‘ಖಿನ್ನತೆಯಿಂದ ಗಾಂಜಾ ಸೇವಿಸಿದೆ’: ಬಂಧನದ ವೇಳೆ ಒಪ್ಪಿಕೊಂಡ ಬಿಗ್ ಬಾಸ್ ಸ್ಪರ್ಧಿ; ವಿಡಿಯೋ ವೈರಲ್
ಬಿಗ್ ಬಾಸ್ ರಿಯಾಲಿಟಿ ಶೋನಿಂದ ಷಣ್ಮುಖ್ ಜಸ್ವಂತ್ ಅವರು ಫೇಮಸ್ ಆಗಿದ್ದರು. ರನ್ನರ್ ಅಪ್ ಪಟ್ಟ ಅವರಿಗೆ ಸಿಕ್ಕಿತ್ತು. ಆದರೆ ಈಗ ಅವರು ಹೆಸರು ಕೆಡಿಸಿಕೊಂಡಿದ್ದಾರೆ. ಗಾಂಜಾ ಸೇವಿಸಿ, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅರೆಸ್ಟ್ ಆಗುವಾಗ ಅವರು ಕಿರುಚಾಡಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗಿದೆ. ಇದರಿಂದ ಅವರ ವೃತ್ತಿಜೀವನಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಯೂಟ್ಯೂಬರ್ ಆಗಿ ಖ್ಯಾತಿ ಗಳಿಸಿ, ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ನಟ ಷಣ್ಮುಖ್ ಜಸ್ವಂತ್ (Shanmukh Jaswanth) ಈಗ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಮಾದಕ ವಸ್ತುಗಳನ್ನು ಹೊಂದಿದ್ದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಫೆಬ್ರವರಿ 22ರಂದು ಅವರ ಬಂಧನ ಆಗಿತ್ತು. ಈಗ ಷಣ್ಮುಖ್ ಜಸ್ವಂತ್ ಅವರ ವಿಡಿಯೋ ವೈರಲ್ (Shanmukh Viral Video) ಆಗಿದೆ. ಬಂಧನದ ವೇಳೆ ಅವರು ಗಾಂಜಾ (Ganja) ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಷಣ್ಮುಖ್ ಜಸ್ವಂತ್ ಅವರ ಸಹೋದರನ ಮೇಲೂ ಗಂಭೀರ ಆರೋಪಗಳಿಗೆ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಯುವತಿಗೆ ಮೋಸ ಮಾಡಿದ ಆರೋಪ ಆತನ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅವರ ನಿವಾಸಕ್ಕೆ ತೆರಳಿದ್ದ ಪೊಲೀಸರ ಕೈಗೆ ಷಣ್ಮುಖ್ ಸಿಕ್ಕಿ ಬಿದ್ದಿದ್ದಾರೆ. ಬಂಧನದ ವೇಳೆ ಅವರು ಮಾತನಾಡಿರುವುದು ಈ ವೈರಲ್ ವಿಡಿಯೋದಲ್ಲಿ ಕೇಳಿಸುತ್ತಿದೆ.
ಗಾಂಜಾ, ಡ್ರಗ್ಸ್ ವಿಚಾರ: ಸಾಯಿ ಧರಂ ತೇಜ್ ಸಿನಿಮಾ ತಂಡಕ್ಕೆ ಅಧಿಕಾರಿಗಳ ಎಚ್ಚರಿಕೆ
‘ನಾನು ಖಿನ್ನತೆಯಲ್ಲಿದ್ದ. ಹಾಗಾಗಿ ಇದನ್ನು ಮಾಡಿದೆ. ನಾನು ಸಾಯಲು ಹೊರಟಿದ್ದೆ. ನಾನು ತಪ್ಪು ಮಾಡಿದೆ’ ಎಂದು ಷಣ್ಮುಖ್ ಜಸ್ವಂತ್ ಕೂಗಾಡುತ್ತಿರುವುದು ಈ ವಿಡಿಯೋದಲ್ಲಿದೆ. ಗಾಂಜಾ ಸೇವಿಸಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ರಾ ಎಂಬ ಅನುಮಾನ ಮೂಡಿದೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿಚಾರಣೆ ವೇಳೆ ಇನ್ನೂ ಹಲವು ಸತ್ಯಗಳು ಬಹಿರಂಗ ಆಗಲಿವೆ.
E Shanmukh gadu okadu pic.twitter.com/9QCLX65bYe
— Satyajith (@satyajithpinku) February 25, 2024
ತೆಲುಗು ಚಿತ್ರರಂಗದಲ್ಲಿ ಅನೇಕರು ಡ್ರಗ್ಸ್ ಸೇವಿಸಿದ ಆರೋಪ ಎದುರಿಸುತ್ತಿದ್ದಾರೆ. ಹಲವರ ಮೇಲೆ ಕೇಸ್ ಇದೆ. ಈಗ ಮಾಜಿ ಬಿಗ್ ಬಾಸ್ ಸ್ಪರ್ಧಿ ಷಣ್ಮುಖ್ ಜಸ್ವಂತ್ ಗಾಂಜಾ ಸೇವಿಸಿ ಸಿಕ್ಕಿಬಿದ್ದಿರುವುದರಿಂದ ವಿಚಾರಣೆ ನಡೆಸಿದರೆ ಅನೇಕರ ಹೆಸರು ಹೊರಬರುವ ಸಾಧ್ಯತೆ ಇದೆ. ‘ಬಿಗ್ ಬಾಸ್ ತೆಲುಗು ಸೀಸನ್ 5’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಷಣ್ಮುಖ್ ಜಸ್ವಂತ್ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು. ಆ ಸೀಸನ್ನಲ್ಲಿ ಫಿನಾಲೆ ತನಕ ತಲುಪಿದ ಅವರು ಮೊದಲ ರನ್ನರ್ಅಪ್ ಆಗಿದ್ದರು. ಸಿಕ್ಕಿರುವ ಜನಪ್ರಿಯತೆಯನ್ನು ಅವರು ಹಾಳು ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.