ಗಿಲ್ಲಿ ಗೆದ್ರೆ ಕಾಲ ಕೆಳಗೆ ನುಗ್ತೀನಿ ಎಂದಿದ್ದ ಸತೀಶ್; ನುಡಿದಂತೆ ನಡೀತಾರಾ?

ಬಿಗ್ ಬಾಸ್ ಕನ್ನಡ 12ರ ವಿಜೇತರಾಗಿ ಗಿಲ್ಲಿ ಹೊರಹೊಮ್ಮಿದ್ದಾರೆ. ಗಿಲ್ಲಿ ಗೆಲ್ಲಬಾರದು ಎಂದು ಆಶಿಸಿದ್ದ ಸ್ಪರ್ಧಿ ಸತೀಶ್, ಒಂದು ವೇಳೆ ಗೆದ್ದರೆ ಅವರ ಕಾಲಿನಡಿಗೆ ನುಸುಳೋದಾಗಿ ಹೇಳಿದ್ದರು. 40 ಕೋಟಿಗೂ ಅಧಿಕ ಮತಗಳೊಂದಿಗೆ ಗಿಲ್ಲಿ ಗೆದ್ದಿರುವ ಕಾರಣ, ಸತೀಶ್ ತಮ್ಮ ಭರವಸೆಯನ್ನು ಹೇಗೆ ಈಡೇರಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಅವರ ಪ್ರತಿಕ್ರಿಯೆ ಈಗ ಎಲ್ಲರ ಗಮನ ಸೆಳೆದಿದೆ.

ಗಿಲ್ಲಿ ಗೆದ್ರೆ ಕಾಲ ಕೆಳಗೆ ನುಗ್ತೀನಿ ಎಂದಿದ್ದ ಸತೀಶ್; ನುಡಿದಂತೆ ನಡೀತಾರಾ?
ಗಿಲ್ಲಿ-ಸತೀಶ್

Updated on: Jan 19, 2026 | 1:13 PM

ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12 ) ಸ್ಪರ್ಧಿ ಸತೀಶ್ ಅವರು ಇದ್ದಿದ್ದು ಕೆಲವೇ ವಾರ. ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ. ಆದರೆ, ಬಿಗ್ ಬಾಸ್​​​ನಿಂದ ಹೊರ ಬಂದ ಬಳಿಕ ಅವರ ಹೆಸರು ಚರ್ಚೆ ಆಯಿತು. ಅವರನ್ನು ಎಲ್ಲರೂ ಟೀಕಿಸಿದರು. ಆದರೂ ಅವರು ಮಾತ್ರ ಇದಕ್ಕೆ ಹೆಚ್ಚು ತಲೆಕೆಡಸಿಕೊಳ್ಳಲೇ ಇಲ್ಲ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಸತೀಶ್ ಅವರು, ಗಿಲ್ಲಿ ಗೆಲ್ಲಬಾರದು ಎಂದು ಹಾರೈಸಿದ್ದರು. ಆದರೆ, ಅವರೇ ಗೆದ್ದಿದ್ದಾರೆ.

ಗಿಲ್ಲಿ ನಟ ಗೆಲ್ಲಲೇಬಾರದು ಎಂಬುದು ಸತೀಶ್ ಆಸೆ ಆಗಿತ್ತು. ರಕ್ಷಿತಾ ಶೆಟ್ಟಿ ಅಥವಾ ಅಶ್ವಿನಿ ಗೌಡ ಗೆಲ್ಲಬೇಕು ಎಂಬುದು ಅವರ ಕೋರಿಕೆ ಆಗಿತ್ತು. ಗಿಲ್ಲಿ ಎರಡನೇ ಸ್ಥಾನಕ್ಕೆ ಕಾಲಿಟ್ಟರೂ ಅದು ಸೋತಂತೆಯೇ ಎಂಬುದು ಸತೀಶ್ ಅಭಿಪ್ರಾಯ ಆಗಿತ್ತು. ‘ಗಿಲ್ಲಿ ಗೆದ್ದರೆ ಏನು’ ಎಂದು ಕೇಳಿದಾಗ, ‘ನಾನು ಅವರ ಕಾಲ ಕೆಳೆಗೆ ನುಗ್ತೀನಿ’ ಎಂದು ಹೇಳಿದ್ದರು ಸತೀಶ್.

ಈಗ ಗಿಲ್ಲಿ ನಟ ಭಾರೀ ಮತಗಳಿಂದ ಗೆದ್ದಾಗಿದೆ. 40 ಕೋಟಿಗೂ ಹೆಚ್ಚು ವೋಟ್ ಸಿಗೋದು ಎಂದರೆ ಅದು ಸಣ್ಣ ಮಾತೇ ಅಲ್ಲ. ಗಿಲ್ಲಿಗೆ ಈ ಅಭೂತಪೂರ್ವ ಗೆಲುವು ಟೀಕಾಕಾರರ ಮುಂದೆಯೇ ಸಿಕ್ಕಿದೆ ಎಂಬುದು ವಿಶೇಷ. ಹೀಗಾಗಿ, ಈ ಗೆಲುವಿನ ಬಳಿಕ ಸತೀಶ್ ಅವರು ಹೇಳಿದಂತೆ ನಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ

ಗಿಲ್ಲಿ ನಟ ಅವರ ಮೇಲೆ ಸತೀಶ್​​ಗೆ ಕೋಪ ಬರಲೂ ಒಂದು ಕಾರಣವೂ ಇತ್ತು. ಗಿಲ್ಲಿ ತುಂಬಾನೇ ಟಾರ್ಚರ್ ಕೊಟ್ಟಿದ್ದಾರೆ ಎಂಬುದು ಸತೀಶ್ ಅಭಿಪ್ರಾಯ. ಈ ಕಾರಣದಿಂದಲೇ ಗಿಲ್ಲಿ ನಟ ಅವರನ್ನು ದ್ವೇಷಿಸುತ್ತಾ ಬಂದರು. ಆ ಬಳಿಕ ಟೀಕೆ ಎದುರಿಸಬೇಕಾಯಿತು. ಈಗ ಅವರು ಗಿಲ್ಲಿ ಗೆಲುವನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:12 pm, Mon, 19 January 26