AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಾಂಗ್ ಹಾಡಿಸೋಕೆ ಬಂದ್ರು ಅಂದ್ಕೊಂಡಿದ್ದೆ’; ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಬಗ್ಗೆ ರಘು ದೀಕ್ಷಿತ್ ಮಾತು

ಡ್ಯಾಡಿ ಹೆಸರಿನ ಡಾನ್​ ಪಾತ್ರದಲ್ಲಿ ರಘು ದೀಕ್ಷಿತ್​ ನಟಿಸುತ್ತಿದ್ದಾರೆ. ಶಾನ್ವಿ ಕೂಡ ಈ ಚಿತ್ರದಲ್ಲಿ ಗ್ಯಾಂಗ್​ಸ್ಟರ್​ ಪಾತ್ರ ಮಾಡುತ್ತಿದ್ದಾರೆ. ಶಾನ್ವಿ ಶ್ರೀವಾಸ್ತವ ಮತ್ತು ರಘು ದೀಕ್ಷಿತ್ ಅಲ್ಲದೆ ಈ ಚಿತ್ರದಲ್ಲಿ ಇನ್ನೂ 4 ಪಾತ್ರಗಳು ಬರಲಿವೆ.

‘ಸಾಂಗ್ ಹಾಡಿಸೋಕೆ ಬಂದ್ರು ಅಂದ್ಕೊಂಡಿದ್ದೆ’; ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಬಗ್ಗೆ ರಘು ದೀಕ್ಷಿತ್ ಮಾತು
ರಘು ದೀಕ್ಷಿತ್
ರಾಜೇಶ್ ದುಗ್ಗುಮನೆ
|

Updated on: Jul 04, 2023 | 11:18 AM

Share

ಇಷ್ಟು ದಿನಗಳ ಕಾಲ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ರಘು ದೀಕ್ಷಿತ್​ (Raghu Dixit) ಅವರನ್ನು ಜನರು ಗುರುತಿಸುತ್ತಿದ್ದರು. ಈಗ ಅವರು ಡಾನ್ ಅವತಾರ ತಾಳಿದ್ದಾರೆ. ಗಣೇಶ್​ ಪರಶುರಾಮ್​ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಬ್ಯಾಂಗ್​’ನಲ್ಲಿ ರಘು ದೀಕ್ಷಿತ್​ಗೆ ಡಾನ್​ ಪಾತ್ರ ನೀಡಲಾಗಿದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ (Shanvi Srivastava) ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ರಘು ದೀಕ್ಷಿತ್ ಅವರು ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಡ್ಯಾಡಿ ಹೆಸರಿನ ಡಾನ್​ ಪಾತ್ರದಲ್ಲಿ ರಘು ದೀಕ್ಷಿತ್​ ನಟಿಸುತ್ತಿದ್ದಾರೆ. ಶಾನ್ವಿ ಕೂಡ ಈ ಚಿತ್ರದಲ್ಲಿ ಗ್ಯಾಂಗ್​ಸ್ಟರ್​ ಪಾತ್ರ ಮಾಡುತ್ತಿದ್ದಾರೆ. ‘ಎಂದಿಗೂ ನನಗೆ ನಟನಾಗುವ ಹಂಬಲವನ್ನು ಇರಲಿಲ್ಲ. ಆದರೆ, ಅಂತಹ ಅವಕಾಶ ಸಿಕ್ಕಿದೆ ಎಂಬ ಬಗ್ಗೆ ನನಗೆ ಖುಷಿ ಇದೆ. ಮೊದಲ ಚಿತ್ರದಲ್ಲಿ ನಾನು ಗ್ಯಾಂಗ್​ಸ್ಟರ್ ಪಾತ್ರ ಮಾಡುತ್ತಿದ್ದೇನೆ. ನಾನು ತುಂಬಾ ಅದೃಷ್ಟಶಾಲಿ’ ಎಂದು ರಘು ದೀಕ್ಷಿತ್ ಅವರು ಹಿಂದೂಸ್ತಾನ್ ಟೈಮ್ಸ್​ ಇಂಗ್ಲಿಷ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ನಾನು ಈ ಚಿತ್ರದ ನಿರ್ದೇಶಕ ಗಣೇಶ್ ಪರಶುರಾಮ್ ಅವರನ್ನು ಒಮ್ಮೆ ಭೇಟಿ ಮಾಡಿದೆ. ಅವರು ಸಿನಿಮಾ ಬಗ್ಗೆ ಮಾತನಾಡುವುದಿದೆ ಎಂದಿದ್ದರು. ನನ್ನ ಬಳಿ ಸಂಗೀತ ಸಂಯೋಜನೆ ಮಾಡಿಸಬಹುದು, ಇಲ್ಲವೇ ಹಾಡು ಹಾಡಿಸಬಹುದು ಎಂದುಕೊಂಡೆ. ಆದರೆ, ಅವರು ನನ್ನ ಬಳಿ ನಟಿಸುವಂತೆ ಕೋರಿದರು. ಆದರೆ, ನಾನು ನಿರಕಾರಿಸಿದೆ. ಕೆಲ ತಿಂಗಳು ಬಿಟ್ಟು ಅವರು ಮತ್ತೆ ಆಗಮಿಸಿದರು. ನಾನು ಒಮ್ಮೆ ಕಾಸ್ಟ್ಯೂಮ್ ಧರಿಸಿ ನೋಡಿದೆ. ನನಗೆ ಅದು ನಿಜಕ್ಕೂ ಖುಷಿ ನೀಡಿತು’ ಎಂದಿದ್ದಾರೆ ರಘು ದೀಕ್ಷಿತ್.

ಇದನ್ನೂ ಓದಿ: ಡಾನ್​ ಆದ ರಘು ದೀಕ್ಷಿತ್​ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್​’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ

ಶಾನ್ವಿ ಶ್ರೀವಾಸ್ತವ ಮತ್ತು ರಘು ದೀಕ್ಷಿತ್ ಅಲ್ಲದೆ ಈ ಚಿತ್ರದಲ್ಲಿ ಇನ್ನೂ 4 ಪಾತ್ರಗಳು ಬರಲಿವೆ. ಆ ಪಾತ್ರಗಳಲ್ಲಿ ಸಾತ್ವಿಕಾ, ರಿತ್ವಿಕ್​ ಮುರಳಿಧರ್​, ಸುನೀಲ್​ ನಾಟ್ಯರಂಗ ನಟಿಸಿದ್ದಾರೆ. ಉದಯಲೀಲ ಛಾಯಾಗ್ರಹಣ, ನವೀನ್ ಕುಮಾರ್ ಸೌಂಡ್ ಡಿಸೈನ್, ವಿಜೇತ್ ಚಂದ್ರ ಸಂಕಲನ ಇದೆ. ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪೂಜಾ ವಸಂತ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್