
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಗಗನ್ ಹಾಗೂ ತಾಂಡವ್ ಅವರ ಗೆಳೆತನ ಅವರ ಆಟಕ್ಕೇ ಮುಳುವಾಗುತ್ತಿದೆ. ಇದನ್ನು ಪದೇಪದೇ ಸುದೀಪ್ ಹೇಳಿದರೂ ಆಟದ ಸ್ವರೂಪ ಬದಲಾಗಿಲ್ಲ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಈಗ ಇಬ್ಬರ ಆಟದಲ್ಲಿ ಬಿರುಕು ಮೂಡುವ ಎಲ್ಲಾ ಲಕ್ಷಣ ಕಾಣಿಸಿದೆ. ಶನಿವಾರದ ಎಪಿಸೋಡ್ ಬಳಿಕ ಈ ಬೆಳವಣಿಗೆ ನಡೆದಿದೆ.
ಗಗನ್ ಹಾಗೂ ತಾಂಡವ್ ರಾಮ್ ಅವರು ಮೊದಲಿನಿಂದಲೂ ಗೆಳೆಯರು. ಬಿಗ್ ಬಾಸ್ಗೆ ಬಂದ ಬಳಿಕ ಇವರು ಮತ್ತಷ್ಟು ಕ್ಲೋಸ್ ಆದರು. ಇವರ ಗೆಳೆತನ ವೈಯಕ್ತಿಕ ಆಟದ ಮೇಲೂ ಸಾಕಷ್ಟು ಎಫೆಕ್ಟ್ ಆಯಿತು. ಈಗ ಗಗನ್ ಅವರು ತಾಂಡವ್ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಮೊದಲು ತಾಂಡವ್ ರಾಮ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಕಳುಹಿಸುವ ಡ್ರಾಮಾ ಮಾಡಲಾಗಿತ್ತು. ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ಇದಾದ ಬಳಿಕ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುವಾಗ ಸುದೀಪ್ ಅವರು, ‘ವೈಯಕ್ತಿಕ ಆಟ ಆಡಿ’ ಎಂದು ಕಿವಿಮಾತು ಹೇಳಿದ್ದರು. ಆದರೂ ತಾಂಡವ್ ರಾಮ್ ಬದಲಾಗಲೇ ಇಲ್ಲ.
ಬಿಗ್ ಬಾಸ್ ಮನೆ ಒಳಗೆ ಹೋಗಿ, ‘ಗಗನ್ ಗಗನ್’ ಎಂದು ಅವರನ್ನು ಬೆಂಬಲಿಸಿ ನಿಂತರು. ಗಗನ್ ಕೂಡ ಹಿಗೆಯೇ ಮಾಡಿದರು. ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ನಲ್ಲಿಯೂ ಇಬ್ಬರೂ ಬೇರೆ ಬೇರೆ ತಂಡದಲ್ಲಿದ್ದರೂ ಒಟ್ಟಾಗಿ ಆಡಿದ್ದರು. ಟಾಸ್ಕ್ ವೇಳೆ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡಿದ್ದರು. ಇದನ್ನು ವಿಟಿ ಹಾಕಿ ತೋರಿಸಿ ಸುದೀಪ್ ಕ್ಲಾಸ್ ತೆಗೆದುಕೊಂಡರು. ಇದಾದ ಬಳಿಕ ಗಗನ್ ಅವರು ತಾಂಡವ್ ರಾಮ್ ಅವರಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
‘ನಾನು ತಾಂಡವ್ ರಾಮ್ನಿಂದ ದೂರ ಇರುತ್ತೇನೆ. ಗೆಳೆತನ ಇರುತ್ತದೆ. ಆದರೆ, ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಮಾತ್ರ ಇರುತ್ತದೆ’ ಎಂದಿದ್ದರು ಗಗನ್. ಯಾರು ಫಿನಾಲೆ ತಲುಪುತ್ತಾರೆ ಎಂದು ಸುದೀಪ್ ಕೇಳಿದಾಗ ಗಗನ್ ಅವರು ತಾಂಡವ್ ಬದಲು ಸೌಂದರ್ಯಾ ಹೆಸರನ್ನು ತೆಗೆದುಕೊಂಡಿದ್ದು, ದೊಡ್ಮನೆಯಲ್ಲಿ ಚರ್ಚೆಯ ಕೇಂದ್ರ ಬಿಂದು ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.