AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gattimela: ತಾನೇ ಬುದ್ಧಿವಂತೆ ಎಂದು ತಿಳಿದಿರುವ ಸುಹಾಸಿನಿಯ ಡ್ರಾಮಕ್ಕೆ ಬೀಳುತ್ತಾ ತೆರೆ?

 ವೈದೇಹಿ ಹುಡುಕಾಟದಲ್ಲಿರುವ ಮನೆಯವರಿಗೆ ದಾರಿ ತಪ್ಪಿಸಿ ತಾನೇ ಬುದ್ಧಿವಂತೆ ಎಂದು ಕೊಂಡಿರುವ ಸುಹಾಸಿನಿಗೆ ಪಾಠ ಕಲಿಸಲು ವಿಕ್ರಾಂತ್ ಪ್ಲಾನ್ ಮಾಡುತ್ತಿದ್ದಾನೆ. 

Gattimela: ತಾನೇ ಬುದ್ಧಿವಂತೆ ಎಂದು ತಿಳಿದಿರುವ ಸುಹಾಸಿನಿಯ ಡ್ರಾಮಕ್ಕೆ ಬೀಳುತ್ತಾ ತೆರೆ?
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 21, 2022 | 3:36 PM

Share

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ  ಧಾರಾವಾಹಿಯು ದಿನೇ ದಿನೇ ಒಂದೊಂದು ಇಂಟ್ರೆಸ್ಟಿಂಗ್ ಸ್ಟೋರಿಯತ್ತ ಸಾಗುತ್ತಿದೆ, ಜನರಲ್ಲಿ ಈ ಧಾರಾವಾಹಿ ಕುತೂಹಲವನ್ನು ಹುಟ್ಟು ಹಾಕುತ್ತಿದೆ.  ಕಥೆಯಲ್ಲಿ ತಾಯಿಯನ್ನು ಕಂಡುಕೊಳ್ಳುವ  ಹಂಬಲದಲ್ಲಿರುವ  ವಿಕ್ರಾಂತ್ ,ವೇದಾಂತ್​​ಗೆ ಒಂದು ದೊಡ್ಡ ಸಾಕ್ಷಿಯಾಗಿ ಸಿಕ್ಕದ್ದು ಪ್ರಜ್ವಲ್ ತಂದ ವಿಡಿಯೋ, ಈ ವೀಡಿಯೋವನ್ನು  ಮನೆಯವರೆಲ್ಲರೂ ನೋಡಿದ್ದಾರೆ. ಆದರೆ ಅದರಲ್ಲಿ ಸುಹಾಸಿನಿ ತನ್ನ ಕುತಂತ್ರದಿಂದ ವೀಡಿಯೋದಲ್ಲಿ ಇರುವ ವೈದೇಹಿ ಮುಖವನ್ನು ಬದಲಾಯಿಸಿರುತ್ತಾಳೆ. ಆದರೆ  ಮನೆಯವರೆಲ್ಲ ಅವರೇ ವೈದೇಹಿ ಎಂದು  ತಿಳಿದು ಸಂತೋಷ ಪಟ್ಟಿದ್ದಾರೆ. ಅಷ್ಟರಲ್ಲಿ ತಮ್ಮ ತಾಯಿ ಅವರೇ ಎಂದು ಸಾಬಿತು ಮಾಡುವುದಕ್ಕೆ  ಸುಹಾಸಿನಿ ಬಳಿಯೇ ವಿಕ್ರಮ್ ತನ್ನ  ತಾಯಿಯ ಬಗ್ಗೆ ಕೇಳುತ್ತಾನೆ.

ವಿಕ್ರಾಂತ್ ಕೇಳಿದ ಪ್ರಶ್ನೆಗೆ ಸುಹಾಸಿನಿಯು ವಿಡಿಯೋದಲ್ಲಿದ್ದರುವುದು ನಿಮ್ಮ ಅಮ್ಮ, ನನ್ನ ಅಕ್ಕ  ವೈದೇಹಿ  ಎಂದು ಸುಳ್ಳು ಹೇಳುತ್ತಾಳೆ. ವೇದಾಂತ್ ಮನೆಯಲ್ಲಿರುವ ನಿಜವಾದ ವೈದೇಹಿ ಈ ಮಾತುನ್ನು ಕೇಳಿ ಕೋಪಗೊಂಡು ವಿಕ್ರಾಂತ್- ವೇದಾಂತ್ ತಾಯಿ ನಾನೇ ಎಂಬ ಸತ್ಯವನ್ನು  ಎಲ್ಲರ ಮುಂದೆ  ಬಿಚ್ಚಿಡುತ್ತೇನೆ ಎಂದು ವೇದಾಂತ್​​ಗೆ ಸತ್ಯ ಹೇಳುವಷ್ಟರಲ್ಲಿ  ಸುಹಾಸಿನಿ ತನ್ನ ಕುತಂತ್ರಿ ಬುದ್ಧಿಯಿಂದ ಧ್ರುವನನ್ನು ಮೆಟ್ಟಿಲ ಮೇಲಿಂದ ತಳ್ಳಿ ಕೆಳಗೆ  ಬೀಳಿಸುತ್ತಾಳೆ.  ಇದನ್ನು ಗಮನಿಸಿದ  ವಿಕ್ರಾಂತ್  ಸುಹಾಸಿನಿ  ಮೇಲಿನ ಅನುಮಾನ ಇನ್ನು ಹೆಚ್ಚಾಗುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು  ಸುಹಾಸಿನಿಗೆ  ಹಲವಾರು ರೀತಿಯಲ್ಲಿ ಬುದ್ಧಿ ಕಲಿಸಲು  ಪ್ರಯತ್ನ ಪಟ್ಟು ವಿಫಲನಾಗಿರುವ ವಿಕ್ರಾಂತ್   ಮತ್ತೆ ಸುಹಾಸಿನಿಯ ನಿಜ ರೂಪವನ್ನು ಬಯಲು ಮಾಡಲು ಪ್ರಯತ್ನಿಸುತ್ತಿದ್ದಾನೆ.

ಸುಹಾಸಿನಿಯ  ಸಂಚಿಗೆ  ಒಂದಲ್ಲಾ ಒಂದು ರೀತಿ ಬಲಿಯಾಗುತ್ತಿರುವ ಅದಿತಿಗೆ ಮತ್ತೊಂದು ಸಂಕಟ ಎದುರಾಗಿದೆ ಸುಹಾಸಿನಿನಿ ಜೊತೆ ಕೈಗೂಡಿಸಿದ ತೇಜಸ್ ಈಗ ಅದಿತಿಗೆ ಬೆದರಿಕೆ ಹಾಕಿ ತಾನು ನಿನ್ನನ್ನೇ ಮದುವೆ ಆಗುವೆ ನೀನು ಬೇರೆಯವರೊಂದಿಗೆ ವಿವಾಹವಾದರೆ ನಿನ್ನ ಸಂಸಾರ ನಾಶ ಮಾಡುವುದಾಗಿ  ಬೆದರಿಕೆಯನ್ನು ಹಾಕಿದ್ದಾನೆ. ಗಾಬರಿಗೊಂಡ ಅದಿತಿ ತನ್ನ ಅತ್ತಿಗೆ ಆದ್ಯಾಗೆ ಕಾಲ್ ಮಾಡಿ ಧ್ರುವನ ಬಗ್ಗೆ ವಿಚಾರಿಸುತ್ತಾಳೆ. ವೇದಂತ್ ತೇಜಸ್​ಗೆ ಬುದ್ದಿ ಕಲಿಸಲು ಮುಂದಾಗುತ್ತಾನೆ. ವಿಕ್ರಾಂತ್​ಗೆ ಸುಹಾಸಿನಿ ಮೇಲೆ ಅನುಮಾನದ ಇನ್ನೂ ಹೆಚ್ಚಾಗಿದೆ,   ವೈದೇಹಿ ಹುಡುಕಾಟದಲ್ಲಿರುವ ಮನೆಯವರಿಗೆ ದಾರಿ ತಪ್ಪಿಸಿ ತಾನೇ ಬುದ್ಧಿವಂತೆ ಎಂದು ಕೊಂಡಿರುವ ಸುಹಾಸಿನಿಗೆ ಪಾಠ ಕಲಿಸಲು ವಿಕ್ರಾಂತ್ ಪ್ಲಾನ್ ಮಾಡುತ್ತಿದ್ದಾನೆ.  ಈ ಎಲ್ಲ ಪ್ಲಾನ್  ಫಲಿಸಿದ್ದಾರೆ  ಸುವಾಸಿನಿ ನಾಟಕಕ್ಕೆ ತೆರೆ ಬೀಳುತ್ತಾ ಎಂದು ಕಾದು ನೋಡಬೇಕಿದೆ.

ಐಶ್ವರ್ಯ ಕೋಣನ

Published On - 3:34 pm, Wed, 21 September 22