆ ಮಾಡಲಿದ್ದಾರೆ. ಬಿಗ್​ಬಾಸ್ ಮರಾಠಿ ಶೋಗೆ ಈ ಬಾರಿ ತುಸು ಗ್ಲಾಮರ್ ತುಂಬಲಾಗಿದೆ.

ಶುರುವಾಯ್ತು ಮರಾಠಿ ಬಿಗ್​ಬಾಸ್ 5, ಸುದೀಪ್ ಆಪ್ತ ನಿರೂಪಕ
Follow us
ಮಂಜುನಾಥ ಸಿ.
|

Updated on: Jul 28, 2024 | 7:42 AM

ಮತ್ತೆ ಬಿಗ್​ಬಾಸ್​ ಋತು ಪ್ರಾರಂಭವಾಗುತ್ತಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್​ಬಾಸ್ ಒಟಿಟಿ ಪ್ರಾರಂಭವಾಗಿದೆ. ಇನ್ನು ಕೆಲವು ಭಾಷೆಗಳಲ್ಲಿ ಬಿಗ್​ಬಾಸ್ ಟಿವಿ ಸೀಸನ್ ಪ್ರಾರಂಭವಾಗುತ್ತಿದೆ. ತೆಲುಗು ಬಿಗ್​ಬಾಸ್ ಇನ್ನೇನು ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಹಿಂದಿ ಬಿಗ್​ಬಾಸ್​ಗೆ ಸಿದ್ಧತೆ ನಡೆಯುತ್ತಿದೆ. ಕನ್ನಡದಲ್ಲಿಯೂ ಸಿದ್ಧತೆ ಆರಂಭವಾಗಿದೆ. ಇದರ ನಡುವೆ ಮರಾಠಿ ಬಿಗ್​ಬಾಸ್​ ಇಂದಿನಿಂದ ಆರಂಭವಾಗುತ್ತಿದೆ.

ಮರಾಠಿ ಬಿಗ್​ಬಾಸ್ ಸೀಸನ್ 5 ಇಂದು (ಜುಲೈ 28) ಆರಂಭವಾಗುತ್ತಿದ್ದು, ಕಾರ್ಯಕ್ರಮದ ಪ್ರೋಮೋಗಳು, ಸ್ಪರ್ಧಿಗಳ ಪಟ್ಟಿ ಈಗಾಗಲೇ ವೈರಲ್ ಆಗುತ್ತಿದೆ. ವಿಶೇಷವೆಂದರೆ ಮರಾಠಿ ಬಿಗ್​ಬಾಸ್ ಆರಂಭವಾದಾಗಿನಿಂದಲೂ ಇದೇ ಮೊದಲ ಬಾರಿಗೆ ಶೋನ ನಿರೂಪಕರು ಬದಲಾಗಿದ್ದು, ಕಿಚ್ಚ ಸುದೀಪ್​ರ ಆಪ್ತ ಗೆಳೆಯ ರಿತೇಶ್ ದೇಶ್​ಮುಖ್​ ಈ ಬಾರಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಹಿಂದಿ, ಕನ್ನಡ, ತೆಲುಗು, ತಮಿಳಿಗೆ ಹೋಲಿಸಿದರೆ ಮರಾಠಿ ಬಿಗ್​ಬಾಸ್ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಆದರೆ ಕಳೆದೆರಡು ಸೀಸನ್​ಗಳಿಂದ ತುಸು ಚೇತರಿಕೆ ಕಂಡಿದೆ. ಅದೇ ಕಾರಣಕ್ಕೆ ಈ ಬಾರಿ ನಿರೂಪಕರನ್ನು ಬದಲಾಯಿಸಿದ್ದು, ಶೋಗೆ ಇನ್ನಷ್ಟು ಮಾದಕತೆ, ಗ್ಲಾಮರ್ ತುಂಬುವ ಪ್ರಯತ್ನ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ರಿತೇಶ್ ದೇಶ್​ಮುಖ್ ಅವರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಗ್ಲಾಮರಸ್ ಬ್ಯೂಟಿ ನಿಕ್ಕಿ ತಾಂಬೋಲಿ ಸೇರಿದಂತೆ ಇನ್ನೂ ಕೆಲವು ಯುವ ನಟ-ನಟಿಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಮರಾಠಿ ಬಿಗ್​ಬಾಸ್ ಶೋ ಅನ್ನು ಹಿರಿಯ ನಟ, ನಿರ್ದೇಶಕ ಮಹೇಶ್ ಮಾಂಜ್ರೆಕರ್ ನಿರೂಪಣೆ ಮಾಡುತ್ತಿದ್ದರು.

ಇದನ್ನೂ ಓದಿ:ಬಿಗ್ ಬಾಸ್ ಮನೆಯ ಸೆ* ವಿಡಿಯೋ ವೈರಲ್; ತಪ್ಪು ಮಾಡಿದ ಪತಿಯನ್ನು ವಹಿಸಿಕೊಂಡು ಬಂದ ಪತ್ನಿ

ರಿತೇಶ್ ದೇಶ್​ಮುಖ್ ಮತ್ತು ಕಿಚ್ಚ ಸುದೀಪ್ ಅತ್ಯಾಪ್ತ ಗೆಳೆಯರು. ಸುದೀಪ್ ನಟಿಸಿದ ಮೊದಲ ಹಿಂದಿ ಸಿನಿಮಾ ‘ರಣ್’ನಲ್ಲಿ ರಿತೇಶ್ ದೇಶ್​ಮುಖ್ ಸಹ ನಾಯಕನಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸಿದ್ದರು. ಆ ಸಿನಿಮಾದಿಂದ ಈವರೆಗೆ ರಿತೇಶ್ ಹಾಗೂ ಸುದೀಪ್ ಆಪ್ತ ಗೆಳೆಯರು. ರಿತೇಶ್​ರ ಪತ್ನಿ ಜೆನಿಲಿಯಾ ದೇಶ್​ಮುಖ್ ಸಹ ಸುದೀಪ್​ರ ಆಪ್ತ ಗೆಳತಿ. ಇದೀಗ ಬಿಡುಗಡೆ ಆಗಿರುವ ಮರಾಠಿ ಪ್ರೋಮೋನಲ್ಲಿ ಸಹ ರಿತೇಶ್ ದೇಶ್​ಮುಖ್, ಸುದೀಪ್​ರ ಸ್ಟೈಲ್ ಅನ್ನೇ ಕಾಪಿ ಮಾಡಿದ್ದಾರೆ.

ಬಿಗ್​ಬಾಸ್ ಒಟಿಟಿ ಪ್ರಸ್ತುತ ಚಾಲ್ತಿಯಲ್ಲಿದ್ದು, ನಟ ಅನಿಲ್ ಕಪೂರ್ ಆ ಶೋ ನಿರೂಪಣೆ ಮಾಡುತ್ತಿದ್ದಾರೆ. ತೆಲುಗು ಬಿಗ್​ಬಾಸ್​ಗೆ ಸಿದ್ಧತೆ ಆರಂಭವಾಗಿದ್ದು ಕೆಲವು ಸ್ಪರ್ಧಿಗಳು ಖಾತ್ರಿ ಆಗಿದ್ದಾರೆ. ಹೋಟೆಲ್ ಆಂಟಿ, ಅಮೃತಾ ಪ್ರಣಯ್ ಸೇರಿದಂತೆ ಕೆಲವು ಜನಪ್ರಿಯ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ