ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲ್ಲರೂ ಜಾಲಿ ಮೂಡ್ನಲ್ಲಿ ಇದ್ದಾರೆ. ಏಕೆಂದರೆ ಇದು ಫ್ಯಾಮಿಲಿ ವೀಕ್. ಸ್ಪರ್ಧಿಗಳ ಮಧ್ಯೆ ಇದ್ದ ವೈರತ್ವವೆಲ್ಲ ಮರೆತು ಎಲ್ಲರೂ ಹಾಯಾಗಿ ಸಮಯ ಕಳೆಯುವಂತೆ ಮಾಡಿದ್ದು ಈ ವಾರ. ಟಾಸ್ಕ್ನ ಜಂಜಾಟ ಬದಿಗಿಟ್ಟು ಸ್ಪರ್ಧಿಗಳ ಗಮನ ಆಟದ ಮೇಲೆ ಇದೆ. ಜನವರಿ 2ರ ಎಪಿಸೋಡ್ನಲ್ಲಿ ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆ್ಯಕ್ಟಿವಿಟಿ ನಡೆದಿದೆ. ಈ ವೇಳೆ ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಧನರಾಜ್ ಅವರ ಪತ್ನಿಯ ಹೆಸರು ಪ್ರಜ್ಞಾ ಆಚಾರ್ಯ. ಅವರು ಕೂಡ ಪತಿಯ ಜೊತೆ ಸೇರಿ ವಿಡಿಯೋ ಕಂಟೆಂಟ್ಗಳನ್ನು ಮಾಡುತ್ತಾ ಇರುತ್ತಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಜನ ಹಿಂಬಾಲಕರು ಇದ್ದಾರೆ. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಬಂದಿದ್ದಾರೆ. ಪತ್ನಿ ಬಳಿ ಅವರು ನೇರ ಮಾತುಗಳಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ ಮುಖ್ಯದ್ವಾರದ ಎದುರು ಕುಳಿತುಕೊಳ್ಳಲು ಜಾಗವಿದೆ. ಅದು ಧನರಾಜ್ ಹಾಗೂ ಹನುಮಂತ ಅವರ ಫೇವರಿಟ್ ಜಾಗ. ಅಲ್ಲಿಯೇ ಕುಳಿತು ಧನರಾಜ್ ಅವರು ಕ್ಯಾಪ್ಟನ್ ಆಗುವ, ಉತ್ತಮ ಪಡೆಯುವ ಹಾಗೂ ಕಿಚ್ಚನ ಚಪ್ಪಾಳೆ ಪಡೆಯುವ ಕನಸು ಕಂಡಿದ್ದರು. ಅದು ನಿಜವಾಗಿದೆ. ಈ ವಿಚಾರವನ್ನು ಅವರು ಪತ್ನಿ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರಜ್ಞಾ ಅವರು ‘ಹಾಗಾದರೆ ಈಗೇನು ಕೇಳಿಕೊಳ್ಳುತ್ತೀರಿ’ ಎಂದು ಕೇಳಿದ್ದಾರೆ. ಆಗ ಧನರಾಜ್ ಅವರು ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
‘ನನಗೆ ಎರಡನೇ ಮಗು ಬೇಕು’ ಎಂದಾಗ ಪ್ರಜ್ಞಾ ಅವರು ‘ಎಂತ ಮರಾಯಾ ನೀನು’ ಎಂದು ನಾಚಿ ನೀರಾದರು. ಆಗ ಧನರಾಜ್, ‘ನೀನು ರೆಡಿ ಇಲ್ವ? ಬೇಡವಾ’ ಎಂದು ಕೇಳಿದರು. ‘ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ’ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಇತ್ತೀಚೆಗೆ ಜನಿಸಿದ ಮಗುವನ್ನು ಎತ್ತಾಡಿ ಧನರಾಜ್ ಖುಷಿಪಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.