ಗೌತಮಿ ಮಲಗಿದ್ದಾಗ ಇಷ್ಟವಾಗದ ರೀತಿ ನಡೆದುಕೊಂಡ ಧನರಾಜ್; ವಾರ್ನಿಂಗ್ ಕೊಟ್ಟ ನಟಿ

ಧನರಾಜ್ ಅವರು ನಡೆದುಕೊಂಡ ರೀತಿಯಿಂದ ಗೌತಮಿ ಜಾದವ್ ಅವರಿಗೆ ಸಖತ್ ಕೋಪ ಬಂದಿದೆ. ಕೂಡಲೇ ಅವರು ಧನರಾಜ್​ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಗೌತಮಿ ಗರಂ ಆಗಿದ್ದರಿಂದ ಧನರಾಜ್ ಅವರಿಗೆ ಬೇಸರ ಆಗಿದೆ. ಇಷ್ಟು ದಿನ ಪಾಸಿಟಿವಿಟಿ ಎನ್ನುತ್ತಿದ್ದ ಗೌತಮಿ ಅವರು ಈಗ ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಧನರಾಜ್ ಬೇಸರ ಮಾಡಿಕೊಂಡಿದ್ದಾರೆ.

ಗೌತಮಿ ಮಲಗಿದ್ದಾಗ ಇಷ್ಟವಾಗದ ರೀತಿ ನಡೆದುಕೊಂಡ ಧನರಾಜ್; ವಾರ್ನಿಂಗ್ ಕೊಟ್ಟ ನಟಿ
ಗೌತಮಿ ಜಾದವ್, ಧನರಾಜ್
Follow us
ಮದನ್​ ಕುಮಾರ್​
|

Updated on: Oct 30, 2024 | 10:26 PM

‘ಸತ್ಯ’ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪಾಸಿಟಿವ್ ಮನಸ್ಥಿತಿಯಿಂದ ಗಮನ ಸೆಳೆದಿದ್ದಾರೆ. ಆದರೆ ವಿವಾದಗಳೇ ತುಂಬಿರುವ ದೊಡ್ಮನೆಯಲ್ಲಿ ಪಾಸಿಟಿವಿಟಿ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೂಗಾಡಬೇಕಾಗುತ್ತದೆ. ಕಿರಿಕಿರಿ ಆದಾಗ ನಗು ಬದಿಗಿಟ್ಟು ಜಗಳ ಮಾಡಲೇಬೇಕಾಗುತ್ತದೆ. 31ನೇ ದಿನ ಬೆಳ್ಳಂಬೆಳಗ್ಗೆಯೇ ಗೌತಮಿ ಅವರಿಗೆ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಧನರಾಜ್. ಹೌದು, ಧನರಾಜ್​ ಅವರ ಒಂದು ವರ್ತನೆಯನ್ನು ಗೌತಮಿ ಖಂಡಿಸಿದ್ದಾರೆ.

ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ, ಬೆಳಗ್ಗೆ ಹಾಡು ಪ್ಲೇ ಆದ ತಕ್ಷಣ ಎಲ್ಲ ಸ್ಪರ್ಧಿಗಳು ಏಳಬೇಕು. ಸಾಮಾನ್ಯವಾಗಿ ಈ ರೀತಿ ಹಾಡು ಹಾಕಿದಾಗ ಎಲ್ಲರೂ ಎದ್ದು ಡ್ಯಾನ್ಸ್ ಮಾಡುತ್ತಾರೆ. ಆದರೆ 31ನೇ ದಿನ ಹಾಡು ಪ್ಲೇ ಆದಾಗ ಗೌತಮಿ ಅವರು ಇನ್ನೂ ಬೆಡ್​ ಬಿಟ್ಟು ಎದ್ದಿರಲಿಲ್ಲ. ಇನ್ನೇನು ಅವರು ಏಳಬೇಕು ಎಂಬಷ್ಟರಲ್ಲಿ ಧನರಾಜ್ ಅವರು ದಿಂಬಿನಿಂದ ಗೌತಮಿಗೆ ಹೊಡೆದರು. ಅದು ಗೌತಮಿ ಅವರಿಗೆ ಕಿರಿಕಿರಿ ಉಂಟು ಮಾಡಿತು.

‘ನನಗೆ ಇದು ಇಷ್ಟ ಆಗಲಿಲ್ಲ. ಮೊದಲ ದಿನ ಅಂತ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಈ ರೀತಿ ಎಬ್ಬಿಸಬೇಡಿ. ಸಾಂಗ್ ಬಂದಾಗ ಏಳಬೇಕು ಎಂಬುದು ನನಗೆ ಕೂಡ ಗೊತ್ತು’ ಎಂದು ಗೌತಮಿ ಅವರು ಗರಂ ಆಗಿ ಹೇಳಿದ್ದಾರೆ. ಯಾವಾಗಲೂ ಪಾಸಿಟಿವಿಟಿ ಜಪ ಮಾಡುವ ಗೌತಮಿ ಅವರು ಇಷ್ಟು ಖಡಕ್ ಆಗಿ ವಾರ್ನಿಂಗ್ ನೀಡಿದ್ದು ಕಂಡು ಧನರಾಜ್ ಅವರಿಗೆ ಅಚ್ಚರಿ ಆಯಿತು. ಕೆಲವು ನಿಮಿಷಗಳ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಘಟನೆ ಬಳಿಕ ಧನರಾಜ್ ಮತ್ತು ಗೌತಮಿ ನಡುವೆ ಮೊದಲಿನ ಆತ್ಮೀಯತೆ ಉಳಿಯದೇ ಇರಬಹುದು.

ಇದನ್ನೂ ಓದಿ: ಪಾಳುಬಿದ್ದ ಬಿಗ್ ಬಾಸ್ ಮನೆಗೆ ಮಾಸ್ಟರ್ ಆನಂದ್ ಎಂಟ್ರಿ

ಈ ವಾರ ಹನುಮಂತ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ತಮ್ಮ ಆಟದ ಅಸಲಿ ವರಸೆಯನ್ನು ತೋರಿಸುತ್ತಿದ್ದಾರೆ. ಅವರ ಬುದ್ಧಿವಂತಿಕೆಯನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಬಿಗ್ ಬಾಸ್ ಆಟವನ್ನು ಅವರು ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರನ್ನು ಅವರು ನಗಿಸುತ್ತಿದ್ದಾರೆ. ಹಾಗಂತ ಅವರು ಅಸಲಿ ಆಟವನ್ನು ಮರೆತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ