ಗಿಲ್ಲಿ ಬಳಿಯೇ ಉಳೀತಾ ಚಿನ್ನದ ಚೈನ್, ಉಂಗುರ? ವಿವರಿಸಿದ ನಟ

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ, ಶರವಣರ ಚಿನ್ನದ ಅಂಗಡಿ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಅವರಿಗೆ ಚಿನ್ನದ ಸರ, ಉಂಗುರಗಳನ್ನು ತೊಡಿಸಲಾಗಿತ್ತು. ಇಷ್ಟು ಚಿನ್ನ ನೋಡಿ ಅದು ತಮಗೇ ಎಂದು ಗಿಲ್ಲಿ ಭಾವಿಸಿದ್ದರು. ಆದರೆ, ನಂತರ ಅದು ಅಂಗಡಿಯವರಿಗೆ ಸೇರಿದ್ದು, ಹಿಂದಿರುಗಿಸಬೇಕೆಂದು ತಿಳಿದು ಆಶ್ಚರ್ಯಪಟ್ಟರು. ಅತಿಥಿಗಳಿಗೆ ಚಿನ್ನ ತೊಡಿಸುವುದು ಶರವಣರ ವಾಡಿಕೆ.

ಗಿಲ್ಲಿ ಬಳಿಯೇ ಉಳೀತಾ ಚಿನ್ನದ ಚೈನ್, ಉಂಗುರ? ವಿವರಿಸಿದ ನಟ
ಗಿಲ್ಲಿ ನಟ

Updated on: Jan 24, 2026 | 7:35 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ (GillI Nata) ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಹೀಗಾಗಿ, ಅವರಿಗೆ ಕೆಲವು ಕಡೆಗಳಲ್ಲಿ ಅವರನ್ನು ಉದ್ಘಾಟನೆಗೆ ಕರೆಯಲಾಗುತ್ತಿದೆ. ಚಿನ್ನದ ಶಾಪ್ ಒಂದರ ಉದ್ಘಾಟನೆಗೆ ಗಿಲ್ಲಿ ನಟ ತೆರಳಿದ್ದರು. ಈ ವೇಳೆ ಅವರ ಮೇಲೆ ಸಾಕಷ್ಟು ಚಿನ್ನ ಹೇರಲಾಯಿತು. ನಂತರದ ಕಥೆಯನ್ನು ಗಿಲ್ಲಿ ವಿವರಿಸಿದ್ದಾರೆ. ಆ ಚಿನ್ನ ನೋಡಿದ ಅವರು ತಮ್ಮದೇ ಎಂದುಕೊಂಡಿದ್ದರು.

ಶರವಣ ಒಡೆತನದ ಚಿನ್ನದ ಅಂಗಡಿ ಉದ್ಘಾಟನೆ ನಡೆದಿದೆ. ಗಿಲ್ಲಿ ನಟ ಅವರನನು ಉದ್ಘಾಟನೆಗೆ ಕರೆಸಲಾಗಿದೆ. ಈ ವೇಳೆ ಗಿಲ್ಲಿ ಅವರು ರಿಬ್ಬನ್ ಕತ್ತರಿಸಿ ಶಾಪ್ ಓಪನ್ ಮಾಡಿದರು. ಆ ಬಳಿಕ ಶರವಣ ಅವರು ಚಿನ್ನದ ಸರಗಳನ್ನು ಗಿಲ್ಲಿಗೆ ತೊಡಿಸಿದ್ದರು. ಅಷ್ಟೇ ಅಲ್ಲ, ಉಂಗುರಗಳನ್ನು ಕೂಡ ಹಾಕಿದರು. ಈ ವಿಡಿಯೋ ವೈರಲ್ ಆಗಿತ್ತು.

ಗಿಲ್ಲಿ ಸಾಮಾನ್ಯ ಜೀವನ ನಡೆಸುತ್ತಾ ಬಂದವರು. ಅವರು ಇಷ್ಟೊಂದು ಚಿನ್ನವನ್ನು ನೋಡಿಯೂ ಇರಲಿಲ್ಲ. ಹಾಗಿರುವಾಗ ದಪ್ಪನೆಯ ಚಿನ್ನದ ಹಾರಗಳೆಲ್ಲ ಇವರ ಕತ್ತೇರಿತ್ತು. ಶರವಣ ಅವರು ಒಂದೊಂದೇ ಚೈನ್​ ಹಾಗೂ ಉಂಗುರು ತೆಗೆದು ಗಿಲ್ಲಿಗೆ ತೊಡಿಸಿದ್ದರು. ಇದನ್ನು ನೋಡಿ ಗಿಲ್ಲಿ ಶಾಕ್ ಆಗಿದ್ದರು. ಅಷ್ಟೇ ಅಲ್ಲ, ಶರವಣಗೂ ಶಾಕ್ ಕೊಟ್ಟಿದ್ದರು. ‘ಈ ಚಿನ್ನ ನನಗೆ ಅಲ್ಲವ’ ಎಂದು ಪ್ರಶ್ನಿಸಿದ್ದರು ಗಿಲ್ಲಿ. ಹಾಗಾದರೆ ಶರವಣ ಅವರು ಈ ಚಿನ್ನವನ್ನು ಗಿಲ್ಲಿಗೆ ಕೊಟ್ರಾ?

ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ಗಿಲ್ಲಿ ಕೈಗೆ ಹಾಕುತ್ತಾ ಇದ್ದಿದ್ದು ಉಂಗುರುವಂತೆ. ಅಷ್ಟೊಂದು ಚಿನ್ನವನ್ನು ಅವರು ಹಾಕಿಯೇ ಇರಲಿಲ್ಲವಂತೆ. ಶರವಣ ಅವರು ಚಿನ್ನ ಹಾಕಿದ್ದು ನೋಡಿ ಅದು ತಮಗೇ ಇರಬಹುದು ಎಂದು ಅವರು ಭಾವಿಸಿದ್ದರಂತೆ. ‘ಏನಿದು ಕೇಳ್ತಾನೆ ಇಲ್ವಲ್ಲ. ಬಹುಶಃ ನನಗೆ ಇರಬಹುದು ಎಂದುಕೊಂಡು, ಚೈನ್​​ನ ಶರ್ಟ್ ಒಳಗೆ ಹಾಕಿಕೊಂಡೆ’ ಎಂದಿದ್ದಾರೆ ಗಿಲ್ಲಿ. ಆದರೆ, ಆ ಬಳಿಕ ಅಸಲಿ ವಿಷಯ ಗೊತ್ತಾಗಿದೆ. ಅವರು ಚಿನ್ನವನ್ನು ಹಿಂದಿರುಗಿಸಿದ್ದಾರೆ.

ಇದನ್ನೂ ಓದಿ: ಗಿಲ್ಲಿಗೆ ದಪ್ಪನೆಯ ಚಿನ್ನದ ಚೈನ್ ಗಿಫ್ಟ್ ಕೊಟ್ಟ ಶರವಣ?

ಈ ಮೊದಲು ಕಿಚ್ಚ ಸುದೀಪ್ ಅವರು ಶರವಣ ಅವರ ಚಿನ್ನದ ಶಾಪ್​​​ನ ಉದ್ಘಾಟನೆ ಮಾಡಲು ತೆರಳಿದ್ದರು. ಈ ವೇಳೆ ಅವರಿಗೂ ಶರವಣ ಅವರು ಚಿನ್ನ ಹಾಕಿದ್ದರು. ಈ ಮೊದಲಿನಿಂದಲೂ ಅವರು ಶಾಪ್ ಉದ್ಘಾಟನೆಗೆ ಬರೋ ಅತಿಥಿಗಳಿಗೆ ಈ ರೀತಿ ಉಂಗುರ ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.