
ಚೈತ್ರಾ ಕುಂದಾಪುರ (Chaitra Kundapura) ಅವರು ತಂದೆಯಿಂದಲೇ ಮೋಸದ ಆರೋಪ ಹೊತ್ತಿದ್ದಾರೆ. ಮಗಳನ್ನು ವಂಚಕಿ ಎಂದು ಕರೆದಿರುವ ತಂದೆ ಬಾಲಕೃಷ್ಣ ನಾಯ್ಕ್ ಅವರು, ಮಗಳು ತನ್ನನ್ನು ವಿವಾಹಕ್ಕೂ ಕರೆದಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. ತಂದೆ ಆರೋಪಕ್ಕೆ ಚೈತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಚೈತ್ರಾ ತಾಯಿ ಕೂಡ ಮಗಳ ಪರ ಬ್ಯಾಟ್ ಬೀಸಿದ್ದಾರೆ. ಈ ಮಧ್ಯೆ ಅಭಿಮಾನಿಗಳು ಚೈತ್ರಾಗೆ ಮೆಸೇಜ್ ಮಾಡಿ ಬೆಂಬಲ ನೀಡುತ್ತಿದ್ದಾರೆ. ಈ ಸ್ಕ್ರಿನ್ಶಾಟ್ಗಳನ್ನು ಚೈತ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚೈತ್ರಾ ಕುಂದಾಪುರ ಅವರು ಈ ಮೊದಲು ವಂಚನೆ ಆರೋಪ ಹೊತ್ತು ಜೈಲು ಸೇರಿದ್ದರು. ಇದಾಗಿ ಸರಿಯಾದ ಒಂದು ವರ್ಷಗಳ ಬಳಿಕ ಅವರಿಗೆ ಬಿಗ್ ಬಾಸ್ ಆಫರ್ ಬಂತು. ಈ ಆಫರ್ನ ಒಪ್ಪಿ ಅವರು ಸ್ಪರ್ಧಿಸಿದರು. ಅಲ್ಲಿಂದ ಚೈತ್ರಾ ಇಮೇಜ್ ಬದಲಾಯಿತು. ಅವರ ಬಗ್ಗೆ ಜನರಿಗೆ ಪಾಸಿಟಿವ್ ಅಭಿಪ್ರಾಯ ಬಂದಿದೆ. ಆದರೆ, ತಂದೆ ಮಾತ್ರ ಮಗಳನ್ನು ನಂಬುತ್ತಿಲ್ಲ. ಅವರು ಮೋಸಗಾರ್ತಿ ಎನ್ನುವ ಆರೋಪ ಹೊರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚೈತ್ರಾ, ತಂದೆ ಕುಡುಕ ಎಂದು ಕರೆದಿದ್ದಾರೆ. ಹೆತ್ತು ಮಕ್ಕಳನ್ನು ಸಾಕಗದೇ ಕುಡಿದುಕೊಂಡು, ಕ್ವಾಟರ್ ಕೊಡಿಸಿದವರ ಪರ ಮಾತನಾಡಿಕೊಂಡಿರುತ್ತಾರೆ ಎಂದು ಚೈತ್ರಾ ತಿರುಗೇಟು ನೀಡಿದ್ದಾರೆ. ಕುಡಿಯೋದು ನಿಜವೇ ಆದಲ್ಲಿ, ವೈದ್ಯಕೀಯ ಪರೀಕ್ಷೆ ನಡೆಯಲಿ ಎಂದು ಬಾಲಕೃಷ್ಣ ಕೂಡ ಸವಾಲು ಹಾಕಿದ್ದಾರೆ. ಈ ರೀತಿ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಈಗ ಚೈತ್ರಾ ಅವರನ್ನು ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ.
ಇದನ್ನೂ ಓದಿ: ‘ಎರಡು ಕ್ವಾಟರ್ ಕೊಡಿಸಿದರೆ ಯಾರು ಬೇಕಾದರೂ ಒಳ್ಳೆಯವನು ಎನ್ನುತ್ತಾನೆ’; ತಂದೆ ಆರೋಪಕ್ಕೆ ಚೈತ್ರಾ ತಿರುಗೇಟು
ಚೈತ್ರಾ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಒಂದಷ್ಟು ಸಂದೇಶಗಳು ಬಂದಿವೆ. ಅದರ ಸ್ಕ್ರಿನ್ಶಾಟ್ನ ಚೈತ್ರಾ ಹಂಚಿಕೊಂಡಿದ್ದಾರೆ. ‘ಅಕ್ಕ ನಾನು ಕುಂದಾಪುರದವಳೇ. ನೀವು ಹೇಗೆ, ನಿಮ್ಮನೆಯವರು ಹೇಗೆ ಎಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ತಂದೆ ಹೇಗೆ ಎಂದು ನಿಮ್ಮ ಊರಿನವರಿಗೂ ಗೊತ್ತಿದೆ. ಸೋಶಿಯಲ್ ಮೀಡಿಯಾದವರಿಗೆ ನಿಮ್ಮ ತಂದೆ ಬಗ್ಗೆ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಾವಿರ ಮಾತನಾಡುತ್ತಾರೆ. ಎಲ್ಲೋ ಕುಳಿತುಕೊಂಡು ಏನೋ ಬರೆದು ಹಾಕ್ತಾರೆ. ಹಾಗಂತ ನೀವು ಸರಿ ಇಲ್ಲ ಅಂತ ಅರ್ಥ ಅಲ್ಲ. ಇಗಷ್ಟೇ ಮದುವೆ ಆಗಿದ್ದೀರಾ, ಖುಷಿಯಿಂದ ಇರಿ. ನಿಮ್ಮ ತಂದೆ ಕುಡುಕ ಅನ್ನೋದು ಸೋಶಿಯಲ್ ಮೀಡಿಯಾದವರಿಗೆ ಗೊತ್ತಿಲ್ಲ. ಆದರೆ, ನಿಮ್ಮ ಊರಿನವರಿಗೆ ಗೊತ್ತು’ ಎಂದು ಅಭಿಮಾನಿಯೊಬ್ಬರು ಚೈತ್ರಾಗೆ ಸಂದೇಶ ಕಳುಹಿಸಿದ್ದಾರೆ. ಈ ರೀತಿಯ ಮೆಸೇಜ್ನ ಚೈತ್ರಾ ಶೇರ್ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.