ಬಿಗ್​ ಬಾಸ್​ ಫಿನಾಲೆಗೂ ಮೊದಲು ಮಿಡ್​ವೀಕ್​ ಎಲಿಮಿನೇಷನ್​; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?

| Updated By: ರಾಜೇಶ್ ದುಗ್ಗುಮನೆ

Updated on: Aug 04, 2021 | 2:21 PM

ಕಳೆದ ವಾರದ ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ 9 ಸದಸ್ಯರು ಇದ್ದರು. ಈ ಪೈಕಿ ಚಕ್ರವರ್ತಿ ಚಂದ್ರಚೂಡ್​ ವಾರದ ಮಧ್ಯದಲ್ಲಿ ಎಲಿಮಿನೇಟ್​ ಆದರು. ಕಳೆದ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್​ ಬ್ರೋ ಗೌಡ ಎಲಿಮಿನೇಟ್​ ಆಗಿದ್ದಾರೆ.

ಬಿಗ್​ ಬಾಸ್​ ಫಿನಾಲೆಗೂ ಮೊದಲು ಮಿಡ್​ವೀಕ್​ ಎಲಿಮಿನೇಷನ್​; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?
ಬಿಗ್​ ಬಾಸ್​ ಕನ್ನಡ
Follow us on

ಬಿಗ್​ ಬಾಸ್​ ಫಿನಾಲೆಗೆ ಇನ್ನು ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಇವೆ. ಅದಕ್ಕೂ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​ ನಡೆಯುತ್ತಿದೆ. ಆರು ಸ್ಪರ್ಧಿಗಳ ಪೈಕಿ ಒಬ್ಬರು ಎಲಿಮಿನೇಟ್​ ಆಗುತ್ತಿದ್ದು, ಐವರು ಫಿನಾಲೆ ತಲುಪುತ್ತಿದ್ದಾರೆ. ಹಾಗಾದರೆ, ಫಿನಾಲೆ ತಲುಪುವ ಸ್ಪರ್ಧಿಗಳು ಯಾರು? ಇಂದು ನಡೆಯುವ ಎಲಿಮಿನೇಷನ್​ನಲ್ಲಿ ಹೊರ ಹೋಗುವವರು ಯಾರು ಎನ್ನುವುದು ಸದ್ಯದ ಕುತೂಹಲ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ವೈಷ್ಣವಿ ಇದ್ದಾರೆ. ಫಿನಾಲೆ ವೀಕ್​ ಆದ್ದರಿಂದ ಎಲಿಮಿನೇಷನ್​ಗೆ ಎಲ್ಲರೂ ನಾಮಿನೇಟ್​​ ಆಗಿದ್ದಾರೆ. ಅಂದಹಾಗೆ, ಈ ವಾರದ ಮಧ್ಯದಲ್ಲಿ (ಬುಧವಾರ) ಒಬ್ಬರು ಎಲಿಮಿನೇಟ್​ ಆಗುತ್ತಿದ್ದಾರೆ.

ಕಳೆದ ವಾರದ ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ 9 ಸದಸ್ಯರು ಇದ್ದರು. ಈ ಪೈಕಿ ಚಕ್ರವರ್ತಿ ಚಂದ್ರಚೂಡ್​ ವಾರದ ಮಧ್ಯದಲ್ಲಿ ಎಲಿಮಿನೇಟ್​ ಆದರು. ಕಳೆದ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್​ ಬ್ರೋ ಗೌಡ ಎಲಿಮಿನೇಟ್​ ಆಗಿದ್ದಾರೆ.

ಫಿನಾಲೆಯಲ್ಲಿ ಉಳಿದುಕೊಳ್ಳೋದು ಐದು ಸ್ಪರ್ಧಿಗಳು. ಪ್ರತಿ ವರ್ಷವೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಬಾರಿ ಫಿನಾಲೆ ವೀಕ್​ ಬಂದರೂ ಆರು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಕಾರಣಕ್ಕೆ ಒಬ್ಬರು ಫಿನಾಲೆ ವಾರ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಸುದೀಪ್​ ಹೇಳಿದ್ದರು. ಅಂತೆಯೇ ಬುಧವಾರದ ಎಪಿಸೋಡ್​ನಲ್ಲಿ ಒಬ್ಬರು ಎಲಿಮಿನೇಟ್​ ಆಗುತ್ತಿದ್ದಾರೆ.

ಆರೂ ಸ್ಪರ್ಧಿಗಳಿಗೆ ನಾನಾ ರೀತಿಯ ಟಾಸ್ಕ್​ ನೀಡಲಾಗಿದೆ. ಈ ಪೈಕಿ ಒಬ್ಬೊಬ್ಬರನ್ನಾಗಿಯೇ ಸೇವ್​ ಮಾಡುತ್ತಾ ಬರಲಾಗಿದೆ. ಕೊನೆಯಲ್ಲಿ ಉಳಿದ ಸ್ಪರ್ಧಿ ಎಲಿಮಿನೇಟ್​ ಆದಂತೆ. ಈ ವಾರ ಕಡಿಮೆ ವೋಟ್​ ಪಡೆದು ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಬೇಕಿದೆ. ಇದು ನಿಜವಾದ್ದಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದಂತಾಗುತ್ತದೆ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ಗೆ ಸಿಕ್ತು 75 ಲಕ್ಷದ ಮನೆ; 16 ವರ್ಷದ ಪರಿಶ್ರಮಕ್ಕೆ ಸಿಕ್ಕ ಫಲ ಇದು

ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ

Published On - 2:14 pm, Wed, 4 August 21