ಇನ್ಮುಂದೆ ಪ್ರಸಾರಕ್ಕೂ ಮುನ್ನ ಬಿಗ್ ಬಾಸ್ಗೆ ಸೆನ್ಸಾರ್ ಮಾಡೋದು ಕಡ್ಡಾಯ? ಹೈಕೋರ್ಟ್ ಮಹತ್ವದ ಆದೇಶ
‘ಬಿಗ್ ಬಾಸ್’ ಸ್ಪರ್ಧಿಗಳು ಕೆಲವೊಮ್ಮೆ ಎಲ್ಲೆ ಮೀರುವುದುಂಟು. ಇದನ್ನು ಪ್ರಸಾರ ಮಾಡುವ ಬಗ್ಗೆ ಅನೇಕರ ಆಕ್ಷೇಪ ಇದೆ. ಹೀಗಾಗಿ, ‘ಬಿಗ್ ಬಾಸ್ ತೆಲುಗು ಸೀಸನ್ 7’ ಆರಂಭಕ್ಕೆ ತಡೆನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಕಿರುರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ಗೆ ವಿವಾದಗಳು ಹೊಸದಲ್ಲ. ಈ ಶೋ ಆರಂಭ ಆಗುತ್ತದೆ ಎಂದಾಗ ಸಾಕಷ್ಟು ಸುದ್ದಿ ಆಗುತ್ತದೆ. ಈಗ ‘ತೆಲುಗು ಬಿಗ್ ಬಾಸ್ ಸೀಸನ್ 7’ (Bigg Boss) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಹೀಗಿರುವಾಗಲೇ ಈ ರಿಯಾಲಿಟಿ ಶೋ ನಿರೂಪಕ ಅಕ್ಕಿನೇನಿ ನಾಗಾರ್ಜುನ ಹಾಗೂ ಈ ಶೋ ಪ್ರಸಾರ ಮಾಡುವ ಮಾ ಟಿವಿಗೆ ಆಂಧ್ರಪ್ರದೇಶ ಹೈಕೋರ್ಟ್ (High Court) ನೋಟಿಸ್ ಜಾರಿ ಮಾಡಿದೆ. ಇದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
‘ಬಿಗ್ ಬಾಸ್’ ಸ್ಪರ್ಧಿಗಳು ಕೆಲವೊಮ್ಮೆ ಎಲ್ಲೆ ಮೀರುವುದುಂಟು. ಇದನ್ನು ಪ್ರಸಾರ ಮಾಡುವ ಬಗ್ಗೆ ಅನೇಕರ ಆಕ್ಷೇಪ ಇದೆ. ಹೀಗಾಗಿ, ‘ಬಿಗ್ ಬಾಸ್ ತೆಲುಗು ಸೀಸನ್ 7’ ಆರಂಭಕ್ಕೆ ತಡೆನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ಮಾಡಿರುವ ಹೈಕೋರ್ಟ್, ಈ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಮಾ ಟಿವಿ ಹಾಗೂ ನಾಗಾರ್ಜುನಗೆ ನಿರ್ದೇಶಿಸಿದೆ. ಈ ಕುರಿತ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಗಿದೆ.
ಅಶ್ಲೀಲತೆಯನ್ನು ಉತ್ತೇಜಿಸುವ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ ಎಂದು ಆರೋಪಿಸಿ ತೆಲುಗು ಯುವಶಕ್ತಿ ಅಧ್ಯಕ್ಷ, ನಿರ್ಮಾಪಕ ಕೇತಿರೆಡ್ಡಿ, ಜಗದೀಶ್ವರ ರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿದಾರರ ಪರವಾಗಿ ವಕೀಲ ಗುಂಡಾಲ ಶಿವಪ್ರಸಾದ್ ರೆಡ್ಡಿ ವಾದ ಮಂಡಿಸಿದರು. ‘ಸೆನ್ಸಾರ್ ಇಲ್ಲದೇ ಈ ಕಾರ್ಯಕ್ರಮ ಪ್ರಸಾರವಾಗುತ್ತಿವೆ. ಇಂತಹ ಕಾರ್ಯಕ್ರಮಗಳನ್ನು ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಪ್ರಸಾರ ಮಾಡಬೇಕು’ ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಮಾ ಟಿವಿ ಪರ ವಕೀಲರು, ‘ಬಿಗ್ ಬಾಸ್ ಶೋ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಮಾಡಬೇಕು ಎಂಬುದಿಲ್ಲ. ಪ್ರಸಾರವಾದ ನಂತರ ಆಕ್ಷೇಪವಿದ್ದಲ್ಲಿ ದೂರು ದಾಖಲಿಸಬಹುದು. ಕೇಬಲ್ ಟೆಲಿವಿಷನ್ ನೆಟ್ ವರ್ಕ್ ಕಾಯ್ದೆ ಪ್ರಕಾರ ದೂರುಗಳನ್ನು ಸಲ್ಲಿಸಲು ಅವಕಾಶ ಇದೆ’ ಎಂದರು.
ಇದನ್ನೂ ಓದಿ: ಹಲವು ತಿಂಗಳ ಬಳಿಕ ಒಂದಾದ ಬಿಗ್ ಬಾಸ್ ಗ್ಯಾಂಗ್; ರಾಕೇಶ್ ಮಾಡಿದ ಅವಾಂತರಕ್ಕೆ ಬೇಸರಗೊಂಡ ದಿವ್ಯಾ ಉರುಡುಗ
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ‘ಟಿವಿಯ ಕಾರ್ಯಕ್ರಮ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಇಲ್ಲ ಎಂದರೆ ಹೇಗೆ? ಈ ವಿಚಾರದಲ್ಲಿ ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪ್ರಸಾರವಾದ ನಂತರ ಬಂದಿರುವ ದೂರುಗಳ ಬಗ್ಗೆ ಕ್ರಮ ಕೈಗೊಂಡು ಏನು ಪ್ರಯೋಜನ? ಹಾಗೆ ಮಾಡೋದು ಪೋಸ್ಟ್ ಮಾರ್ಟಂ. ಪ್ರತಿ ಚಾನೆಲ್ನಲ್ಲಿ ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ನಿಗಾ ಇಡಬೇಕಲ್ಲವೇ? ಬಿಗ್ ಬಾಸ್ ಶೋ ಸೆನ್ಸಾರ್ ಮಾಡುವ ವಿಚಾರದಲ್ಲಿ ಕೇಂದ್ರಕ್ಕೆ ಸೂಕ್ತ ಸೂಚನೆ ನೀಡುವ ವಿಚಾರವನ್ನು ಪರಿಗಣಿಸುವುದಾಗಿ’ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ