ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಶಿಷ್ಟ ಕಥಾ ಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪೊಲೀಸರಿಂದ ತಪ್ಪಿಸಿಕೊಂಡು ಹೋದ ಮೌರ್ಯನನ್ನು ಮಿಲ್ಲಿಯ ತಾಯಿ ಕಿಡ್ನಾಪ್ ಮಾಡುತ್ತಾಳೆ. ಅವಳಿಂದಲೇ ಮತ್ತೊಮ್ಮೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಶ್ವೇತಾಳ ಉಪಾಯದಿಂದ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಮೌರ್ಯನನ್ನು ಮಿಲ್ಲಿಯ ತಾಯಿ ಕಿಡ್ನಾಪ್ ಮಾಡಿ ಕಟ್ಟಿ ಹಾಕುತ್ತಾಳೆ. ಚಂದ್ರಶೇಖರ್ ನನ್ನ ಬೇಟೆ, ಅವನಿಗೆ ಕೇವಲ ನಾನೊಬ್ಬಳೇ ಶತ್ರು. ನಾನು ಮಾತ್ರ ಅವನಿಗೆ ತೊಂದರೆ ಕೊಡಬೇಕು ಎಂದು ಮೌರ್ಯನ ಬಳಿ ಹೇಳುತ್ತಾಳೆ. ನೀವ್ಯಾರು ನಿಮಗೇಕೆ ಸಿ.ಎಸ್ ಮೇಲೆ ಕೋಪ ಎಂದು ಮೌರ್ಯ ಕೇಳಿದಾಗ ಆಕೆ ಏನನ್ನು ಹೇಳುವುದಿಲ್ಲ. ಮೌರ್ಯನಿಗೆ ಈಕೆ ಯಾರು ಎನ್ನುವ ಸತ್ಯ ಗೊತ್ತಾಗುವುದಿಲ್ಲ, ಆದರೆ ಚಂದ್ರಶೇಖರ್‌ನ ಶತ್ರು ಎಂಬುದು ಮಾತ್ರ ಗೊತ್ತಾಗುತ್ತದೆ.
ಇತ್ತ ಕಡೆ ಮೌರ್ಯ ಕಾಣಿಸುತ್ತಿಲ್ಲ, ನಕ್ಷತ್ರಳಿಗೆ ಇನ್ಯಾವ ತೊಂದರೆ ತಂದೊಡ್ಡುತ್ತಾನೋ ಎನ್ನುವ ಚಿಂತೆಯಲ್ಲಿ ಮನೆಯವರೆಲ್ಲರೂ ಇದ್ದಾಗ, ಸಿ.ಎಸ್ಗೆ ಒಂದು ಕರೆ ಬರುತ್ತದೆ. ಮೌರ್ಯ ಬೇಕಾದರೆ ನಾವು ಹೇಳುವ ಜಾಗಕ್ಕೆ ಬರಬೇಕೆಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ಹೇಳುತ್ತಾನೆ. ಭೂಪತಿಯ ಮನೆಯವರು ಮತ್ತು ಪೊಲೀಸರು ತಕ್ಷಣ ಆ ಅಜ್ಞಾತ ಸ್ಥಳಕ್ಕೆ ಹೋಗುತ್ತಾರೆ.
ಹೋದವರಿಗೆ ಒಂದು ದೊಡ್ಡ ಶಾಕ್ ಕಾದಿತ್ತು. ಮೌರ್ಯನನ್ನು ಮೇಲೆ ನೇತು ಹಾಕಲಾಗಿತ್ತು. ಅವನನ್ನು ಅಲ್ಲಿಂದ ಇಳಿಸಿ ಪೊಲೀಸರು ಮೌರ್ಯನನ್ನು ಬಂಧಿಸುತ್ತಾರೆ. ಪೊಲೀಸರ ಕೈಸೆರೆಯಾದರೂ ದುರಹಂಕಾರ ಕರಗದ ಮೌರ್ಯ ನಕ್ಷತ್ರಳನ್ನು ಸಾಯಿಸಲು ಮತ್ತೆ ಬಂದೇ ಬರುತ್ತೇನೆ ಎಂದು ಸವಾಲ್ ಹಾಕುತ್ತಾನೆ. ಅದಕ್ಕೆ ತಕ್ಕ ಉತ್ತರವನ್ನು ನೀಡಿದ ಸಿ.ಎಸ್ ಅದು ಹೇಗೆ ನೀನು ಜೈಲಿಂದ ವಾಪಸ್ ಬರುತ್ತೀಯಾ ನಾನು ನೋಡುತ್ತೇನೆ ಎಂದು ಹೇಳುತ್ತಾನೆ. ಮತ್ತೊಂದು ಕಡೆ ಶ್ವೇತಾಳಿಗೆ ಮೌರ್ಯನ ಕಾರಣದಿಂದ ನನ್ನ ಬಣ್ಣ ಬಯಲಾಗುತ್ತದೋ ಎಂದು ಮನದಲ್ಲೇ ಭಯ ಶುರುವಾಗಿದೆ.
ಇಷ್ಟೆಲ್ಲಾ ರಾದ್ಧಾಂತ ನಡೆದ ಮೇಲೆ ಭೂಪತಿಗೆ ಒಂದು ಅನುಮಾನ ಕಾಡುತ್ತದೆ. ಮೌರ್ಯನನ್ನು ಕಿಡ್ನಾಪ್ ಮಾಡಿದವರು ಯಾರು?, ಯಾವ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ ಅದನ್ನು ಪತ್ತೆ ಹಚ್ಚಬೇಕು ಎಂದು ಯೋಚಿಸುತ್ತಾನೆ. ಈ ಕಡೆ ಸೀಕ್ರೆಟ್ ವಿಲನ್ ಆಗಿರುವಂತಹ ಮಿಲ್ಲಿಯ ತಾಯಿ ಅಸಲಿ ಆಟ ಈಗ ಶುರುವಾಗುತ್ತೆ. ಈಕೆ ಯಾರು, ಅವಳು ಇನ್ಯಾವ ರೀತಿಯಲ್ಲಿ ಚಂದ್ರಶೇಖರ್ ಕುಟುಂಬಕ್ಕೆ ತೊಂದರೆ ಕೊಡುತ್ತಾಳೆ ಎಂಬುದನ್ನು ಮುಂದೆ ಕಾದು ನೋಡಬೇಕಾಗಿದೆ.
Published On - 10:54 am, Fri, 23 September 22