ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಗಗನ್; ಆಟಕ್ಕೆ ಸಿಕ್ಕಿತು ಮೈಲೇಜ್
ಬಿಗ್ ಬಾಸ್ ಮನೆಯಲ್ಲಿ ನಡೆದ ಕಠಿಣ ಟಾಸ್ಕ್ನಲ್ಲಿ ಗೆಲುವು ಸಾಧಿಸುವ ಮೂಲಕ ಗಗನ್ ಅವರು ಈ ವಾರದ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಇದರೊಂದಿಗೆ ಅವರು ಎಲಿಮಿನೇಷನ್ ಮತ್ತು ನಾಮಿನೇಷನ್ನಿಂದ ಬಚಾವ್ ಆಗಿದ್ದು, ತಮ್ಮ ಆಟವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ದೊಡ್ಡ ಅವಕಾಶ ಹಾಗೂ ಮೈಲೇಜ್ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗೋದು ತುಂಬಾನೇ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೂ ಇದೆ. ಈ ರೀತಿ ಕ್ಯಾಪ್ಟನ್ ಆದವರು ಎಲಿಮಿನೇಷನ್ ಎಂಬ ಭೂತದಿಂದ ಶ್ರೀರಕ್ಷೆ ಪಡೆಯುತ್ತಾರೆ. ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ. ಈಗ ಗಗನ್ ಅವರು ಕ್ಯಾಪ್ಟನ್ ಆಗಿದ್ದಾರೆ. ಇದು ಅವರ ಆಟಕ್ಕೆ ದೊಡ್ಡ ಮೈಲೇಜ್ ಸಿಕ್ಕಿದೆ.
ಬಿಗ್ ಬಾಸ್ಗೆ ಹೋಗಬೇಕು ಎಂಬುದು ಪ್ರತಿಯೊಬ್ಬನ ಕನಸು. ಈ ಕನಸು ನನಸು ಮಾಡಿಕೊಳ್ಳಬೇಕು ಎಂದು ಸಾಕಷ್ಟು ಶ್ರಮ ಹಾಕಲಾಗುತ್ತದೆ. ಈ ರೀತಿ ಬಿಗ್ ಬಾಸ್ ಮನೆಗೆ ಹೋದವರು ಕ್ಯಾಪ್ಟನ್ ಆಗಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಎಲ್ಲರಿಗೂ ಈ ಅದೃಷ್ಟ ಒಲಿಯೋದಿಲ್ಲ.
ಗಗನ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬಂದು ಹಲವು ವಾರಗಳ ಬಳಿಕ ಕ್ಯಾಪ್ಟನ್ ಆಗಿದ್ದಾರೆ. ಅವರು ಟಾಸ್ಕ್ ಆಡಿ ವಿನ್ ಆಗಿದ್ದಾರೆ. ಈ ಓಟದಲ್ಲಿ ಗಾನವಿ, ಕಿರಣ್ ಶಾಸ್ತ್ರಿ, ಗಗನ್ ಹಾಗೂ ಯಶಸ್ ಇದ್ದರು. ತಮಗೆ ನೀಡಿದ ನೀರನ್ನು ಉಳಿಸಿಕೊಳ್ಳುವ ಟಾಸ್ಕ್ ಅಲ್ಲಿ ಮೊದಲು ಕಿರಣ್ ಔಟ್ ಆದರೆ, ಆ ಬಳಿಕ ಗಾನವಿ ಹೊರಕ್ಕೆ ಹೋದರು.
ಇದನ್ನೂ ಓದಿ: ಅತ್ಯುತ್ತಮ ಅವಾರ್ಡ್ ಪಡೆದ ಯಶಸ್, ಮನೆ ಮಂದಿ ಮೆಚ್ಚುಗೆ ಕೊನೆಯಲ್ಲಿ ಯಶಸ್ ಹಾಗೂ ಗಗನ್ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಈ ವಾರ ಗಗನ್ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ. ಅವರು ಈ ವಾರ ನಾಮಿನೇಷನ್ ಆಗಿಲ್ಲ. ಹೀಗಾಗಿ, ಮುಂದಿನ ವಾರದ ನಾಮಿನೇಷ್ನಿಂದ ಬಚಾವ್ ಆಗಿದ್ದಾರೆ. ಒಂದು ವಾರ ಈ ರೀತಿಯ ಅವಕಾಶ ಸಿಕ್ಕರೂ ಅನೇಕ ಸ್ಪರ್ಧಿಗಳಿಗೆ ಅದನ್ನು ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಂತೆ. ಇದನ್ನು ಗಗನ್ ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:24 pm, Fri, 16 October 26




