ಹಲವು ತಿಂಗಳ ಬಳಿಕ ಒಂದಾದ ಬಿಗ್ ಬಾಸ್ ಗ್ಯಾಂಗ್; ರಾಕೇಶ್ ಮಾಡಿದ ಅವಾಂತರಕ್ಕೆ ಬೇಸರಗೊಂಡ ದಿವ್ಯಾ ಉರುಡುಗ
ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ದಿವ್ಯಾ ಪ್ಯಾಂಟ್ಗೆ ಏನೋ ಕಲೆ ಇದೆ. ಅದೇನು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಬಹುದು ಎನ್ನುವ ಕಾರಣಕ್ಕೆ ಕ್ಯಾಪ್ಶನ್ನಲ್ಲಿ ಈ ವಿಚಾರವನ್ನು ದಿವ್ಯಾ ಮೊದಲೇ ತಿಳಿಸಿದ್ದಾರೆ.
‘ಕನ್ನಡ ಬಿಗ್ ಬಾಸ್ ಸೀಸನ್ 9’ರಲ್ಲಿ ಎರಡು ಗ್ಯಾಂಗ್ ಇತ್ತು. ಇದು ದೊಡ್ಮನೆಯಲ್ಲೂ ಅನೇಕ ಬಾರಿ ಚರ್ಚೆಗೆ ಬಂದಿತ್ತು. ರೂಪೇಶ್ ಶೆಟ್ಟಿ ಪರ ಒಂದಷ್ಟು ಮಂದಿ ಇದ್ದರೆ, ರಾಕೇಶ್ ಅಡಿಗ ಪರ ಒಂದಷ್ಟು ಮಂದಿ ನಿಂತಿದ್ದರು. ಬಿಗ್ ಬಾಸ್ ಹೊರಗೂ ಇದು ಮುಂದುವರಿದಿದೆ. ಇತ್ತೀಚೆಗೆ ರೂಪೇಶ್ ಶೆಟ್ಟಿ (Roopesh Shetty), ಸಾನ್ಯಾ ಐಯ್ಯರ್ ಮೊದಲಾದವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಸರ್ಕಸ್’ ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಅವರು ತೆರಳಿದ್ದರು. ಅದೇ ರೀತಿ ಬಿಗ್ ಬಾಸ್ನ ರಾಕೇಶ್ ಗ್ಯಾಂಗ್ ಒಂದೆಡೆ ಸೇರಿದೆ. ಬಹಳ ಸಮಯದಿಂದ ಪೆಂಡಿಂಗ್ ಉಳಿದಿದ್ದ ಅನುಪಮಾ ಗೌಡ (Anupama Gowda) ಬರ್ತ್ಡೇ ಆಚರಿಸಲಾಗಿದೆ. ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ರಾಕೇಶ್ ಅಡಿಗ, ದಿವ್ಯಾ ಉರುಡುಗ, ಅನುಪಮಾ ಗೌಡ, ನೇಹಾ ಗೌಡ, ಅಮೂಲ್ಯಾ ಗೌಡ ಒಂದೆಡೆ ಸೇರಿದ್ದಾರೆ. ಈ ವೇಳೆ ಅನುಪಮಾ ಗೌಡ ಅವರ ಕೇಕ್ ಕತ್ತರಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳನ್ನು ದಿವ್ಯಾ ಉರುಡುಗ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ರಾಕೇಶ್ ಅಡಿಗ ಮಾಡಿದ ಎಡವಟ್ಟಿನ ಬಗ್ಗೆ ದಿವ್ಯಾ ಹೇಳಿಕೊಂಡಿದ್ದಾರೆ.
ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ದಿವ್ಯಾ ಪ್ಯಾಂಟ್ಗೆ ಏನೋ ಕಲೆ ಇದೆ. ಅದೇನು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಬಹುದು ಎನ್ನುವ ಕಾರಣಕ್ಕೆ ಕ್ಯಾಪ್ಶನ್ನಲ್ಲಿ ಈ ವಿಚಾರವನ್ನು ದಿವ್ಯಾ ಮೊದಲೇ ತಿಳಿಸಿದ್ದಾರೆ. ‘ರಾಕೇಶ್ ಅಡಿಗ ಒಂದು ಬೌಲ್ ಸೂಪ್ನ ಕಾಲಿನ ಮೇಲೆ ಹಾಗೂ ಶೂ ಮೇಲೆ ಚೆಲ್ಲಿದ್ದಾನೆ’ ಎಂದು ದಿವ್ಯಾ ಬರೆದುಕೊಂಡಿದ್ದರು.
View this post on Instagram
ಇದನ್ನೂ ಓದಿ: ‘ಎಂದೆಂದಿಗೂ ಆರ್ಸಿಬಿ’ ಎಂದ ದಿವ್ಯಾ ಉರುಡುಗ; ಕನ್ನಡಿಗರಿಂದ ಸಿಕ್ತು ಭರಪೂರ ಪ್ರೀತಿ
ಬಿಗ್ ಬಾಸ್ ಮನೆಯಲ್ಲಿ ಆರಂಭ ಆಗುವ ಸ್ನೇಹವನ್ನು ಮನೆಯ ಹೊರಗೂ ಮುಂದುವರಿಸಿಕೊಂಡ ಹೋದ ಅನೇಕರಿದ್ದಾರೆ. ಈ ಸಾಲಿಗೆ ಈ ಗ್ಯಾಂಗ್ ಕೂಡ ಸೇರ್ಪಡೆ ಆಗುತ್ತದೆ. ದಿವ್ಯಾ ಉರುಡುಗ ಅವರು ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಜೊತೆಗೂ ಆಪ್ತವಾಗಿದ್ದರು. ಈ ಕಾರಣಕ್ಕೆ ಅವರು ರೂಪೇಶ್ ಶೆಟ್ಟಿ ಅವರ ‘ಸರ್ಕಸ್’ ಚಿತ್ರದ ಪ್ರೀಮಿಯರ್ ಶೋಗೆ ಅವರೂ ತೆರಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ